ಮನೆ ಆಯಾ ಅಳತೆಗಳು pdf download : ಮನೆ ಕಟ್ಟಲು ಈ ಅಂಶ ಖಂಡಿತ ಎಲ್ಲರೂ ಪಾಲಿಸಿ

ನೀವು ನಿಮ್ಮ ಹೊಸ ಮನೆ ಆಯಾ ಅಳತೆಗಳು pdf download ಮಾಡಿಕೊಳ್ಳಬೇಕು ಎಂಬ ಹುಡುಕಾಟದಲ್ಲಿದ್ದರೆ ಖಂಡಿತ ನಿಮಗೆ ಇಲ್ಲಿ ಅದರ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ. ನಾವೇನಾದರೂ ಹೊಸ ಮನೆಯನ್ನ ಕಟ್ಟಬೇಕು ಎಂದು ತೀರ್ಮಾನಿಸಿ ಅದಕ್ಕೆ ಬೇಕಾದ ಹಣವನ್ನು ಕುಡಿಸಿದ ಮೇಲೆ ಬಹುಮುಖ್ಯವಾಗಿ ಈ ಎಲ್ಲಾ ಅಂಶಗಳನ್ನು ಹುಡುಕಾಟ ನಡೆಸುತ್ತೇವೆ ಅದರಲ್ಲಿ ಮುಖ್ಯವಾದದ್ದು ಆಯಾ ನೋಡುವುದು ಹೇಗೆ ಮನೆ ಆಯದ ಅಳತೆ ಎಷ್ಟಿರಬೇಕು ಎಂಬುದನ್ನ ತಿಳಿದುಕೊಳ್ಳುತ್ತೇವೆ. ಕೆಲವರಂತೂ ಮನೆ ಬಾಗಿಲು ಯಾವ ದಿಕ್ಕಿಗೆ ಇರಬೇಕು ಬಚ್ಚಲಮನೆ ಅಡುಗೆ ಮನೆ ವರಂಡ ದೇವರ ಮನೆ ಹೀಗೆ ಮನೆಯ ಪ್ರಮುಖ ಅಂಗಗಳಾದ ಈ ಎಲ್ಲಾ ಸ್ಥಳಗಳು ಎಲ್ಲಿರಬೇಕು ಯಾವ ಜಾಗದಲ್ಲಿ ಇದ್ದರೆ ಸುಭಿಕ್ಷವಾಗಿರುತ್ತೆ ಎಂಬುದನ್ನ ಖಂಡಿತ ಹುಡುಕಾಟ ನಡೆಸುತ್ತೇವೆ. ನೀವು ಸ್ವತಃ ಮನೆ ಪ್ಲಾನ್ ಅನ್ನ ನಿರ್ಧರಿಸುವ ಬದಲು ಯಾವುದಾದರೂ ಸಿವಿಲ್ ಇಂಜಿನಿಯರ್ ನ ಸಹಾಯ ಪಡೆದು ಮನೆ ಹೇಗೆ ಕಟ್ಟಬೇಕು ಎಂಬ ಪ್ಲಾನ್ ಅನ್ನು ಪಡೆದುಕೊಂಡು ಮನೆ ಕಟ್ಟಲು ಪ್ರಾರಂಭಿಸಿದರೆ ತುಂಬಾ ಒಳ್ಳೆಯದು ಏಕೆಂದರೆ ಈಗಾಗಲೇ ಸರ್ಕಾರ ಒಂದು ಅದಿನಿಯಮವನ್ನ ಪಾಲಿಸಿದೆ ಅದರ ಪ್ರಕಾರ ಯಾರಾದರೂ ಮನೆ ಕಟ್ಟಬೇಕು ಅಂದರೆ ಸಿವಿಲ್ ಇಂಜಿನಿಯರ್ ನ ಮುಖಾಂತರವೇ ಮನೆಯ ಪ್ಲಾನ್ ಅನ್ನ ರೆಡಿ ಮಾಡಿಸಿಕೊಳ್ಳಬೇಕು ಇದು ಅತಿ ಮುಖ್ಯವಾದದ್ದು ಏಕೆಂದರೆ ಸಿವಿಲ್ ಇಂಜಿನಿಯರ್ ಮನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿರುತ್ತಾರೆ ಹಾಗಾಗಿ ಹೇಗೆಲ್ಲ ಸುರಕ್ಷಿತವಾಗಿ ಮನೆಯನ್ನು ಕಟ್ಟಬಹುದು ಎಂಬುದನ್ನ ಅವರೇ ನಿರ್ಧರಿಸಿ ತಿಳಿಸುತ್ತಾರೆ ಇವರ ಸಹಾಯವನ್ನ ಪಡೆಯದೆ ಯಾರಾದರೂ ತಾವೇ ಸ್ವತಃ ಮನೆಯ ಪ್ಲಾನ್ ಅನ್ನ ರೆಡಿ ಮಾಡಿ ಕಟ್ಟಲು ಹೋದರೆ ಹಲವು ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಕೇವಲ ನೀವು ಮಾತ್ರ ಅಲ್ಲದೆ ಬೇರೆಯವರಿಗೂ ಸಹ ತೊಂದರೆ ಉಂಟಾಗುತ್ತದೆ ಉದಾಹರಣೆಗೆ ಮನೆ ಬಿದ್ದು ಹೋಗಬಹುದು ಅಥವಾ ಚಾವಣಿ ಕುಸಿದು ಪಕ್ಕದ ಮನೆಯವರ ಮೇಲೆ ಬೀಳಬಹುದು ಈ ರೀತಿ ಆದಾಗ ಖಂಡಿತ ಬೇರೆಯವರ ಮೇಲೆ ತುಂಬಾ ಗಂಭೀರ ಪರಿಣಾಮ ಬೀರುವುದಲ್ಲದೆ ಹೆದರಿಕೆಯನ್ನು ಸಹ ಸಮಾಜದಲ್ಲಿ ಉಂಟುಮಾಡುತ್ತದೆ ಇವೆಲ್ಲವನ್ನ ದೂರ ಮಾಡಬೇಕು ಅಂದುಕೊಂಡರೆ ನೀವು ಮನೆ ಆಯಾ ಅಳತೆಗಳು pdf download ಮಾಡಿಕೊಂಡು ಮನೆ ಕಟ್ಟುವ ಬದಲು ಒಳ್ಳೆಯ ಸಿವಿಲ್ ಇಂಜಿನಿಯರ್ ನ ಸಹಾಯ ಪಡೆದು ಅವರ ಮುಖಾಂತರ ಪ್ಲಾನ್ ತೆಗೆದುಕೊಂಡು ನಿಮ್ಮ ಊರಿನಲ್ಲೇ ಹಲವು ಒಳ್ಳೆಯ ಸಿವಿಲ್ ಕಾಂಟ್ರಾಕ್ಟರ್ ಇದ್ದಾರೆ ಅವರ ಜೊತೆ ಕೂತು ಮಾತನಾಡಿ ಮನೆ ಕಟ್ಟಿಸಿದರೆ ಖಂಡಿತ ತುಂಬಾ ಒಳ್ಳೆಯದಾಗುತ್ತೆ.
ಕೆಲವರು ತಮ್ಮ ಮನೆಗೆ ತಾವೇ ಡಿಸೈನ್ ಮಾಡಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ತುಂಬಾ ವಿದ್ಯಾವಂತರೇ ಹೆಚ್ಚು ಅನಾಹುತವನ್ನು ಮಾಡಿಕೊಳ್ಳುತ್ತಾರೆ ಏಕೆಂದರೆ ಮನೆ ಕಟ್ಟುವಾಗ ಬಾಗಿಲು ಈಗ ಇರಬೇಕು ವಿಂಡೋ ಸಹ ಹೀಗೆ ನಿರ್ಮಿಸಬೇಕು ಮನೆಯ ಮುಂಭಾಗಲು ನಗರ ಪ್ರದೇಶಗಳಲ್ಲಿ ಪೂರ್ವ ಅಥವಾ ಪಶ್ಚಿಮಕ್ಕೆ ಇರಬೇಕು ಈ ರೀತಿ ಕಟ್ಟಿದಾಗ ಮಾತ್ರ ಒಳ್ಳೆಯ ಗಾಳಿ ಬೆಳಕು ನಿಮ್ಮ ಮನೆಗೆ ಸಿಗಲಿದೆ ಏಕೆಂದರೆ ತುಂಬಾ ಸಣ್ಣ ಜಾಗದಲ್ಲಿ ಹೆಚ್ಚಿನ ಜನರು ಮನೆಗಳನ್ನ ನಗರ ಪ್ರದೇಶಗಳಲ್ಲಿ ಕಟ್ಟುತ್ತಾರೆ ಈ ರೀತಿ ಕಟ್ಟುವುದರಿಂದ ಮನೆ ಬಾಗಿಲು ಪೂರ್ವಾ ಅಥವಾ ಪಶ್ಚಿಮಕ್ಕೆ ಇಲ್ಲದೆ ಹೋದರೆ ಗಾಳಿ ಹಾಗೂ ಬೆಳಕು ಮನೆಗೆ ಬರೋದಿಲ್ಲ ಈ ರೀತಿ ಆಗೋದ್ರಿಂದ ಮನೆಗೆ ಕೀಟಗಳ ಸಮಸ್ಯೆ ಉಂಟಾಗುತ್ತದೆ ನಿಮಗೆಲ್ಲಾ ಗೊತ್ತಿದೆ ನಮ್ಮ ಬೆಂಗಳೂರಿನಂತಹ ನಗರದಲ್ಲಿ ಎಷ್ಟು ಸಣ್ಣ ಜಾಗದಲ್ಲಿ ಮನೆಗಳನ್ನು ಕಟ್ಟುತ್ತಾರೆ ಎಂದು ಹಲವು ಮನೆಗಳಲ್ಲಿ ಲೈಟುಗಳ ಸಹಾಯವಿಲ್ಲದೆ ಮನೆಯಲ್ಲಿ ನಡೆದಾಡಲು ಖಂಡಿತ ಸಾಧ್ಯ ಆಗೋದಿಲ್ಲ ಅಷ್ಟೊಂದು ಕತ್ತಲೆ ಆವರಿಸಿರುತ್ತದೆ ಇಂತಹ ತೊಂದರೆಗಳಿಂದ ನೀವು ಪಾರಾಗಬೇಕು ಎಂದರೆ ಮನೆಯ ಮುಂಬಾಗಿಲನ್ನು ಪೂರ್ವಕ್ಕೆ ಕಟ್ಟಲೇಬೇಕು ಹಾಗೂ ಹೆಚ್ಚು ಕಿಟಕಿಗಳನ್ನ ಮನೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಕೆಲವು ಹೊಸ ಮನೆಗಳಲ್ಲಿ ನೀವು ಗಮನಿಸಿದರೆ ತಿಳಿಯುತ್ತೆ ಕಿಟಕಿಯ ಬಾಗಿಲುಗಳನ್ನ ಕ್ಲಾಸಿನಿಂದ ನಿರ್ಮಿಸಿರುತ್ತಾರೆ. ಈ ರೀತಿ ಮಾಡೋದ್ರಿಂದ ಕಿಟಕಿಯ ಬಾಗಿಲುಗಳು ಕ್ಲೋಸ್ ಆಗಿದ್ದರು ಸಹ ಮನೆಗೆ ಒಳ್ಳೆಯ ಬೆಳಕು ಸಿಗುತ್ತದೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸಿಗುವ ತಿಗಣೆ ಕಾಟ ಇರೋದಿಲ್ಲ ಹಾಗಾಗಿ ಹೆಚ್ಚು ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲ ಕಿಟಕಿಗಳನ್ನ ಮನೆಯಲ್ಲಿ ಇರಿಸುವುದು ತುಂಬಾ ಅಗತ್ಯ ಇದೆಲ್ಲಾ ಸಿವಿಲ್ ಇಂಜಿನಿಯರ್ ಗೆ ತುಂಬಾ ಚೆನ್ನಾಗಿ ಗೊತ್ತಿರುತ್ತೆ ಹಾಗಾಗಿ ನೀವು ಮನೆಯ ಪ್ಲಾನ್ ಅನ್ನ ಒಳ್ಳೆಯ ಇಂಜಿನಿಯರ್ ಸಹಾಯದಿಂದ ತೆಗೆದುಕೊಳ್ಳಿ ಹಾಗೂ ಮನೆಯನ್ನು ಕಟ್ಟಲು ಪ್ರಾರಂಭಿಸಿ.

ನಿಮ್ಮ ಹೊಸ ಮನೆ ಕಟ್ಟಿಸಲು ಮನೆ ಆಯಾ ಅಳತೆಗಳು pdf download ಇದ್ದರೆ ಸಾಕಾ?
ಕೇವಲ ಮನೆಯ ಆಯಾವನ್ನ ಚೆನ್ನಾಗಿ ಕಟ್ಟಿದರೆ ಸಾಕಾಗೋದಿಲ್ಲ ನಮ್ಮ ಪೂರ್ವಜರು ಮನೆಯ ಪಾಯವನ್ನ ಬಹಳ ಆಳವಾಗಿ ತೆಗೆದು ಕೆಲವು ದಿನಗಳವರೆಗೆ ನೀರಿನಲ್ಲಿ ಚೆನ್ನಾಗಿ ನೆನೆಸುತ್ತಿದ್ದರು ನೀವು ಮನೆ ಕಟ್ಟುವ ಪ್ರದೇಶದಲ್ಲಿ ಏನಾದರೂ ಗುಂಡಿಗಳಿದ್ದರೆ ಅವೆಲ್ಲಾ ಮುಚ್ಚಿ ಹೋಗುತ್ತೆ ಜೊತೆಗೆ ನಿಮಗೆಲ್ಲ ಗೊತ್ತಿದೆ ಹಳ್ಳಿ ಪ್ರದೇಶಗಳಲ್ಲಿ ಮರದ ಬೇರುಗಳು ಹಲವು ಮೀಟರ್ ಗಳವರೆಗೆ ಭೂಮಿಯ ಒಳಗೆ ಹೋಗಿರುತ್ತೆ ಒಂದು ಬಾರಿ ಮರವನ್ನು ಕಡಿದು ಹಾಕಿದ ನಂತರ ಬೇರುಗಳೆಲ್ಲ ಅಲ್ಲೇ ಇರುತ್ತೆ ಕೆಲವು ದಿನಗಳ ನಂತರ ಅದೆಲ್ಲ ಸತ್ತು ಹೋಗುತ್ತೆ ಈ ರೀತಿ ಆಗುವುದರಿಂದ ಕಂದಕಗಳು ಉಂಟಾಗುತ್ತೆ ನಮ್ಮ ಪೂರ್ವಜರು ಮನೆಯ ಪಾಯವನ್ನು ತೆಗೆದು ಹತ್ತರಿಂದ ಹದಿನೈದು ದಿನಗಳವರೆಗೆ ಹಾಗೆ ಬಿಡುತ್ತಿದ್ದರು ಅಕಸ್ಮಾತ್ ಏನಾದರೂ ಮನೆ ಭಯ ತೆಗೆದ ಜಾಗದಲ್ಲಿ ಮರದ ಬೇರು ಅಥವಾ ಕಂದಕಗಳು ಇದ್ದರೆ ನಮಗೆ ಹತ್ತರಿಂದ ಹದಿನೈದು ದಿನದ ಒಳಗೆ ತಿಳಿಯುತ್ತೆ ಈ ರೀತಿ ನೀರನ್ನ ನಮ್ಮ ಹೊಸ ಮನೆ ಕಟ್ಟುವ ಪಾಯದಲ್ಲಿ ಹಾಕಿದರೆ ಈ ರೀತಿ ಉಂಟಾಗುವ ಹಲವು ಸಮಸ್ಯೆಗಳಿಂದ ನೀವು ದೂರಾಗಬಹುದು.

ಮನೆ ಕಟ್ಟಲು ಬಳಸುವ ವಸ್ತುಗಳ ಮೇಲೆ ನಿಗಾ ಇಡುವುದು ಅವಶ್ಯ
ಕೆಲವರು ಹೆಚ್ಚು ಹಣ ಹಾಕಿ ಮನೆ ನಿರ್ಮಿಸಿಬಿಟ್ಟರೆ ಭವ್ಯವಾದ ಮನೆ ನಿರ್ಮಾಣವಾಗಿ ಬಿಡುತ್ತೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ಅದು ಖಂಡಿತ ತಪ್ಪು ನಿಮ್ಮ ಮನೆ ಉತ್ತಮ ಕ್ವಾಲಿಟಿಯಿಂದ ನಿರ್ಮಾಣವಾಗಬೇಕಾದರೆ ಮನೆಗೆ ಬಳಸುವ ಪ್ರತಿಯೊಂದು ವಸ್ತುವನ್ನು ಚೆನ್ನಾಗಿ ಪರೀಕ್ಷಿಸಿ ಬಳಸುವುದು ತುಂಬಾ ಅವಶ್ಯ ಉದಾಹರಣೆಗೆ ಮನೆ ಕಟ್ಟಲು ಬಳಸುವ ಕಾಂಕ್ರೀಟ್ ಮರಳು ಹಾಗೂ ನೀರನ್ನು ಒಂದು ಬಾರಿ ಲ್ಯಾಬೋರೇಟರಿಯಲ್ಲಿ ಪರೀಕ್ಷೆ ಮಾಡಿ ನಂತರವೇ ನೀವು ಮನೆ ಕಟ್ಟಲು ಬಳಸಬೇಕು ಜೊತೆಗೆ ನೀವು ಮನೆ ಕಟ್ಟಲು ನಿರ್ಧರಿಸಿರುವ ಜಾಗದ ಮಾಡಿಸುವುದು ಅವಶ್ಯ ಏಕೆಂದರೆ ನೀವು ಕಟ್ಟುವ ಮನೆಯ ಜಾಗದಲ್ಲಿ ನೀರು ಶುದ್ಧವಾಗಿಲ್ಲದೆ ಇರಬಹುದು ಇಂತಹ ಸಂದರ್ಭದಲ್ಲಿ ನೀವೇನಾದರೂ ಮನೆಯಲ್ಲಿ ಬೋರ್ವೆಲ್ ತೆಗೆಸಿದರೆ ಅಲ್ಲಿ ಸಿಗುವ ನೀರು ಕೆಮಿಕಲ್ ಯುಕ್ತವಾಗಿರುತ್ತದೆ ನೀವು ಬಳಸುವುದಿಲ್ಲ ಅಥವಾ ಕೆಮಿಕಲ್ ನೀರನ್ನು ಸಹ ನೀವು ಪ್ರತಿದಿನ ಬಳಸಲು ಸಾಧ್ಯವಿಲ್ಲ ಹಾಗಾಗಿ ನೀರಿನ ಸಮಸ್ಯೆ ಉಂಟಾಗಬಹುದು. ನೀವು ಮನೆ ಕಟ್ಟಲು ನಿರ್ಧರಿಸಿರುವ ಜಾಗದ ಸ್ವಲ್ಪ ಪ್ರಮಾಣದ ಮಣ್ಣು ಹಾಗೂ ನೀರನ್ನು ತೆಗೆದುಕೊಂಡು ಹೋಗಿ ಲ್ಯಾಬೋರೇಟರಿಗೆ ನೀಡಿ ಈ ರೀತಿ ಮಾಡುವುದರಿಂದ ಮನೆ ಕಟ್ಟಲು ಈ ಜಾಗ ಹಾಗೂ ಬಳಸಲು ನಿಮ್ಮ ಮನೆ ಜಾಗದಲ್ಲಿ ಇರುವ ನೀರು ಯೋಗ್ಯವ ಎಂಬುದನ್ನು ನಿಮಗೆ ಖಚಿತವಾಗಿ ತಿಳಿಸುತ್ತದೆ.

ಪ್ರತಿವಾರ ಸ್ವಲ್ಪ ಮನೆ ಕಟ್ಟಿಪೂರ್ಣವಾದ ಮೇಲೆ ಲ್ಯಾಬೋರೇಟರಿ ರಿಪೋರ್ಟನ್ನು ತೆಗೆದುಕೊಳ್ಳುವುದು ಅವಶ್ಯ
ಸ್ವಲ್ಪ ಹಂತದ ಮನೆ ನಿರ್ಮಾಣ ಆದ ಮೇಲೆ ನೀವು ಲ್ಯಾಬಿನ ಸಹಾಯ ಪಡೆದು ಈಗ ಕಟ್ಟಿರುವ ಕಟ್ಟಡದ ಕ್ವಾಲಿಟಿ ಹೇಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು ಈ ರೀತಿ ಮಾಡುವುದರಿಂದ ಒಳ್ಳೆಯ ಮನೆಯ ಕ್ವಾಲಿಟಿ ನಿಮಗೆ ಸಿಗುತ್ತದೆ ಹಾಗೂ ಮನೆಗೆ ಬಳಸುವ ಪದಾರ್ಥಗಳನ್ನು ಸಹ ಲ್ಯಾಬೋರೇಟರಿಯಲ್ಲಿ ಆಗಿಂದಾಗೆ ನೀವು ಚೆಕ್ ಮಾಡುವುದು ತುಂಬಾ ಅವಶ್ಯ ಇಲ್ಲವಾದಲ್ಲಿ ಮನೆ ಬೇಗನೆ ಬಿರುಕು ಬಿಡುತ್ತದೆ ಹಾಗೂ ಮನೆಯ ಗೋಡೆಗಳು ಉದುರಲು ಪ್ರಾರಂಭಿಸುತ್ತದೆ ಇನ್ನು ಮಳೆಗಾಲದಲ್ಲಿ ಮನೆ ಸೋರಿಕೆ ಸಹ ಉಂಟಾಗಬಹುದು ಇಂತಹ ಸಣ್ಣಪುಟ್ಟ ಸಮಸ್ಯೆಯಿಂದ ನೀವು ದೂರಾಗಬೇಕು ಎಂದರೆ ಖಂಡಿತ ಕ್ವಾಲಿಟಿಯ ಬಗ್ಗೆ ಗಮನಹರಿಸುವುದು ತುಂಬಾ ಅವಶ್ಯ. ಕೆಲವು ಮನೆಗಳು ನೀವು ಗಮನಿಸಿದರೆ ತಿಳಿಯುತ್ತೆ ಕೆಲವೇ ವರ್ಷಗಳಲ್ಲಿ ಬಿದ್ದು ಹೋಗುತ್ತವೆ ಇದಕ್ಕೆ ಮುಖ್ಯ ಕಾರಣ ಮನೆಯ ಕ್ವಾಲಿಟಿ ತುಂಬಾ ಕಡಿಮೆ ಇರುತ್ತದೆ ಮನೆ ಕಟ್ಟಲು ಬಳಸಿದ ವಸ್ತುಗಳು ಅಷ್ಟೊಂದು ಚೆನ್ನಾಗಿರೋದಿಲ್ಲ ಈ ಕಾರಣಕ್ಕಾಗಿಯೇ ಹೊಸದಾಗಿ ಕಟ್ಟಿದ ಮನೆಗಳು ಆಯಸ್ಸು ಪೂರ್ಣಗೊಳ್ಳುವ ಮುಂಚೆಯೇ ಬಿದ್ದು ಹೋಗಿಬಿಡುತ್ತವೆ. ನೀವು ಮನೆ ಕಟ್ಟುವಾಗ ಅಕಸ್ಮಾತಾಗಿ ಏನಾದರೂ ಉಪ್ಪು ನೀರನ್ನ ಬಳಕೆ ಮಾಡಿದರೆ ಮನೆಯ ಗೋಡೆ ಬಿರುಕು ಬಿಡುತ್ತದೆ ಹಾಗೂ ಉದುರಲ್ಲೂ ಸಹ ಆರಂಭಿಸುತ್ತದೆ ಸ್ವಲ್ಪ ವರ್ಷಗಳ ನಂತರ ಮನೆ ಬಿದ್ದು ಸಹ ಹೋಗಬಹುದು ಇಂತಹ ಸಂದರ್ಭಗಳನ್ನ ನೀವು ತಪ್ಪಿಸಿಕೊಳ್ಳಬೇಕು ಎಂದರೆ ಮನೆ ಕಟ್ಟುವ ಮೊದಲೇ ಇಂತಹ ವಸ್ತುಗಳ ಚಕಪ್ ಮಾಡುವುದು ತುಂಬಾ ಅವಶ್ಯ.