ಪತ್ರಲೇಖನ ಎಂದರೇನು ? ಮತ್ತು ವಿಧಗಳು

ನಾವು ಇತ್ತೀಚಿನ ದಿನದಲ್ಲಿ ನೇರವಾಗಿ ಫೋನಿನ ಮುಖಾಂತರ ನಮ್ಮ ವಿಷಯಗಳನ್ನ ಹಂಚಿಕೊಳ್ಳುತ್ತೇವೆ ಇತ್ತೀಚಿನ ದಿನದಲ್ಲಿ ವಾಟ್ಸಪ್ ಎಂಬ ಅಪ್ಲಿಕೇಶನ್ ಸಹ ನಾವು ಬಳಸಿಕೊಂಡು ಹಲವಾರು ವಿಷಯಗಳನ್ನ ಪ್ರತಿದಿನ ಗೆಳೆಯರೊಂದಿಗೆ ಚರ್ಚಿಸುತ್ತೇವೆ ಆದರೆ ಬಹಳ ವರ್ಷಗಳ ಹಿಂದೆ ನಮ್ಮ ಮನೆಗೆ ಯಾವುದಾದರೂ ವಿಷಯವನ್ನ ತಿಳಿಸಬೇಕು ಅಂದುಕೊಂಡಿದ್ದರೆ ಪತ್ರಗಳ ಮುಖಾಂತರವೇ ಕೆಲಸ ನಡೆಯುತ್ತಿತ್ತು. ಇನ್ನೂ ನಮಗೆಲ್ಲಾ ಗೊತ್ತಿದೆ ಯಾವುದೇ ಕಚೇರಿಯಲ್ಲಿ ವಿಷಯಗಳ ವರ್ಗಾವಣೆ ಮಾಡಬೇಕು ಎಂದರೆ ಇತ್ತೀಚಿನ ದಿನದಲ್ಲೂ ಸಹ ಪತ್ರ ಮುಖಾಂತರವೇ ಎಲ್ಲಾ ನಡೆಯುತ್ತಿದೆ ಹಾಗಾಗಿ ನಿಮಗೆ ಗೊತ್ತಿಲ್ಲದೇ ಇರಬಹುದು ಈ ಉದ್ದೇಶದಿಂದ ನಾವು ಇಲ್ಲಿ ಪತ್ರವನ್ನು ಹೇಗೆ ಬರೆಯಬಹುದು ಎಂಬ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ.

ಪತ್ರ ಬರೆಯುವ ವಿಧಗಳು
ವೈಯುಕ್ತಿಕ ಹೋಗಿ ಬರೆಯುವ ಪತ್ರಗಳು ಮನವಿ ಮಾಡುವ ಪತ್ರಗಳು ಜಾಹೀರಾತುಗಳಿಗೆ ಸಂಬಂಧಿಸಿದ ಪತ್ರಗಳು ಪತ್ರಿಕ ವರದಿಗೆ ಸಂಬಂಧಿಸಿದ ಪತ್ರಗಳು ಆಡಳಿತ ಕುರಿತು ಬರೆದ ಪತ್ರಗಳು.

ಪತ್ರ ಬರೆಯಬೇಕಾದರೆ ಏನೆಲ್ಲಾ ಅತಿ ಮುಖ್ಯವಾಗಿ ಪತ್ರದಲ್ಲಿ ಇರಬೇಕು
  1. ಬಹು ಮುಖ್ಯವಾಗಿ ಪತ್ರದ ಪ್ರಾರಂಭದ ಭಾಗದಲ್ಲಿ ನಿಮ್ಮ ಹೆಸರು, ಅಡ್ರೆಸ್ ಹಾಗು ದಿನಾಂಕ ಇರಬೇಕು.
  2. ಎರಡನೇ ಭಾಗದಲ್ಲಿ ನೀವು ಯಾರಿಗೆ ಪತ್ರ ಬರೆಯುತ್ತಿದ್ದೀರಾ ಅವರ ಹೆಸರು, ಹುದ್ದೆ ನಮೂದಿಸಬೇಕು.
  3. ಮೂರನೇ ಭಾಗದಲ್ಲಿ ವಿಷಯ ಸಂಪೂರ್ಣವಾಗಿ ಅರ್ಥವಾಗುವಂತೆ ಸರಳ ಶೈಲಿಯಲ್ಲಿ ನೀವು ಬರೆಯಬೇಕಾಗುತ್ತದೆ.
  4. ಕೋರಿಕೆ ಪತ್ರವನ್ನು ಬರೆಯಬೇಕಾದರೆ ನೀವು ನಮಸ್ಕಾರ ಹಾರೈಕೆ ಸಂಬಂಧಿಸಿದ ಪದಗಳನ್ನು ನಮೂದಿಸಬೇಕು.
  5. ಪತ್ರವನ್ನು ಮುಗಿಸುವಾಗ ಕೊನೆಯಲ್ಲಿ ನಿಮ್ಮ ಸಹಿ ಖಂಡಿತ ಹಾಕಬೇಕು.
  6. ಪುತ್ರದ ಮೇಲೆ ನೀವು ಯಾರಿಗೆ ಪತ್ರವನ್ನು ಬರೆಯುತ್ತಿದ್ದೀರಾ ಅವರ ವಿಳಾಸವನ್ನ ಬೇರೆಯವರಿಗೆ ಅರ್ಥವಾಗುವಂತೆ ಬರೆಯಲೇಬೇಕು.
  7. ಅಡ್ರೆಸ್ ಬರೆಯುವಾಗ ನಿಮ್ಮ ಬರವಣಿಗೆ ಶುದ್ಧವಾಗಿರಲಿ, ಜೊತೆಗೆ ನಿಮ್ಮ ಅಡ್ರೆಸ್ ಸಹ ಬರೆಯಬೇಕು, ಅಕಸ್ಮಾತಾಗಿ ಲೆಟರ್ ಡೆಲಿವರಿ ಆಗದೆ ಹೋದರೆ ವಾಪಸ್ಸು ನಿಮಗೆ ಬಂದು ತಲುಪುತ್ತದೆ.

ಕೆಲವು ಸಂಭೋಧನೆಗಳು ಹೀಗಿವೆ
ತಂದೆಗೆ ಪತ್ರ ಬರೆಯಬೇಕಾದರೆ ತೀರ್ಥರೂಪ ಎಂದು ನೀವು ಬಳಸಬಹುದು ಅಕಸ್ಮಾತ್ ತಾಯಿಗೆ ಪತ್ರ ಬರೆಯುತ್ತಿದ್ದರೆ ಮಾತೃಶ್ರೀ ಎಂಬ ಪದವನ್ನು ಬಳಸಬಹುದು ನಿಮ್ಮ ಗುರುವಿಗೆ ಅಥವಾ ಹಿರಿಯರಿಗೆ ಪತ್ರ ಬರೆಯುತ್ತಿದ್ದರೆ ಪೂಜ್ಯ ಎಂಬ ಪದವನ್ನು ನೀವು ಬಳಸಬಹುದು ಕೆಲವರು ಗೆಳೆಯ ಹಾಗೂ ಗೆಳತಿಗೂ ಸಹ ಪತ್ರವನ್ನು ಬರೆಯುತ್ತಾರೆ ಅಂತವರು ಆತ್ಮೀಯ ಎಂಬ ಪದದೊಂದಿಗೆ ಪ್ರಾರಂಭಿಸಬಹುದು. ಇನ್ನು ಕೆಲವರು ಸಂಬಂಧಿಕರಿಗೆ ಪತ್ರಗಳನ್ನ ಬರೆಯುತ್ತಾರೆ ಅಂತವರು ತೀರ್ಥರೂಪ ಸಮಾನ ಮಾತೃಶ್ರೀ ಸಮಾನರಾದ ಎಂದು ಬಳಸಬಹುದು ಇನ್ನು ಕೆಲವರು ನಮಗಿಂತ ಕಿರಿಯವರಿಗೆ ಪತ್ರವನ್ನು ಬರೆಯುತ್ತಾರೆ ಅಂತವರು ಚಿರಂಜೀವಿ ಎಂಬ ಪದದೊಂದಿಗೆ ಪತ್ರವನ್ನು ಪ್ರಾರಂಭಿಸಬಹುದು.
ಹೀಗೆ ಹಲವು ವಿಧವಾಗಿ ಪತ್ರವನ್ನು ಬರೆಯಬಹುದು ಹಾಗಾಗಿ ಪತ್ರವನ್ನ ಪ್ರಾರಂಭಿಸುವಾಗ ಸೂಕ್ತವಾದ ಪದದೊಂದಿಗೆ ಪ್ರಾರಂಭಿಸುವುದು ತುಂಬಾ ಅವಶ್ಯ ದೊಡ್ಡವರಿಗೆ ಪತ್ರವನ್ನು ಬರೆಯುವಾಗ ಗೌರವಯುತ ಪದ ಬಳಸಿ ಪತ್ರ ಬರೆದರೆ ತುಂಬಾ ಚೆನ್ನಾಗಿರುತ್ತೆ.

ಪತ್ರಲೇಖನ ಎಂದರೇನು ಹಾಗೂ ಉದಾಹರಣೆ ತಿಳಿದುಕೊಳ್ಳಿ
ವಿನಂತಿ ಮಾಡಿ ಬರೆಯುವ ಪತ್ರ ಹೀಗಿರುತ್ತೆ

ಬೀದಿ ಬಳಿ ಇರುವ ದೀಪ ಹಾಕುವಂತೆ ಅಧಿಕಾರಿಗಳಿಗೆ ನೀವು ಪತ್ರ ಹೀಗೆ ಬರೆಯಬಹುದು

ಇಂದ
ಗೋಪಾಲ ಶಾಸ್ತ್ರಿ
ಹೆಬ್ಬಾಳ ನಾಲ್ಕನೇ ಕ್ರಾಸ್, ಎಸಿಎಸ್ ಲೇಔಟ್ 
ಹಸಿರು ವಿಲ್ಲ ನಾಲ್ಕನೇ ಮಹಡಿ, ಫ್ಲ್ಯಾಟ್ ನಂಬರ್ 5

ಇವರಿಗೆ
ಮಾನ್ಯ ಅಧ್ಯಕ್ಷರೇ
ಬಿಬಿಎಂಪಿ ಕಚೇರಿ ಹೆಬ್ಬಾಳ, ಹೆಬ್ಬಾಳ ತಾಲೂಕು 
ಬೆಂಗಳೂರು Urban ಡಿಸ್ಟ್ರಿಕ್ಟ್, ಬಿಬಿಎಂಪಿ ವಿಭಾಗ

ಮಾನ್ಯರೇ

ವಿಷಯ: ಬೀದಿ ದೀಪವನ್ನು ದಯವಿಟ್ಟು ಅಳವಡಿಸಿ ಕುರಿತು ಮನವಿ ಪತ್ರ
ನಮ್ಮ ಎಸಿಎಎಸ್ ಲೇಔಟ್ ನಲ್ಲಿ ರಾತ್ರಿಯ ವೇಳೆ ತುಂಬಾ ಕತ್ತಲೆ ಆವರಿಸುತ್ತೆ ಹೋರಾಡಲು ಆಗುತ್ತಿಲ್ಲ ಇಲ್ಲಿ ಬಹಳ ಜನ ರಾತ್ರಿ ಶಿಫ್ಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಅವರು ಕೆಲಸ ಮುಗಿಸಿ ವಾಪಸ್ ಬರುವಾಗ ತುಂಬಾ ತೊಂದರೆ ಉಂಟಾಗುತ್ತಿದೆ ಕೆಲವು ದಿನಗಳ ಹಿಂದೆ ಇಲ್ಲಿ ಹೊರಗಡೆ ನಿಲ್ಲಿಸಿದ್ದ ಬೈಕುಗಳ ಕಳವು ಸಹ ಆಗಿದೆ ಈ ಕಾರಣದಿಂದಾಗಿ ಮಾನ್ಯರೇ ದಯವಿಟ್ಟು ನೀವು ನಮ್ಮ ಹೆಬ್ಬಾಳ ಎಸಿಎಸ್ ಲೇಔಟ್ಗೆ ರಾತ್ರಿಯ ವೇಳೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ದಯಮಾಡಿ ಬೀದಿ ದೀಪವನ್ನು ಅಳವಡಿಸಬೇಕೆಂದು ನಾವು ಈ ಭಾಗದ ಜನರು ನಿಮ್ಮ ಬಳಿ ಕೋರಿಕೆ ಮಾಡಿಕೊಳ್ಳುತ್ತಿದ್ದೇವೆ ಹಾಗಾಗಿ ಆದಷ್ಟು ಬೇಗ ನಮಗೆ ಇಲ್ಲಿ ದಾರಿದೀಪದ ಸೌಲಭ್ಯವನ್ನು ನೀಡಿ ಎಂದು ಈ ಮೂಲಕ ನಾವೆಲ್ಲ ಕೇಳಿಕೊಳ್ಳುತ್ತೇವೆ. ಈ ಭಾಗದಲ್ಲಿ 5000ಕ್ಕೂ ಹೆಚ್ಚು ಮನೆಗಳಿವೆ ಕೆಲವು ರಸ್ತೆಗಳಲ್ಲಿ ಹೊಂಡಗಳು ಇವೆ ದಾರಿಯಲ್ಲಿ ಹಾದುಹೋಗುವಾಗ ಒಂದು ಕೆರೆ ಹಾಗೂ ಬೇಲಿಗಳು ಸಹ ಇವೆ ಇಲ್ಲಿ ಹಲವು ಬಾರಿ ಕೆಲವರು ಕಳ್ಳತನ ಸಹ ಮಾಡಿದ್ದಾರೆ ಹೆಂಗಸರು ರಾತ್ರಿಯ ವೇಳೆ ಓಡಾಡಲು ತುಂಬಾ ಹೆದರಿಕೆ ಆಗುತ್ತೆ ಈ ಪ್ರದೇಶದಲ್ಲಿ ಆದ್ದರಿಂದ ನೀವು ದಯಮಾಡಿ ಬಿಬಿಎಂಪಿ ವತಿಯಿಂದ ನಮಗೆ ದಾರಿದೀಪದ ವ್ಯವಸ್ಥೆ ಮಾಡಿ ಎಂದು ಈ ಮೂಲಕ ನಾವು ಕೇಳಿಕೊಳ್ಳುತ್ತೇವೆ ಧನ್ಯವಾದಗಳು.

ಇಂತಿ ತಮ್ಮ ವಿಶ್ವಾಸಿ

ಊರಿನ ಸಮಸ್ತ ಜನರು ಇಲ್ಲಿ ಪತ್ರಕ್ಕೆ ಸಹಿ ಹಾಕಿದ್ದಾರೆ ದಯವಿಟ್ಟು ಗಮನಿಸಿ.

ವ್ಯವಹಾರಿಕ ಪತ್ರ

ಬಿಬಿಎಂಪಿ ಪರಿಷತ್ತು ಇತ್ತೀಚಿಗೆ ಪ್ರಕಟಿಸಿದ ನಮ್ಮ ಕನ್ನಡದ 10 ನಿಘಂಟಿನ ಪುಸ್ತಕವನ್ನು ಕಳುಹಿಸಿ ಕೊಡುವಂತೆ ಬರೆದಿರುವ ಪತ್ರ ಹೀಗಿದೆ

ಇಂದ
ನವೀನ್
ಕೆಂಡ್ ಪಿಯುಸಿ ಗೌರ್ನಮೆಂಟ್ ಪ್ರೌಢಶಾಲೆ ಹೆಬ್ಬಾಳ
ಎಸಿಎಸ್ ಲೇಔಟ್ ಬೆಂಗಳೂರು

TO
ಮಾನ್ಯ ಕಾರ್ಯದರ್ಶಿ
ಬಿಬಿಎಂಪಿ ವಿಭಾಗ, ಹೆಬ್ಬಾಳ ಬೆಂಗಳೂರು
ಎಸಿಎಸ್ ಲೇಔಟ್

ಮಾನ್ಯರೇ

ವಿಷಯ: ನೀವು ಪ್ರಕಟಣೆ ಮಾಡಿದ ನಮ್ಮ ಕನ್ನಡದ ನಿಘಂಟನ ಪ್ರತಿಯನ್ನು ದಯವಿಟ್ಟು ಕಳುಹಿಸಿ ಕೊಡುವಂತೆ ಮನವಿ ಪತ್ರ.
ನಮ್ಮ ಕನ್ನಡದಲ್ಲಿ ಹಲವು ನಿಘಂಟಿನ ಪ್ರತಿಗಳು ಪ್ರಕಟಗೊಂಡಿವೆ ಆದರೆ ಇತ್ತೀಚಿಗೆ ನೀವು ಪ್ರಕಟಿಸಿದ ನಿಗಟ್ಟು ತುಂಬಾ ಚೆನ್ನಾಗಿದೆ ಎಂಬ ಮಾಹಿತಿ ನಾನು ಕೆಲವು ಜನರಿಂದ ತಿಳಿದುಕೊಂಡೆ ಹಾಗಾಗಿ ದಯಮಾಡಿ ನನಗೂ ಹಾಗೂ ನಮ್ಮ ಗೆಳೆಯರಿಗೂ ಸಹ ನಿಘಂಟಿನ ಅವಶ್ಯಕತೆ ತುಂಬಾ ಇದೆ ಹಾಗಾಗಿ ದಯವಿಟ್ಟು ಆದಷ್ಟು ಬೇಗ ನಮ್ಮ ವಿಳಾಸಕ್ಕೆ ಕನ್ನಡ ನಿಘಂಟನ್ನು ಕಳುಹಿಸಿಕೊಡಿ ಎಂದು ಈ ಮೂಲಕ ನಾನು ಹಾಗೂ ನಮ್ಮ ಗೆಳೆಯರು ಮನವಿ ಪತ್ರವನ್ನು ಬರೆಯುತ್ತಿದ್ದೇವೆ. ಪುಸ್ತಕಕ್ಕೆ ಆಗುವ ದುಡ್ಡನ್ನ ನಾವು check ನ ಮುಖಾಂತರ ಖಂಡಿತ ನಿಮಗೆ ಕಳುಹಿಸಿ ಕೊಡುತ್ತಿದ್ದೇವೆ ಹಾಗಾಗಿ ಆದಷ್ಟು ಬೇಗ ನಮ್ಮ ಎಕ್ಸಾಮ್ ಬರುವ ಒಳಗೆ ನಿಘಂಟನ್ನು ನಮಗೆ ತಲುಪುವಂತೆ ನೋಡಿಕೊಳ್ಳಿ ವಂದನೆಗಳು.

ಇಂತಿ ನಿಮ್ಮ ವಿದ್ಯಾರ್ಥಿ
ನವೀನ

ಇತ್ತೀಚಿನ ಮಕ್ಕಳು ಹೆಚ್ಚು ಪತ್ರ ವಹಿವಾಟು ನಡೆಸುವುದಿಲ್ಲ ಇದಕ್ಕೆ ಮುಖ್ಯ ಕಾರಣ ನಮ್ಮ ಬಳಿ ಇರುವ ಮೊಬೈಲ್ ಹಾಗೂ ಇಂಟರ್ನೆಟ್ ಏನಾದರೂ ಸಂದೇಶವನ್ನ ಕಳಿಸಬೇಕು ಎಂದರೆ ನಾವು ಮೆಸೇಜ್ ನ ಮುಖಾಂತರ ಕಳುಹಿಸುತ್ತೇವೆ ಹಾಗಾಗಿ ಬಹಳ ಸುಲಭವಾಗಿ ನಮ್ಮ ಮನಸ್ಸಿನಲ್ಲಿರುವ ಕೆಲವು ಅಂಶಗಳನ್ನು ಗೆಳೆಯ ಅಥವಾ ಗೆಳತಿಗೆ ತಿಳಿಸಬೇಕು ಎಂದರೆ ಮೊಬೈಲ್ ನಾವು ಮೆಸೇಜ್ ಕಳುಹಿಸುತ್ತೇವೆ. ಆದರೆ ಹಿಂದಿನ ಕಾಲದಲ್ಲಿ ಈ ರೀತಿ ನಡೆಯುತ್ತಿರಲಿಲ್ಲ ಪುತ್ರದ ಮುಖಾಂತರವೇ ಎಲ್ಲಾ ವಿಷಯಗಳು ನಡೆಯುತ್ತಿದ್ದವು ಕೆಲವು ಮಕ್ಕಳು ದೂರದ ಊರಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರು ಅಂಥವರು ಕೆಲವು ಮಾಹಿತಿಯನ್ನ ಪೋಷಕರಿಗೆ ತಿಳಿಸಬೇಕು ಅಂದುಕೊಂಡು ಪತ್ರವನ್ನು ಸಹ ಬರೆಯುತ್ತಿದ್ದರು ಅದು ತಲುಪಲು ವಾರಗಟ್ಟಲೆ ಹಿಡಿಯುತ್ತಿತ್ತು ತುಂಬಾ ಕಷ್ಟದ ದಿನಗಳು ಅವಾಗಿದ್ದವು, ಆದರೆ ಈಗ ಮೆಸೇಜ್ ಅಥವಾ ಇ-ಮೇಲ್ ನ ಮುಖಾಂತರ ಬಹಳ ಸುಲಭವಾಗಿ ನಮ್ಮ ಅನಿಸಿಕೆಯನ್ನ ಬೇರೆಯವರಿಗೆ ತಿಳಿಸಬಹುದು.