27 ನಕ್ಷತ್ರ ಮತ್ತು ಹೆಸರುಗಳು - ಗಂಡು ಹಾಗೂ ಹೆಣ್ಣಿನ ಮದುವೆಗೂ ಮುಂಚೆ ತಿಳಿಯಲೇಬೇಕಾದ ವಿಷಯ

ನಾವು ಮಗು ಹುಟ್ಟಿದ ದಿನ ನಕ್ಷತ್ರ ಮತ್ತು ಹೆಸರುಗಳು ಯಾವೆಲ್ಲ ಹೊಂದಾಣಿಕೆಯಾಗುತ್ತವೆ ಮಗುವಿಗೆ ಎಂದು ಜಾತಕವನ್ನು ನೋಡಿಸುತ್ತೇವೆ ಇದು ಪ್ರತಿಯೊಬ್ಬರ ಮನೆಯಲ್ಲೂ ನಡೆಯುವ ಒಂದು ಕ್ರಿಯೆ, ನಮಗೆ ಗೊತ್ತಿರುವ ಹಾಗೆ ಒಟ್ಟು 27 ನಕ್ಷತ್ರಗಳ ಹೆಸರು ಇದೆ ಅದರಲ್ಲಿ ಯಾವುದು ನಮ್ಮ ಮಗುವಿಗೆ ಬಂದಿದೆ ಎಂಬುದನ್ನು ಜನ್ಮ ಕುಂಡಲಿಯನ್ನು ನೋಡಿಸಿ ತಿಳಿದುಕೊಳ್ಳುತ್ತಾರೆ ಪೋಷಕರು ರೀತಿ ಏಕೆ ಮಾಡುತ್ತಾರೆ ಎಂದರೆ ನಮ್ಮ ಮಗುವಿನ ಜೀವನ ಮುಂದೆ ಹೇಗೆ ನಡೆಯುತ್ತೆ ಹಾಗೂ ಮುಂದೇನಾದರೂ ತೊಂದರೆಗಳು ಉಂಟಾಗುತ್ತವೆ ಎಂಬುದನ್ನ ತಿಳಿದುಕೊಂಡು ಅದನ್ನು ಸರಿಪಡಿಸಿಕೊಳ್ಳುವಲ್ಲಿ ನಕ್ಷತ್ರ ಹಾಗೂ ರಾಶಿ ತುಂಬಾ ಸಹಕಾರಿಯಾಗಿದೆ. ನಕ್ಷತ್ರ ಹಾಗೂ ರಾಶಿ ಮಗು ಹುಟ್ಟಿದ ದಿನ ಹಾಗೂ ಸಮಯದ ಮೇಲೆ ನಿರ್ಧಾರವಾಗುತ್ತದೆ ಒಟ್ಟು 24 ನಕ್ಷತ್ರಗಳಿವೆ ಅದಕ್ಕೆ ಒಬ್ಬ ಅಧಿಪತಿ ಇರುತಾನೆ ಹಾಗೆ ಪ್ರತಿ ನಕ್ಷತ್ರದಲ್ಲೂ ನಾಲ್ಕು ಪಾದಗಳು ಕಂಡುಬರುತ್ತವೆ, ಒಂದೊಂದು ನಕ್ಷತ್ರಕ್ಕೂ ಸಹ ಒಂದು ಪ್ರಾಣಿಯಿಂದ ಗುರುತಿಸಲು ಕೊಡುತ್ತದೆ ಹೀಗೆ ನಕ್ಷತ್ರದಲ್ಲಿ ಹುಟ್ಟಿರುವ ಮಗು ಪ್ರಾಣಿಯ ಕೆಲವು ಅಂಶಗಳನ್ನು ಒಳಗೊಂಡಿರುತ್ತದೆ ಎಂಬುದು ನಮ್ಮ ಪೂರ್ವಜರ ನಂಬಿಕೆ ಆಗಿರುವುದರಿಂದ ನಾವು ನಂಬಬಹುದು ನಮ್ಮ ಮಗುವಿನ ಹಾವಭಾವಗಳು ಪ್ರಾಣಿಯಂತೆ ಇರುತ್ತವೆ ಎಂದು.


ಯಾವ ನಕ್ಷತ್ರಗಳು ಯಾವ ಪ್ರಾಣಿಯ ಹೆಸರನ್ನು ಹಿಡಿದು ಕರೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ

ಅಷ್ವಿನಿ ನಕ್ಷತ್ರ = ಕೇತು = ಗಂಡು ಕುದುರೆ

ಕೃತಿಕಾ ನಕ್ಷತ್ರ = ಸೂರ್ಯ= ಹೆಣ್ಣು ಮೇಕೆ

ಮೃಗಶಿರ = ಕುಜ = ಸರ್ಪ

ಪುನರ್ವಸು = ಗುರು = ಬೆಕ್ಕು

ಆಶ್ಲೇಷ = ಬುಧ = ಬೆಕ್ಕು

ಪೂರ್ವಫಾಲ್ಗುಣಿ = ಶುಕ್ರ = ಇಲಿ

ಹಸ್ತ = ಚಂದ್ರ = ಎಮ್ಮೆ

ಸ್ವಾತಿ = ರಾಹು = ಎಮ್ಮೆ

ಅನುರಾಧ = ಶನಿ = ಜಿಂಕೆ

ಮೂಲ = ಕೇತು = ನಾಯಿ

ಉತ್ತರಾಷಾಡ = ಸೂರ್ಯ = ಮುಂಗುಸಿ

ಧನಿಷ್ಠ = ಕುಜ = ಹೆಣ್ಣು ಸಿಂಹ

ಪೂರ್ವಭಾದ್ರಪದ = ಗುರು = ಗಂಡು ಸಿಂಹ

ಉತ್ತರಭಾದ್ರಪದ = ಶನಿ = ಹಸು

ರೇವತಿ = ಬುಧ = ಹೆಣ್ಣು ಆನೆ

ಭರಣಿ ನಕ್ಷತ್ರ = ಶುಕ್ರ = ಗಂಡು ಆನೆ

ರೋಹಿಣಿ = ಚಂದ್ರ = ಸರ್ಪ

ಅರಿದ್ರ = ರಾಹು = ನಾಯಿ

ಪುಷ್ಯ-ಶನಿ-ಗಂಡು ಮೇಕೆ

ಮಘಾ = ಕೇತು = ಇಲಿ

ಉತ್ತರಫಾಲ್ಗುಣಿ = ಸೂರ್ಯ = ಗೂಳಿ

ಚಿತ್ರ = ಕುಜ = ಹುಲಿ

ವಿಶಾಖ = ಗುರು = ಹುಲಿ

ಜ್ಯೇಷ್ಠ = ಬುಧ = ಜಿಂಕೆ

ಪೂರ್ವಾಷಾಡ = ಶುಕ್ರ = ಕೋತಿ

ಶ್ರವಣ = ಚಂದ್ರ = ಕೋತಿ

ಶತಭಿಷ = ರಾಹು = ಹೆಣ್ಣು ಕುದುರೆ


ನಮ್ಮ ಪೂರ್ವಜರು ಬಹಳ ಕಾಲದಿಂದಲೂ ಜಾತಕವನ್ನು ನಂಬುತ್ತಾ ಬಂದಿದ್ದಾರೆ ಹಾಗಾಗಿ ನವ ವಧು ವರರ ಮದುವೆಯಾಗುವ ಸಂದರ್ಭದಲ್ಲಿ ಗಂಡು ಹಾಗೂ ಹೆಣ್ಣಿನ ಜಾತಕ ಹಾಗೂ ನಕ್ಷತ್ರವನ್ನು ನೋಡುತ್ತಾರೆ ಅಕಸ್ಮಾತ್ ಜಾತಕ ಕೂಡಿ ಬಂದರೆ ಮಾತ್ರ ಮುಂದೆ ಮದುವೆಯನ್ನ ಮಾಡಲು ಮುಂದಾಗುತ್ತಾರೆ ಇಲ್ಲವಾದಲ್ಲಿ ಜೀವನದಲ್ಲಿ ತುಂಬಾ ನೋವನ್ನ ಅನುಭವಿಸಬೇಕಾಗುತ್ತದೆ ಎಂಬುದು ನಮ್ಮ ನಂಬಿಕೆಯಾಗಿದೆ ಕೆಲವು ನಕ್ಷತ್ರ ರಾಶಿಯವರು ಮದುವೆ ಆಗಬಾರದು ಎಂದು ನಮಗೆ ತಿಳಿದಿದೆ ಉದಾಹರಣೆಗೆ ಈ ಕೆಳಗೆ ನಾವು ಕೆಲವೊಂದು ರಾಶಿ ನಕ್ಷತ್ರಗಳು ಹೊಂದಿರುವ ವಧು-ವರರು ಮದುವೆಯಾಗಬಾರದು ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳಿ.

ಹಸು = ಹುಲಿ

ಆನೆ = ಸಿಂಹ

ಕುದುರೆ = ಎಮ್ಮೆ

ಹಾವು = ಮುಂಗುಸಿ

ನಾಯಿ = ಬೆಕ್ಕು

ಬೆಕ್ಕು = ಇಲಿ

ಕೋತಿ = ಮೇಕೆ

ಈ ರೀತಿ ನಮ್ಮ ಪೂರ್ವಜರು ಕೆಲವು ರಾಶಿ ನಕ್ಷತ್ರದವರು ಮದುವೆಯಾಗಬಾರದು ಈ ರೀತಿ ಮದುವೆಯಾದವರಿಗೆ ತುಂಬಾ ತೊಂದರೆಗಳು ಉಂಟಾಗುತ್ತವೆ ಏಕೆಂದರೆ ನಿಮಗೆಲ್ಲ ಗೊತ್ತಿದೆ ಕೆಲವು ಪ್ರಾಣಿಗಳಿಗೆ ಒಂದನ್ನ ಕಂಡರೆ ಇನ್ನೊಂದು ಆಗುವುದಿಲ್ಲ ಉದಾಹರಣೆಗೆ ಹಸು ಹಾಗೂ ಹುಲಿ ಮತ್ತೊಂದು ಉದಾಹರಣೆ ನಮಗೆ ಸಾಮಾನ್ಯವಾಗಿ ಸಿಗುವಂತದ್ದು ಬೆಕ್ಕು ಹಾಗೂ ಇಲಿ. ಈ ರೀತಿ ರಾಶಿ ನಕ್ಷತ್ರ ಹೊಂದಿರುವವರು ಮದುವೆಯಾದರೆ ಜೀವನದಲ್ಲಿ ಸುಖಕರವಾಗಿರುವುದಿಲ್ಲ ಒಬ್ಬರನ್ನೊಬ್ಬರು ಇಷ್ಟಪಡದೆ ಕಿತ್ತಾಡಿಕೊಳ್ಳುತ್ತಾರೆ ಮುಂದೆ ವಿವಾಹ ಡೈವರ್ಸ್ ಗು ಸಹ ಹೋಗಬಹುದು ಎಂದು ನಮ್ಮ ಪೂರ್ವಜರು ಬಹಳ ಹಿಂದೆ ತಿಳಿಸಿದರು.

ನಿಮ್ಮ ಗಮನಕ್ಕೆ ನಾವು ಒಂದು ವಿಷಯ ತರಲು ಇಷ್ಟಪಡುತ್ತೇವೆ ಅದೇನೆಂದರೆ ಕೇವಲ ನಕ್ಷತ್ರ ಮತ್ತು ಹೆಸರುಗಳು ನೋಡಿ ಮದುವೆ ಮಾಡುವುದು ತುಂಬಾ ತಪ್ಪು ಗಂಡು ಹೆಣ್ಣು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುತ್ತಾರೆ ಎಂಬುದನ್ನು ಖಂಡಿತ ಎಲ್ಲರೂ ಪರಿಗಣಿಸಲೇಬೇಕು ಇಲ್ಲವಾದಲ್ಲಿ ಮದುವೆಯಾದ ನಂತರ ಒಬ್ಬರ ನಡುವೆ ಇನ್ನೊಬ್ಬರಿಗೆ ಹೊಂದಾಣಿಕೆಯ ಸಮಸ್ಯೆ ಆಗುತ್ತೆ ಈ ರೀತಿ ಹೊಂದಾಣಿಕೆ ಆಗದೆ ಸಂತೋಷಕರ ಜೀವನವನ್ನು ನಡೆಸಲು ಖಂಡಿತ ಸಾಧ್ಯ ಆಗೋದಿಲ್ಲ ಮುಂದೆ ಡೈವರ್ಸ್ ಆಗುವ ಸಂದರ್ಭಗಳು ಹೆಚ್ಚಾಗಿರುತ್ತವೆ ಇತ್ತೀಚಿನ ದಿನದಲ್ಲಿ ನೀವು ಗಮನಿಸಿದರೆ ಮದುವೆಯಾದ ಕೆಲವೇ ತಿಂಗಳಲ್ಲಿ ವಿರಸ ಉಂಟಾಗುತ್ತೆ ನಂತರ ಕೋರ್ಟ್ ನಲ್ಲಿ ಡೈವರ್ಸ್ ಗೆ ಅಪ್ಲಿಕೇಶನ್ ಹಾಕುತ್ತಾರೆ ಇದು ಈಗ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿದೆ ಇದಕ್ಕೆ ಮುಖ್ಯ ಕಾರಣ ಗಂಡು ಹಾಗೂ ಹೆಣ್ಣು ಇಬ್ಬರೂ ಸಹ ಕೆಲಸಕ್ಕೆ ಹೋಗುತ್ತಾರೆ ಕೆಲಸದ ಜೊತೆ ಹೆಣ್ಣು ಮಕ್ಕಳು ಮಾತ್ರ ಮನೆಯ ಕೆಲಸಗಳನ್ನ ನೋಡಿಕೊಳ್ಳುತ್ತಾರೆ ಹಾಗಾಗಿ ಅವರಿಗೆ ಹೆಚ್ಚಿನ ಸಮಯದ ಅಭಾವ ಉಂಟಾಗುತ್ತೆ ತುಂಬಾ ಹೆಚ್ಚಾಗಿರುತ್ತೆ ಈ ಕಾರಣದಿಂದಾಗಿ ಕಂಪನಿಗಳಲ್ಲಿ ಕೆಲಸ ಮಾಡಲು ಆಗುವುದಿಲ್ಲ ಹಾಗಾಗಿ ಮನೆಯಲ್ಲಿ ಮನಸ್ತಾಪ ಜಗಳಗಳು ಉಂಟಾಗುತ್ತವೆ, ಈ ಕಾರಣದಿಂದಾಗಿಯೇ ಗಂಡು ಹಾಗೂ ಹೆಣ್ಣು ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು ಇಲ್ಲವಾದಲ್ಲಿ ತುಂಬಾ ತೊಂದರೆಗೆ ಒಳಗಾಗಬೇಕಾಗುತ್ತದೆ.


ಕೇವಲ ನಕ್ಷತ್ರ ಮತ್ತು ಹೆಸರುಗಳು ನೋಡಿ ಮದುವೆ ಮಾಡಿಸುವುದನ್ನು ನಿಲ್ಲಿಸಿ?

ಕೆಲಸದ ಒತ್ತಡ ಎಲ್ಲರನ್ನ ಕಾಡುತ್ತಿದೆ ಹಾಗಾಗಿ ಗಂಡು-ಹೆಣ್ಣು ಮದುವೆಯಾದ ಕೆಲವೇ ದಿನಗಳಲ್ಲಿ ಹಲವು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಈ ಕಾರಣದಿಂದಾಗಿಯೇ ಗಂಡು ಹಾಗೂ ಹೆಣ್ಣಿನ ನಡುವೆ ಜಗಳ ಉಂಟಾಗುತ್ತದೆ ಹೀಗಾಗಿಯೇ ಕೇವಲ ನಕ್ಷತ್ರ ಮತ್ತು ಹೆಸರುಗಳು ನೋಡಿ ಮದುವೆ ಮಾಡುವುದನ್ನು ಬಿಟ್ಟು ಗಂಡು ಹಾಗೂ ಹೆಣ್ಣು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುತ್ತಾರೆ ಎಂಬುದನ್ನ ನೋಡುವುದು ಕೂಡ ತುಂಬಾ ಅವಶ್ಯ.