Kalika Chetarike : ಕಲಿಕಾ ಚೇತರಿಕೆ ಕನ್ನಡ

ಇತ್ತೀಚಿನ ದಿನಗಳಲ್ಲಿ ಕಲಿಕಾ ಚೇತರಿಕೆ ನಮ್ಮ ರಾಜ್ಯ ಸರ್ಕಾರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಂಡಿದೆ ಕೆಲವು ಮಕ್ಕಳಲ್ಲಿ ಕಲಿಕಾ ಅಂತರ ಉಂಟಾಗಿದೆ ಅದನ್ನು ಸರಿದೂಗಿಸಿಕೊಳ್ಳುವ ಉದ್ದೇಶದಿಂದ ನಮ್ಮ ಕರ್ನಾಟಕ ಸರ್ಕಾರ ಕಲಿಕಾ ಚೇತರಿಕೆ ಎಂಬ ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಇದರ ಪ್ರಕಾರ ನಮ್ಮ ಕರ್ನಾಟಕ ಸರ್ಕಾರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ರೀತಿಯ ತರಬೇತಿಯನ್ನ ನೀಡಲಾಗುತ್ತದೆ ಈ ಯೋಜನೆಯಲ್ಲಿ ಒಂದನೇ ತರಗತಿಯಿಂದ 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮದ ಮೂಲಕ ವಿಷಯವನ್ನು ತಿಳಿಸಲಾಗುತ್ತದೆ ಪುಸ್ತಕ ಪ್ರತ್ಯೇಕ ವಿದ್ಯಾಭ್ಯಾಸ ಇದಾಗಿದೆ.
ನಮಗೆಲ್ಲ ಗೊತ್ತಿದೆ 2020 21ನೇ ಸಾಲಿನಲ್ಲಿ ಹಲವು ಲಾಕ್ಡೌನ್ ಗಳ ಕಾರಣದಿಂದ ಹೆಚ್ಚಿನ ಶಾಲೆಗಳು ಮುಚ್ಚಿದವು ಈ ಕಾರಣದಿಂದಾಗಿ ಕೆಲವು ವಿದ್ಯಾರ್ಥಿಗಳು ಮಾತ್ರ ಆನ್ಲೈನ್ ಮುಖಾಂತರ ಶಿಕ್ಷಣವನ್ನ ಪಡೆದುಕೊಂಡರು ಕೇವಲ ಮೊಬೈಲ್ ಅಥವಾ ವಿಡಿಯೋ ಮುಖಾಂತರ ಪಾಠಗಳನ್ನು ಕೇಳಿ ತಿಳಿದುಕೊಳ್ಳುವಷ್ಟು ಸಾಮರ್ಥ್ಯ ಮಕ್ಕಳಲ್ಲಿ ಇರುವುದಿಲ್ಲ ಇದನ್ನ ಮನಗೊಂಡಿರುವ ನಮ್ಮ ಶಿಕ್ಷಣ ಇಲಾಖೆ ಇದನ್ನ ಸರಿದೂಗಿಸುವ ಉದ್ದೇಶದಿಂದ 2022 23ನೇ ಇಸ್ವಿಯಲ್ಲಿ ವಿಶೇಷ ಕಾರ್ಯಕ್ರಮ ಅಂದರೆ ಕಲಿಕಾ ಚೇತರಿಕೆ ವರ್ಷ ಎಂದು ಈಗಾಗಲೇ ಘೋಷಿಸಿದ್ದಾರೆ ರಾಜ್ಯದಾದ್ಯಂತ ಪುಸ್ತಕದ ಹೊರೆತು ಹೇಗೆಲ್ಲಾ ಮಕ್ಕಳಿಗೆ ಶಿಕ್ಷಣವನ್ನ ನೀಡಬಹುದು ಎಂಬುದನ್ನ ಸಂಪೂರ್ಣವಾಗಿ ಅಧ್ಯಯನ ಮಾಡಿ ಈ ಕ್ರಿಯೆಯನ್ನು ಜಾರಿಗೊಳಿಸಿದೆ.
ಪ್ರತಿ ತರಗತಿಯಲ್ಲಿರುವ ಮಕ್ಕಳಿಗೆ ಕೆಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಅದರ ಪ್ರಕಾರ ತರಬೇತಿಯನ್ನ ಮಕ್ಕಳಿಗೆ ನೀಡಲಾಗುತ್ತದೆ ಕೈಪಿಡಿ ಅಥವಾ ಶಿಕ್ಷಕರು ನೇರವಾಗಿ ಮಕ್ಕಳಿಗೆ ವಿಶೇಷ ತರಗತಿಗಳನ್ನ ನಡೆಸಿ ಪಾಠಗಳನ್ನು ಮಾಡುತ್ತಾರೆ ಇದರಲ್ಲಿ ಒಟ್ಟು ಸುಮಾರು 155 ಪುಟಗಳ ಕಲಿಕೆ ಅಧ್ಯಯನ ಒಳಗೊಂಡಿದೆ ಇದರಲ್ಲಿ ಬಹು ಮುಖ್ಯವಾಗಿ ಎರಡು ವರ್ಷಗಳಲ್ಲಿ ಮಗು ಏನೆಲ್ಲಾ ಕಲಿತಿಲ್ಲ ಅದನ್ನ ಒಳಗೊಂಡ ಸಂಪೂರ್ಣ ವಿಸ್ತೃತ ವಿಷಯಗಳನ್ನು 155 ಪುಟಗಳು ಒಳಗೊಂಡಿರುತ್ತದೆ ಅದನ್ನು ಶಿಕ್ಷಕರು ವಿಶೇಷ ತರಗತಿಗಳ ಮೂಲಕ ಮಕ್ಕಳಿಗೆ ಬೋಧನೆ ಮಾಡುತ್ತಾರೆ ಈಗಾಗಲೇ ಹಲವು ಶಾಲೆಗಳಲ್ಲಿ ಈ ರೀತಿಯ ತರಬೇತಿ ಪ್ರಾರಂಭವಾಗಿದೆ ಮೊದಲು ದಕ್ಷಿಣ ಕನ್ನಡದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಒಂದು ತರಗತಿಗೆ ಒಬ್ಬರು ಮುಖ್ಯ ಶಿಕ್ಷಕರನ್ನ ನೇಮಕ ಮಾಡಿ ತರಗತಿಗಳನ್ನ ಆರಂಭಿಸಿದ್ದಾರೆ.
ಮೊದಲಿಗೆ ಮಗುವಿಗೆ ಪರೀಕ್ಷೆ ಮುಖಾಂತರ ಎರಡು ವರ್ಷಗಳ ವಿದ್ಯಾಭ್ಯಾಸ ಎಷ್ಟು ಪರಿಣಾಮಕಾರಿಯಾಗಿ ಅರ್ಥವಾಗಿದೆ ಎಂಬುದನ್ನ ಶಿಕ್ಷಕರು ಮೌಲ್ಯಮಾಪನ ಮಾಡುತ್ತಾರೆ ಈ ಕುರಿತು ಶಿಕ್ಷಕರಿಗೆ ಈಗಾಗಲೇ ಹಲವಾರು ರೀತಿಯಲ್ಲಿ ನಮ್ಮ ಕರ್ನಾಟಕ ಸರ್ಕಾರ ತರಬೇತಿಯನ್ನ ನೀಡಲಾಗಿದೆ ಹಾಗಾಗಿ ಶಿಕ್ಷಕರು ಿಎಸ್ಇಆರ್‌ಟಿಯು ಎಂಬ ಪೋರ್ಟಲ್ ನಲ್ಲಿ ಪೂರ್ವಸಿದ್ಧತೆ ಕುರಿತು ಮೌಲ್ಯಮಾಪನ ಮಾಹಿತಿಯನ್ನು ನಮ್ಮ ಸರ್ಕಾರಕ್ಕೆ ನೀಡುತ್ತಾರೆ ಇನ್ನು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸೇತುಬಂಧ ಎಂಬ ಕಾರ್ಯಕ್ರಮ ನಡೆಯುತ್ತಿದೆ ಇದರ ಮುಖಾಂತರ ಹಲವು ಚಟುವಟಿಕೆಗಳನ್ನು ನಡೆಸಿ ಮೌಲ್ಯಮಾಪನ ಮಾಡಲಾಗುತ್ತದೆ.
ನಮ್ಮ ಸರ್ಕಾರಿ ಶಾಲೆಯಲ್ಲಿ ಇದುವರೆಗೆ ಒಂದರಿಂದ ಒಂಬತ್ತನೇ ತರಗತಿಯ ಶಾಲೆಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಅಂತವರಿಗೆಲ್ಲ ಈ ಪ್ರಯೋಜನ ದೊರಕುತ್ತದೆ ಇಷ್ಟೇ ಅಲ್ಲದೆ ಒಂದರಿಂದ ಮೂರನೇ ಕ್ಲಾಸಿನವರೆಗೆ ಅಕ್ಷರ ಎಂಬ ಹೊಸ ಕಾರ್ಯಕ್ರಮವನ್ನ ಸರ್ಕಾರ ರಚಿಸಿದೆ ಅದರ ಮುಖಾಂತರ ಹಲವು ಚಟುವಟಿಕೆಗಳನ್ನು ನಡೆಸಿ ಪಾಠ ಮಾಡಲಾಗುತ್ತದೆ. ಈ ವರ್ಷದ ಪರೀಕ್ಷೆಗಳು ಈಗಾಗಲೇ ಮುಗಿದಿವೆ ಮುಂದಿನ ವರ್ಷದ ಪರೀಕ್ಷೆ ಮುಗಿಯುವುದರ ಒಳಗಾಗಿ ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಮುಗಿಸಲಾಗುತ್ತದೆ ಹಾಗೂ ಇದರಿಂದ ಏನು ರಿಸಲ್ಟ್ ಬಂದಿದೆ ಎಂಬುದನ್ನು ಶಿಕ್ಷಕರು ಸರ್ಕಾರಕ್ಕೆ ರಿಪೋರ್ಟ್ ಕಾರ್ಡ್ ಮುಖಾಂತರ ತಿಳಿಸಲಿದ್ದಾರೆ ಈ ಕುರಿತು ಎಲ್ಲಾ ಶಿಕ್ಷಕರಿಗೂ ಸಹ ತರಬೇತಿಯನ್ನ 34 ಜಿಲ್ಲೆಗಳಲ್ಲೂ ಕನಿಷ್ಠ 220 ಶಿಕ್ಷಕರಿಗೆ ತರಬೇತಿಯನ್ನು ನೀಡಿದ್ದಾರೆ ರಾಜ್ಯಮಟ್ಟದಲ್ಲಿ ಕೆಲವರಿಗೆ ತರಬೇತಿಯನ್ನು ನೀಡಲಾಗಿದೆ ಅವರು ಪ್ರತಿ ಶಾಲೆಗಳಿಗೂ ಹೋಗಿ ಶಿಕ್ಷಕರಿಗೆ ಈ ಕುರಿತು ಹಲವು ವಿಷಯಗಳನ್ನು ತಾಲೂಕು ಮಟ್ಟದಲ್ಲಿ ಮುಂದುವರಿಸುತ್ತಾರೆ ಶಿಕ್ಷಕರು ಮಕ್ಕಳಿಗೆ ಏನೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಿ ಕಳೆದ ಎರಡು ವರ್ಷದಿಂದ ಯಾವ ತರಗತಿಗಳು ಅಥವಾ ಪಾಠ ಮುಗಿದಿಲ್ಲ ಎಂಬುದನ್ನ ಪರಿಗಣಿಸಿ ಕೂಲಂಕುಶವಾಗಿ ಈ ಶೈಕ್ಷಣಿಕ ವರ್ಷದಲ್ಲಿ ಏನೆಲ್ಲಾ ಕಲಿಕೆ ಹಿಂದುಳಿದಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮಕ್ಕಳಿಗೆ ನೀಡುತ್ತಾರೆ ಜೊತೆಗೆ ಎಕ್ಸಾಮಿನ ಮುಖಾಂತರ ಮಕ್ಕಳಿಗೆ ಏನೆಲ್ಲಾ ಅರ್ಥ ಆಗಿದೆ ಎಂಬುದನ್ನ ತಿಳಿದುಕೊಂಡು ರಿಪೋರ್ಟ್ ಕಾರ್ಡನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.

Kalika Chetarike in Kannada pdf
ಕಳೆದ ಎರಡು ವರ್ಷಗಳಲ್ಲಿ ಶಾಲೆಗಳು ಸರಿಯಾಗಿ ನಡೆದಿಲ್ಲ ಇದನ್ನ ಸರಿದೂಗಿಸುವ ಉದ್ದೇಶದಿಂದ ನಮ್ಮ ಸರ್ಕಾರ ಕಲಿಕಾ ಚೇತರಿಕೆ ಕನ್ನಡ ಎಂಬ ಪ್ರೋಗ್ರಾಮನ್ನ ನಮ್ಮ ಗೌರ್ನಮೆಂಟ್ ಶಾಲೆಗಳಲ್ಲಿ ರೂಪಿಸಿದೆ ಇದರ ಪ್ರಕಾರ ಮಕ್ಕಳಿಗೆ ಯಾವೆಲ್ಲ ಪಟ್ಟೆಗಳು ಸಂಪೂರ್ಣವಾಗಿ ಮುಗಿದಿಲ್ಲ ಹಿಂದುಳಿದಿವೆ ಅವನ್ನು ವಿಸ್ತೃತ ರೂಪದಲ್ಲಿ ಮಕ್ಕಳಿಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಶಿಕ್ಷಕರು ವಿಶೇಷ ತರಗತಿಗಳನ್ನ ನಡೆಸಿ ಈ ವರ್ಷ ಏನೆಲ್ಲಾ ವಿಷಯಗಳು ಶಾಲೆಗಳಲ್ಲಿ ನಡೆದಿಲ್ಲ ಅದನ್ನು ಸಂಪೂರ್ಣವಾಗಿ ಮಕ್ಕಳಿಗೆ ತಿಳಿಸುತ್ತಾರೆ ಜೊತೆಗೆ ವಿಶೇಷ ಎಕ್ಸಾಮ್ ನ ಮುಖಾಂತರ ಅದರ ರಿಪೋರ್ಟ್ ಕಾರ್ಡನ್ನು ಸಹ ತೆಗೆದುಕೊಂಡು ಸರ್ಕಾರಕ್ಕೆ ತಿಳಿಸಲಿದ್ದಾರೆ.