ನಾಳೆಯ ರಾಶಿ ಭವಿಷ್ಯ | Today's Horoscope Kannada

ನಾಳೆಯ ರಾಶಿ ಭವಿಷ್ಯ OR Today's Horoscope Kannada : ನಿಮ್ಮ ಮನೆಯಲ್ಲಿ ಜಗಳ ನಡೆಯುತ್ತೆ ನಿಮ್ಮ ಸಂಬಂಧವನ್ನು ಶಾಶ್ವತವಾಗಿ ಹಾಳು ಮಾಡು ಬಿಡುತ್ತೆ ನಿಮ್ಮ ಕೋಪ ಹಾಗಾಗಿ ಆದಷ್ಟು ಕೋಪವನ್ನ ನಿಯಂತ್ರಣ ದಲ್ಲಿಡಲು ಧ್ಯಾನ ಮಾಡಬೇಕು ಪ್ರತಿದಿನ ಇದ್ದ ತಕ್ಷಣ ದೇವರ ಧ್ಯಾನ ಮಾಡಿ ಆದಷ್ಟು ಕೋಪ ಕಡಿಮೆಯಾಗುತ್ತೆ.

ನಾಳೆಯ ಮೇಷ ರಾಶಿ ಭವಿಷ್ಯ
ಕೋಪ ಮೇಷ ರಾಶಿಯವರಿಗೆ ಬರಲು ಮುಖ್ಯ ಕಾರಣ ಹಲವು ಸಮಸ್ಯೆಗಳಿಂದ ನೀವು ಗೊಂದಲಕ್ಕೀಡ್ ಆಗಿದ್ದೀರಿ ಹಾಗಾಗಿ ನಿಮ್ಮ ಫ್ಯಾಮಿಲಿ ಜೊತೆ ಅದಕ್ಕೆ ಬೇಕಾದ ಪರಿಹಾರ ಮಾರ್ಗವನ್ನ ಚರ್ಚಿಸಿ ಹುಡುಕಿಕೊಳ್ಳಿ. ನೀವು ಪೂರ್ವ ಗೃಹ ಪೀಡಿತರಾಗಿ ಯಾರು ಏನು ತಪ್ಪು ಮಾಡದೆ ಇದ್ದರೂ ಸಹ ಅವರ ಮೇಲೆ ಕೋಪಗೊಂಡು ಜಗಳ ಮಾಡುತ್ತೀರಾ ಯಾರೆಲ್ಲಾ ಬಿಸ್ನೆಸ್ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಅವರಿಗೆ ಈ ಸಮಯ ತುಂಬಾ ಒಳ್ಳೆಯದು ಹೂಡಿಕೆ ಮಾಡಲು ಭವಿಸಿದ ನಿಮ್ಮ ಗುರಿಗಳು ನೆರವೇರಬೇಕಾದರೆ ನಿಮ್ಮಲ್ಲಿರುವ ಮಂಡತನ ಕೋಪವನ್ನು ಖಂಡಿತ ಕಡಿಮೆ ಮಾಡಿಕೊಳ್ಳಬೇಕು.. ಕಚೇರಿಯಲ್ಲಿ ಹೆಚ್ಚು ಕೆಲಸ ಇರುವ ಕಾರಣ ನೀವು ಆಫೀಸಿನಲ್ಲೇ ಹೆಚ್ಚು ಕಾಲವನ್ನು ಕಳೆಯುತ್ತೀರಿ ಹೀಗಾಗಿ ಫ್ಯಾಮಿಲಿಯವರು ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ ಇದನ್ನ ಕಡಿಮೆ ಮಾಡಿಕೊಳ್ಳಲು ನೀವು ಪರಿವಾರದೊಂದಿಗೆ ಕೂತು ಚರ್ಚಿಸಿ ಎಲ್ಲಾ ಒಳ್ಳೆಯದಾಗುತ್ತೆ ನಿಮ್ಮ ಅದೃಷ್ಟ ಸಂಖ್ಯೆ ಈ ವಾರ ಐದು ಹಾಗೂ ಅದೃಷ್ಟ ಬಣ್ಣ ಹಸಿರು ಆಗಿರುತ್ತದೆ. ನೀವು ದೈನಂದಿನ ಕೆಲಸದಲ್ಲಿ ಪ್ರಾಣಾಯಾಮ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ ಹಾಗಾಗಿ ಆದಷ್ಟು ಯೋಗಾಸನ ಮಾಡಲು ಪ್ರತಿದಿನ ಪ್ರಯತ್ನ ಪಡಿ.

ನಾಳೆಯ ವೃಷಭ ರಾಶಿ ಭವಿಷ್ಯ
ತುಂಬಾ ಮಾನಸಿಕವಾಗಿ ಕಿರಿಕಿರಿಯನ್ನ ನೀವು ಅನುಭವಿಸುತ್ತೀರಾ ಸ್ನೇಹಿತರು ನಿಮ್ಮ ಸಮಸ್ಯೆಯನ್ನು ಪರಿಹರಿಸುವುದಿಲ್ಲ ಒತ್ತಡ ಜೀವನ ನಿಮ್ಮದಾಗಿರುತ್ತದೆ ಈ ರೀತಿಯ ಒತ್ತಡವನ್ನು ದೂರ ಮಾಡಿಕೊಳ್ಳಲು ಸಂಗೀತದ ಮೊರೆಸಹ ನೀವು ಹೋಗಬಹುದು, ಸಹೋದರ ಅಥವಾ ಸಹೋದರಿಯರಿಂದ ನಿಮಗೆ ಆರ್ಥಿಕವಾಗಿ ಬೆಂಬಲ ಖಂಡಿತ ಸಿಗುತ್ತೆ ನಿಮ್ಮ ಸೋದರರ ಸಲಹೆಯನ್ನು ತೆಗೆದುಕೊಂಡು ಮುಂದುವರೆಯಿರಿ, ಆತುರದ ನಿರ್ಧಾರವನ್ನು ನೀವು ತೆಗೆದುಕೊಳ್ಳುತ್ತಿದ್ದೀರಿ ಆದರೆ ಈ ರೀತಿಯ ನಿರ್ಧಾರದಿಂದ ತುಂಬಾ ಕಷ್ಟವನ್ನ ಎದುರಿಸಬೇಕಾಗುತ್ತದೆ ಈ ಕಾರಣಕ್ಕಾಗಿ ಸ್ವಲ್ಪ ನಿಧಾನವಾಗಿ ಯೋಚಿಸಿ ಪ್ರತಿಯೊಂದು ನಿರ್ಧಾರವನ್ನು ಮಾಡಿ. ನಿಮ್ಮ ಜೀವನದಲ್ಲಿ ಸರಿಯಾದ ಗೆಳೆತನ ಸ್ನೇಹ ಇಲ್ಲದ ಕಾರಣ ತುಂಬಾ ಚಿಂತೆಯನ್ನು ಪಡುತ್ತೀರಾ ಯಾರೆಲ್ಲಾ ಪ್ರೀತಿಸಿ ಮದುವೆಯಾಗಬೇಕು ಅಂದುಕೊಂಡಿದ್ದಾರೆ ಅವರಿಗೆ ಖಂಡಿತ ಒಳ್ಳೆಯದಾಗುವುದಿಲ್ಲ ಜಾಗರೂಕತೆಯಿಂದ ಸಂಗಾತಿಯನ್ನು ನೀವು ಹುಡುಕಿ ಏಕೆಂದರೆ ಆತುರದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಮುಂದಿನ ಜೀವನದಲ್ಲಿ ತುಂಬಾ ತೊಂದರೆಯನ್ನು ಉಂಟು ಮಾಡುತ್ತದೆ ನಿಮ್ಮ ಈ ಒಂದು ಸಣ್ಣ ತಪ್ಪಿನ ನಿರ್ಧಾರ ಈ ವಾರದ ಅದೃಷ್ಟ ಸಂಖ್ಯೆ ನಾಲಕ್ಕು ನಿಮ್ಮ ರಾಶಿಗೆ ಹಾಗೂ ಅದೃಷ್ಟ ಬಣ್ಣ ಬೂದು ಬಣ್ಣ. ಸಕಾರಾತ್ಮಕವಾಗಿ ನಿಮ್ಮ ಫ್ಯಾಮಿಲಿಯಿಂದ ಸಪೋರ್ಟ್ ಸಿಗಬೇಕಾದರೆ ನೀವು ನಿಮ್ಮ ಕೆಲಸ ಹಾಗೂ ನೀವು ಕೊಡುತ್ತಿರುವ ಕಷ್ಟವನ್ನೆಲ್ಲ ಫ್ಯಾಮಿಲಿಯ ಜೊತೆ ಕೂತು ಮಾತನಾಡಿ ಎಲ್ಲಾ ಬಗೆಹರಿಯುತ್ತೆ. ಪ್ರತಿದಿನ ಹಾಲು ಮಿಶ್ರಿತ ಸಕ್ಕರೆ ಕುಡಿಯುತ್ತಾ ಬನ್ನಿ ಎಲ್ಲ ಒಳ್ಳೆಯದಾಗುತ್ತೆ.

ನಾಳೆಯ ಮಿಥುನ ರಾಶಿ ಭವಿಷ್ಯ
ಕೆಲವರು ನಿಮ್ಮ ಮೇಲೆ ತುಂಬಾ ಪ್ರಭಾವ ಬೀರಿ ಕೆಲವು ನಿರ್ಧಾರಗಳನ್ನ ನೀವು ತೆಗೆದುಕೊಳ್ಳುತ್ತೀರಾ ಉದ್ವೇಗದಿಂದ ತೆಗೆದುಕೊಂಡ ನಿರ್ಧಾರದಿಂದ ಖಂಡಿತ ನಿಮಗೆ ಒಳ್ಳೆಯದಾಗುವುದಿಲ್ಲ ಹೀಗಾಗಿ ಚೆನ್ನಾಗಿ ಯೋಚನೆ ಮಾಡಿ ನೀವು ಮಾಡುತ್ತಿರುವ ನಿರ್ಧಾರ ಮುಂದೆ ಏನೆಲ್ಲಾ ಪ್ರಭಾವ ಬೀರಬಹುದು ತೊಂದರೆ ಆಗಬಹುದು ಎಂಬುದನ್ನ ಸಂಸಾರದೊಂದಿಗೆ ಕೂತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ ನಿಮ್ಮ ಫ್ಯಾಮಿಲಿಯವರು ಖಂಡಿತವಾಗಿ ನಿಮಗೆ ಬೇಕಾದ ಎಲ್ಲಾ ನೆರವನ್ನು ನೀಡುತ್ತಾರೆ ತಂದೆ ತಾಯಿಗಳ ಆಶೀರ್ವಾದ ನಿಮಗೆ ಬಹು ಮುಖ್ಯ ಹಾಗಾಗಿ ಕೇವಲ ಕಚೇರಿ ಕೆಲಸವನ್ನಷ್ಟೇ ಮಾಡುವುದರ ಜೊತೆಗೆ ಫ್ಯಾಮಿಲಿ ಜೊತೆಗೆ ಸಮಯ ಸಹ ನೀವು spend ಮಾಡಬೇಕು, ನಿಮ್ಮ ಸ್ನೇಹಿತರು ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣೀಕರ್ತರಾಗುತ್ತಾರೆ ಹಾಗಾಗಿ ಯಾವುದೇ ಕಾರಣಕ್ಕೂ ಹಣವನ್ನ ನೀಡಲು ಹೋಗಬೇಡಿ ಬೇರೆಯವರು ಹೇಳಿದ ಕೆಲಸವನ್ನ ಬಿಟ್ಟು ನಿಮಗೆ ನೆಚ್ಚಿನ ಕೆಲಸವನ್ನ ಮಾಡಲು ಪ್ರಯತ್ನಿಸಿ ಈ ರೀತಿ ಮಾಡುವುದರಿಂದ ಖಂಡಿತ ನಿಮಗೆ ಆರ್ಥಿಕವಾಗಿ ಹೆಚ್ಚು ಬೆಂಬಲ ಸಿಗುತ್ತೆ ಹಾಗೂ ಸಕ್ಸಸ್ ಕೂಡ ನಿಮ್ಮದಾಗುತ್ತೆ ಸಂಗಾತಿಯನ್ನು ಹುಡುಕುತ್ತಿರುವ ನಿಮಗೆ ಈ ವಾರ ಖಂಡಿತ ಒಳ್ಳೆಯ ಫ್ಯಾಮಿಲಿ ಹುಡುಗಿ ಸಿಗಲಿ, ನಿಮ್ಮ ಈ ವಾರದ ಅದೃಷ್ಟ ಸಂಖ್ಯೆ ಎರಡು ಹಾಗೂ ಅದೃಷ್ಟದ ಬಣ್ಣ ಬೆಳ್ಳಿ ಪ್ರತಿನಿತ್ಯ ದೇವರ ತಿಲಕವನ್ನು ಹಣೆಗೆ ಧರಿಸಿ ಇದು ಉತ್ತಮ ಆರೋಗ್ಯವಾಗಿಡಲು ಸಹಕರಿಸುತ್ತದೆ.

ನಾಳೆಯ ಕರ್ಕ ರಾಶಿ ಭವಿಷ್ಯ
ನೀವು ದೈಹಿಕವಾಗಿ ಬಲಾಢ್ಯರಿದ್ದೀರಿ ಹಾಗಾಗಿ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುವ ಕಾರಣ ಹೆಚ್ಚು ಸಮಯವನ್ನ ಸ್ಪೋರ್ಟ್ಸ್ ನಲ್ಲಿ ಕಲೆಯುತ್ತೀರಾ ಕರ್ಕ ರಾಶಿಯವರು ಹೆಚ್ಚು ಕೆಲಸ ನಿರ್ವಹಿಸುತ್ತಿದ್ದಾರೆ ಹಾಗಾಗಿ ಖಂಡಿತ ತುಂಬಾ ಲಾಭವನ್ನು ನೀವು ಪಡೆಯುತ್ತೀರಾ ಇನ್ನೂ ಯಾರೆಲ್ಲ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೆ ಸ್ವಲ್ಪ ಕಠಿಣ ಪರಿಶ್ರಮ ಪಡಬೇಕಾಗಿ ಬರುತ್ತೆ ತುಂಬಾ ಒತ್ತಡದ ಜೀವನ ನಿಮ್ಮದಾಗಿದ್ದರಿಂದ ಆಹಾರವನ್ನು ಸರಿಯಾದ ಸಮಯಕ್ಕೆ ನೀವು ಸೇವಿಸುವುದಿಲ್ಲ ಸ್ವಲ್ಪ ಆರೋಗ್ಯದ ಮೇಲೆ ಗಮನ ಇಟ್ಟು ಸರಿಯಾದ ಸಮಯಕ್ಕೆ ಆಹಾರವನ್ನು ತೆಗೆದುಕೊಳ್ಳಿ. ತಮ್ಮ ಸಹೋದ್ಯೋಗಿಗಳಿಂದ ಬಹಳ ಉಡುಗೊರೆಯನ್ನು ನೀವು ಪಡೆಯಲಿದ್ದೀರಿ ಯಾರೆಲ್ಲಾ ಸಂಗಾತಿಯ ಹುಡುಕಾಟದಲ್ಲಿದ್ದಾರೆ ಅವರಿಗೆ ತಮ್ಮಿಷ್ಟದಂತೆ ಹುಡುಗ ಅಥವಾ ಹುಡುಗಿ ಸಿಗಲಿದ್ದಾಳೆ ಯಾರೆಲ್ಲಾ ವಿದೇಶಿ ಪ್ರವೀಣ ಮಾಡಬೇಕು ಅಂದುಕೊಂಡಿರುವ ಬಹಳ ವರ್ಷಗಳ ಕನಸು ಈಗ ನನಸಾಗಲಿದೆ ನಿಮ್ಮ ಅದೃಷ್ಟದ ಬಣ್ಣ ಈ ವಾರ ಗುಲಾಬಿ ಹಾಗೂ ಅದೃಷ್ಟ ಸಂಖ್ಯೆ ಆರು.

ನಾಳೆಯ ಸಿಂಹ ರಾಶಿ ಭವಿಷ್ಯ
ನೀವು ಬಹಳ ಕಷ್ಟಪಟ್ಟು ಕೆಲಸ ಮಾಡಿದರು ನೀವು ಬಯಸುತ್ತಿರುವ ಸಕ್ಸಸ್ ನಿಮಗೆ ಸಿಗೋದಿಲ್ಲ ಸಕಾಲಕ್ಕೆ ಬಿಸಿನೆಸ್ ಮಾಡಲು ಹಣ ನಿಮ್ಮ ಬೆಂಬಲಕ್ಕೆ ಬರೋದಿಲ್ಲ ಈ ವಾರ ಬಹಳ ಪ್ರಯಾಣವನ್ನು ನೀವು ಮಾಡಲಿದ್ದೀರಿ ಹಾಗಾಗಿ ಹಣವು ಸಹ ಪೋಲಾಗಲಿದೆ ಮನೆಯವರ ಜೊತೆ ಕೆಲವು ಬಾರಿ ವಿವಾದಗಳು ಸಹ ಉಂಟಾಗುತ್ತೆ ಹಾಗಾಗಿ ಕೋಪವನ್ನ ಆದಷ್ಟು ಹತೋಟಿಯಲ್ಲಿಡಿ. ನೀವು ಬಹಳ ನಂಬಿರುವ ಸಹೋದರರು ನಿಮ್ಮ ಕಷ್ಟಕ್ಕೆ ಬರೋದಿಲ್ಲ ನಿಮ್ಮ ಪತ್ನಿ ಖಂಡಿತವಾಗಿಯೂ ನಿಮ್ಮ ನೆರವಿಗೆ ನಿಲ್ಲುತ್ತಾರೆ ಎಷ್ಟೇ ಕಷ್ಟ ಮಾನಸಿಕ ಒತ್ತಡ ಬಂದರು ಪತ್ನಿಯ ಜೊತೆ ಕೂತು ಬಗೆಹರಿಸಿಕೊಳ್ಳಿ ಇದರ ಹೊರತಾಗಿ ನೀವು ಮಾಡಬೇಕೆಂದಿರುವ ಸಣ್ಣಪುಟ್ಟ ಬುಸಿನೆಸ್ ಗಳು ಖಂಡಿತ ನೆರವೇರಲಿದೆ ಕಠಿಣ ಪರಿಶ್ರಮ ಕೊಟ್ಟು ತಮ್ಮ ಮೇಲೆ ನಂಬಿಕೆ ಇಟ್ಟು ಎಲ್ಲ ಕೆಲಸವನ್ನು ಪ್ರಾರಂಭಿಸಿ ಎಲ್ಲವೂ ಶಾಂತಿಯುತವಾಗಿ ನಡೆಯುತ್ತೆ ನಿಮ್ಮ ಈ ವಾರದ ಅದೃಷ್ಟ ಸಂಖ್ಯೆ 4 ಅದೃಷ್ಟ ಬಣ್ಣ ಕಂದು. ಮನೆಯಲ್ಲಿ ಇರುವ ಲಕ್ಷ್ಮಿ ವಿಗ್ರಹವನ್ನು ಪೂಜಿಸಿ ನಿಮ್ಮ ಕಷ್ಟಗಳನ್ನೆಲ್ಲ ಲಕ್ಷ್ಮಿ ಪರಿಹರಿಸಲಿದ್ದಾಳೆ.

ನಾಳೆಯ ಕನ್ಯಾ ರಾಶಿ ಭವಿಷ್ಯ
ಕನ್ಯಾ ರಾಶಿಯವರಿಗೆ Today's Horoscope Kannada ನಿಮ್ಮ ಬಲ ನಿಮಗೆ ಅರ್ಥವಾಗಿಲ್ಲ ಕಷ್ಟಪಟ್ಟು ತಮ್ಮ ಮೇಲೆ ನಂಬಿಕೆ ಇಟ್ಟು ಯಾವ ಕೆಲಸವನ್ನು ಮಾಡಿದರು ಸಹ ಖಂಡಿತ ಆದರೆ ಸೋಮಾರಿತನ ನಿಮ್ಮನ್ನ ಕಾಡುತ್ತಿದೆ ಇದರಿಂದ ಹೊರಬರಬೇಕೆಂದರೆ ಪ್ರತಿನಿತ್ಯ ಧ್ಯಾನ ಕನಿಷ್ಠ ಎರಡು ಬಾರಿ ಮಾಡಿ ಯಾವುದೇ ಕೆಲಸವನ್ನು ನಾಳೆ ಮಾಡೋಣ ಎಂಬುದನ್ನ ತೆಗೆದು ಹಾಕಿ ಮನಸ್ಸಿನಿಂದ, ಪ್ರತಿದಿನ ನಿಮ್ಮೊಳಗೆ ಹೊಸ ಆಲೋಚನೆ ಐಡಿಯಾಗಳು ಬರುತ್ತಿರುತ್ತವೆ ಆದರೆ ಅದನ್ನ ಕೆಲಸದ ರೂಪದಲ್ಲಿ ತರಲು ನೀವು ಕಷ್ಟಪಡುತ್ತಿದ್ದೀರಾ ಅಕಸ್ಮಾತ್ ನೀವೇನಾದರೂ ನಿಮ್ಮ ಸಂಪೂರ್ಣ ಬಲವನ್ನ ಹಾಕಿ ಕೆಲಸ ಮಾಡಿದರೆ ಕೋಟ್ಯಾಧೀಶ್ವರರಾಗುವ ಎಲ್ಲಾ ಅರ್ಹತೆಗಳು ನಿಮ್ಮಲ್ಲಿವೆ. ನಿಮ್ಮ ಗೆಳೆಯರು ಹಣ ಕೇಳಿದಾಗ ಆರ್ಥಿಕವಾಗಿ ಅವರಿಗೆ ಸಹಾಯ ಮಾಡುತ್ತೀರಾ ಬೇರೆಯವರ ಕಷ್ಟಗಳನ್ನ ನಮ್ಮದೇ ಎಂದು ಭಾವಿಸಿ, ಪರಿಹರಿಸಲು ಹೋಗುತ್ತೀರಾ ಈ ರೀತಿ ಬೇಡದೆ ಹೋದ ಕೆಲಸಗಳನ್ನ ಆಸಕ್ತಿವಹಿಸಿ ಮಾಡಲು ಪ್ರಯತ್ನಿಸುತ್ತಿದ್ದೀರಾ ಹೀಗಾಗಿಯೇ ನಿಮಗೆ ಉತ್ತಮ ಫಲಿತಾಂಶಗಳು ದೊರಕುತ್ತಿಲ್ಲ. ಯಾರಿಲ್ಲ ಈಗಾಗಲೇ ಬಿಜಿನೆಸ್ ಮಾಡುತ್ತಿದ್ದಾರೆ ಅವರು ತಮ್ಮ ಸಂಪೂರ್ಣ ಸಮಯವನ್ನ ತಾವು ಹೇಗೆ ಮುಂದುವರಿಯಬೇಕು ಏನೆಲ್ಲಾ ಹೊಸ ವಿಚಾರಗಳನ್ನು ಆಲೋಚನೆ ಮಾಡಿ ಕಾರ್ಯರೂಪಕ್ಕೆ ತರಬೇಕು ಎಂಬುದನ್ನ ಆಲೋಚನೆ ಮಾಡಿ ಮನೆಯವರೊಂದಿಗೆ ಕೂತು ಚರ್ಚೆ ಮಾಡಿ ಕಾರ್ಯರೂಪಕ್ಕೆ ತಂದರೆ ನೀವು ಕೆಲವೇ ಸಮಯದಲ್ಲಿ ಕೋಟ್ಯಾಧೀಶರಾಗುತ್ತೀರಾ ನಿಮ್ಮ ಈ ವಾರದ ಅದೃಷ್ಟ ಸಂಖ್ಯೆ ಏಳು ಹಾಗೂ ಬಣ್ಣ ಬಿಳಿ.

ನಾಳೆಯ ತುಲಾ ರಾಶಿ ಭವಿಷ್ಯ
ಬಹಳ ವರ್ಷಗಳಿಂದ ಕಾಡುತ್ತಿದ್ದ ನಿಮ್ಮ ಕನಸು ನನಸಾಗುತ್ತೆ ಹೆಚ್ಚು ಕೆಲಸ ನಿಮ್ಮ ಕೈ ಸೇರುವ ಕಾರಣ ಹಲವು ಒತ್ತಡಗಳನ್ನು ನೀವು ಎದುರಿಸಬೇಕಾಗುತ್ತದೆ ಶಾಶ್ವತವಾಗಿ ಪರಿಹಾರವನ್ನ ಪಡೆಯಲು ಎಷ್ಟೇ ಪ್ರಯತ್ನ ಪಟ್ಟಿದ್ದರು ತುಲಾ ರಾಶಿಯವರಿಗೆ ಗುರು ಮೂರನೇ ಸ್ಥಾನದಲ್ಲಿದ್ದಾನೆ ಸೂರ್ಯ ಏಳನೇ ಸ್ಥಾನದಲ್ಲಿರುವ ಕಾರಣ ನಿಮಗೆ ರಾಹು ಕೇತುವಿನಿಂದ ಬರುವ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡಿ ಕೇವಲ ಒಳ್ಳೆಯದಾಗಬೇಕು ಎಂದು ಪ್ರಯತ್ನ ಪಡುವ ಕಾರಣದಿಂದ ನೀವು ಯಾವೆಲ್ಲ ಕೆಲಸವನ್ನು ಕೈಗೊಳ್ಳುತ್ತೀರ ಎಲ್ಲಾ ಸಫಲವಾಗುತ್ತೆ ದೂರವಾಗಿದ್ದ ನಿಮ್ಮ ಪ್ರಾಣ ಸ್ನೇಹಿತರು ಹತ್ತಿರ ಬರಲು ಪ್ರಯತ್ನ ಪಡುತ್ತಾರೆ ತುಂಬಾ ಎಚ್ಚರದಿಂದಿರಿ ಏಕೆಂದರೆ ನೀವು ಕಷ್ಟದ ಕಾಲದಲ್ಲಿದ್ದಾಗ ಅವರು ನಿಮ್ಮ ನೆರವಿಗೆ ಬಂದಿರುವುದಿಲ್ಲ ಎಲ್ಲಾ ಈಗ ಒಳ್ಳೆಯದಾಗುತ್ತಿದೆ ಇದನ್ನ ನೋಡಿ ನಿಮ್ಮ ಹತ್ತಿರ ಬರಲು ಪ್ರಯತ್ನ ಪಡುತ್ತಾರೆ ಇಂಥವರನ್ನ ಆದಷ್ಟು ದೂರ ಇಡಿ. ಸಮಯ ಸಿಕ್ಕಾಗ ಖಂಡಿತ ಚಾಮುಂಡೇಶ್ವರಿಯ ದೇವಸ್ಥಾನಕ್ಕೆ ಹೋಗಿ ಬನ್ನಿ ಒತ್ತಡವನ್ನ ನಿವಾರಿಸಿಕೊಳ್ಳಲು ಹಲವು ಬಗೆಯ ಧ್ಯಾನ ಕಾರ್ಯ ಚಟುವಟಿಕೆಗಳಿವೆ. ಅದನ್ನ ಅರ್ಥ ಮಾಡಿಕೊಂಡು ನೀವು ಪ್ರಯತ್ನ ಪಡಿ. ಯಾರೆಲ್ಲ ಈಗ ಮದುವೆ ಆಗಬೇಕೆಂದು ಹುಡುಗಿಯನ್ನು ಹುಡುಕುತ್ತಿದ್ದಾರೆ ಅವರಿಗೆ ಖಂಡಿತ ಒಳ್ಳೆಯ ಸಂಬಂಧ ಒಲಿದು ಬರಲಿದೆ. ಕೆಲವು ಜನರು ವಿದೇಶಕ್ಕೆ ಹೋಗಿ ಕೆಲಸ ಮಾಡಬೇಕು ಎಂದು ಬಹಳ ದಿನಗಳಿಂದ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಆಸೆ ಖಂಡಿತ ಈಗ ನೆರವೇರಲಿದೆ ನಿಮ್ಮ ಈ ವಾರದ ಅದೃಷ್ಟ ಬಣ್ಣ ಕಿತ್ತಳೆ.

ನಾಳೆಯ ವೃಶ್ಚಿಕ ರಾಶಿ ಭವಿಷ್ಯ
ಕೇವಲ ಸಣ್ಣಪುಟ್ಟ ವಿಷಯಗಳನ್ನು ತುಂಬಾ ಯೋಚಿಸಿ ಮನಸನ್ನ ಕೆಡಿಸಿಕೊಳ್ಳಬೇಡಿ ವೃಶ್ಚಿಕ ರಾಶಿಯವರು ಹೆಚ್ಚು ಬೆಟ್ಟಿಂಗ್ ಅನ್ನ ಮಾಡಿ ಹಣ ಗಳಿಸಬೇಕು ಸುಲಭವಾಗಿ ಎಂದು ತುಂಬಾ ಆಸೆಯನ್ನು ಇಟ್ಟುಕೊಂಡಿರುತ್ತಾರೆ ಆದರೆ ಇದು ಖಂಡಿತ ಸಾಧ್ಯ ಇಲ್ಲ ಆದಷ್ಟು ಈ ರೀತಿಯ ಯೋಚನೆಯನ್ನು ಮಾಡಬೇಡಿ ಮನೆಯ ಕರ್ತವ್ಯಗಳನ್ನ ನೀವು ಸರಿಯಾಗಿ ನಿರ್ವಹಿಸುತ್ತಿಲ್ಲ ತಂದೆ ತಾಯಿಯ ಸಣ್ಣಪುಟ್ಟ ಆಸೆಗಳನ್ನ ಈಡೇರಿಸಲು ಪ್ರಯತ್ನ ಪಡಿ. ನಿಮ್ಮ ಮಡದಿಯು ನಿಮ್ಮ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದಾರೆ ಅವರ ಕನಸನ್ನ ನನಸು ಮಾಡಲು ಪ್ರಯತ್ನಪಟ್ಟರೆ ಖಂಡಿತ ನೆರವೇರುತ್ತೆ. ಬಹಳ ದಿನಗಳಿಂದ ಮನೆ ಖರೀದಿಸಬೇಕು ಎಂದು ಹಲವರು ಯೋಚನೆ ಮಾಡುತ್ತಿದ್ದಾರೆ ಅವರಿಗೆ ಖಂಡಿತ ಇದು ಒಂದು ಒಳ್ಳೆಯ ಸಮಯ ಕಡಿಮೆ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿಕೊಳ್ಳಲು. ಯಾರೆಲ್ಲ ಪ್ರೇಯಸಿಯನ್ನ ಇಟ್ಟುಕೊಂಡಿದ್ದಾರೆ ಅವರಿಗೆ ತುಂಬಾ ಕಷ್ಟ ಆಗುತ್ತೆ ಅನಗತ್ಯ ವೆಚ್ಚ ನಿಮ್ಮನ್ನ ಕಾಡಲಿದೆ ನಿಮಗೆ ಎದುರಾಗಲಿದ್ದು ತುಂಬಾ ಸಂಕಷ್ಟವನ್ನು ಕೊಡುತ್ತೀರಿ ಹಾಗಾಗಿ ಹೆಚ್ಚು ಹಣವನ್ನ ವ್ಯರ್ಥವಾಗಿ ವಿನಿಯೋಗಿಸಬೇಡಿ.

ನಾಳೆಯ ಧನು ರಾಶಿ ಭವಿಷ್ಯ
ಬಹಳ ದಿನಗಳಿಂದ ಆರೋಗ್ಯ ಅದಗೆಟ್ಟು ನೀವು ತುಂಬಾ ಸಂಕಷ್ಟದಲ್ಲಿದ್ದೀರಿ ಎಷ್ಟೇ ಆರೋಗ್ಯದ ಮೇಲೆ ನಿಗಾ ವಹಿಸಿದರು ಆಗಿದ್ದಾಗೇ ಸಣ್ಣಪುಟ್ಟ ರೋಗ ರಜಿನಿಗಳು ನಿಮ್ಮನ್ನ ಕಾಡುತ್ತಿವೆ ಹಾಗಾಗಿ ಆರ್ಥಿಕವಾಗಿ ಸ್ವಲ್ಪ ಕುಗ್ಗಿದ್ದೀರಿ ಆದರೆ ಇದೀಗ ನಿಮ್ಮ ಒಳ್ಳೆಯ ಕಾಲ ಸಮೀಪಿಸಿದೆ ಗುರು ಒಂದನೇ ಮನೆಯಲ್ಲಿದ್ದಾನೆ ರಾಹು ಕೇತು ನಿಮ್ಮನ್ನ ಕಾಡುವುದಿಲ್ಲ ನಿಮ್ಮ ಮನೆಯ ವಾತಾವರಣ ಸಂಪೂರ್ಣವಾಗಿ ಬದಲಾಗಲಿದೆ ಪಡೆದು ಯಾವುದೇ ಹೊಸ ಕೆಲಸ ಪ್ರಾರಂಭಿಸಿದರೆ ಒಳ್ಳೆಯದಾಗುತ್ತೆ ಏಕೆಂದರೆ ಅಕಸ್ಮಾತ್ ನೀವೇನಾದರೂ ಸಂಕಷ್ಟಕ್ಕೆ ಈಡಾದರೆ ಮನೆಯವರ ಸಂಪೂರ್ಣ ಸಹಕಾರ ನಿಮಗೆ ಸಿಗುತ್ತೆ. ಪ್ರೀತಿಸಿ ದೂರ ಆಗಿದ್ದ ಹುಡುಗಿ ಸಹ ನಿಮ್ಮನ್ನು ಸೇರಲು ಪ್ರಯತ್ನ ಪಡುತ್ತಾರೆ ಹಾಗಾಗಿ ಹಿಂದೆ ನಡೆದ ಎಲ್ಲಾ ಪಕ್ಕಕ್ಕಿಟ್ಟು ಹುಡುಗಿಯ ಮನಸ್ಸನ್ನು ಅರ್ಥ ಮಾಡಿಕೊಂಡು ಜೊತೆಗೆ ಇರಲು ಪ್ರಯತ್ನ ಪಡಿ. ಉದ್ಯೋಗದಲ್ಲಿ ಬರ್ತಿ ಸಹ ನಿಮಗೆ ಸಿಗಲಿದೆ ತುಂಬಾ ಆಸಕ್ತಿಯಿಂದ ನೀವು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದೀರಿ ಆದರೆ ಪ್ರತಿಫಲ ಸರಿಯಾಗಿ ನಿಮಗೆ ಸಿಗುತ್ತಿಲ್ಲ ಅಚ್ಚರಿಯ ಸಂಗತಿ ಎಂದರೆ ನೀವು ಪಟ್ಟ ಕಷ್ಟಕ್ಕೆ ಈ ವಾರ ಸಾಕಷ್ಟು ಒಳ್ಳೆಯ ವಿಚಾರಗಳು ನಿಮ್ಮ ಬಳಿ ಬರಲಿವೆ. ಮನೆಯನ್ನ ಕಟ್ಟಬೇಕೆಂದಿರುವ ನಿಮ್ಮ ಬಯಕೆ ಸ್ವಲ್ಪ ಮಟ್ಟಿಗೆ ಸಾಕಾರಗೊಳ್ಳಲಿದೆ ಭೂಮಿಯನ್ನ ನೀವು ಖರೀದಿಸಲಿದ್ದೀರಿ ಹೆಚ್ಚು ಪ್ರಯಾಣ ಮಾಡುವ ಅವಶ್ಯಕತೆ ಬೀಳಬಹುದು ಆರೋಗ್ಯದ ಮೇಲೆ ಎಚ್ಚರ ಇರಲಿ.

ನಾಳೆಯ ಮಕರ ರಾಶಿ ಭವಿಷ್ಯ
ಯಾರೆಲ್ಲ ಕೆಲಸ ಹುಡುಕುತ್ತಿದ್ದೀರಿ ಅವರಿಗೆ ಖಂಡಿತ ಕೆಲಸದ ಭಾಗ್ಯ ಸಿಗಲಿದೆ ಆರ್ಥಿಕವಾಗಿ ನೀವು ಸದೃಢಗೊಳ್ಳಲಿದ್ದೀರಿ ನಿಮ್ಮ ಬಳಿ ಇದ್ದ ಹಲವು ದಿನಗಳ ಕನಸು ಈಗ ನೆರವೇರಲಿದೆ, ಹೆಚ್ಚು ಕೆಲಸ ಇರೋದಕ್ಕೆ ಹೊರಗಡೆ ಹೆಚ್ಚು ಸಮಯವನ್ನು ನೀವು ಸ್ಪೆಂಡ್ ಮಾಡುತ್ತೀರಾ ಹಾಗಾಗಿ ಮನೆಯವರ ಜೊತೆ ಸಂತೋಷದಿಂದಿರಲು ಸಾಧ್ಯ ಆಗೋದಿಲ್ಲ ಈ ಕಾರಣಕ್ಕಾಗಿ ಆದಷ್ಟು ಕೆಲಸ ಇಲ್ಲದ ಸಮಯದಲ್ಲಿ ಫ್ಯಾಮಿಲಿ ಜೊತೆ ಹೊರಗಡೆ ಹೋಗಿ ಸುತ್ತಾಡಿ ದೇವಸ್ಥಾನಗಳಿಗೂ ಸಹ ಹೋಗುವುದು ತುಂಬಾ ಅನಿವಾರ್ಯ ಯಾರೆಲ್ಲಾ ವಿದ್ಯಾಭ್ಯಾಸ ಮಾಡುತ್ತಿದ್ದೀರಿ ಪರೀಕ್ಷೆಗಳು ತುಂಬಾ ಸಮೀಪಿಸುತ್ತಿವೆ ಹಾಗಾಗಿ ಶ್ರದ್ಧೆ ಇಟ್ಟು ಯಾವೆಲ್ಲ ಅಧ್ಯಾಯ ಓದುವಾಗ ತುಂಬಾ ಡೌಟ್ ಬರುತ್ತೆ ಅದನ್ನ ಶಿಕ್ಷಕರೊಂದಿಗೆ ಕುಳಿತು ಬಗೆಹರಿಸಿಕೊಳ್ಳಿ, ಮಕ್ಕಳಗಳು ನಿಮ್ಮ ಮಾತನ್ನು ಕೇಳುವುದಿಲ್ಲ ಹಾಗಾಗಿ ಬೇಜಾರು ಪಟ್ಟುಕೊಳ್ಳಬೇಡಿ. ಬಹಳ ದಿನಗಳಿಂದ ನೀವು ಕಾಣುತ್ತಿದ್ದ ವಿದೇಶಿ ಪ್ರವಾಸ ಕನಸು ಈಗ ಈಡೇರಲಿದೆ. ನಿಮ್ಮ ರಾಶಿಯಲ್ಲಿ ಬುಧ ಈಗ ಎರಡನೇ ಸ್ಥಾನದಲ್ಲಿದ್ದಾನೆ ರಾಹು ಕೇತು 9ನೇ ಸ್ಥಾನದಲ್ಲಿದ್ದಾನೆ ಹಾಗಾಗಿ ಹೊರಗಡೆ ಸುತ್ತಾಡುವಾಗ ಎಚ್ಚರ ಅಗತ್ಯ ಇಲ್ಲವಾದರೆ ಅಪಘಾತವಾಗಬಹುದು.

ನಾಳೆಯ ಕುಂಭ ರಾಶಿ ಭವಿಷ್ಯ
ನೀವು ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೀರಾ ಹಾಗಾಗಿ ಸರಿಯಾದ ಸಮಯಕ್ಕೆ ಊಟ ಮಾಡಿ, ನಿದ್ದೆ ಸಹ ನೀವು ಮಾಡಬೇಕಾಗುತ್ತೆ ಆರೋಗ್ಯದಲ್ಲಿ ತುಂಬಾ ಏರುಪೇರು ಉಂಟಾಗುವ ಕಾರಣ ನೀವು ಹೆಚ್ಚು ಕಾಲ ಮನೆಯಲ್ಲೇ ಇರಬೇಕಾಗುತ್ತದೆ ಹಾಗಾಗಿ ಮನೆಯವರ ಜೊತೆ ಉತ್ತಮ ಬಾಂಧವ್ಯ ಏರ್ಪಡುತ್ತೆ ಬಹಳ ದಿನಗಳಿಂದ ಕೆಲಸದಲ್ಲಿ ಬಿಜಿಯಾಗಿದ್ದ ನಿಮಗೆ ಇದು ಒಂದು ಉತ್ತಮ ಅವಕಾಶ ಮನೆಯಲ್ಲಿ ಇದ್ದು ಕುಟುಂಬದವರ ಜೊತೆ ಸೇರಿ ಸಂತೋಷ ಪಡುವುದು ವೃತ್ತಿಯಲ್ಲಿ ಸಹ ಬಿಡ್ತಿಯನ್ನ ನೀವು ಕಾಣಲಿದ್ದೀರಿ ಹೆಚ್ಚು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ ಸಹೋದ್ಯೋಗಿಗಳು ಸಹ ನಿಮ್ಮ ಕಷ್ಟದ ಕಾಲದಲ್ಲಿ ನೆರವಾಗುತ್ತಾರೆ. ಹಣದ ನೆರವನ್ನ ನೀಡಿ ನಿಮ್ಮ ಬೆಂಬಲಕ್ಕೆ ನಿಲ್ಲುವ ನಿಮ್ಮ ಬಂಧು ಬಾಂಧವರು. ವಿದ್ಯಾರ್ಥಿಗಳು ಓದಿನಲ್ಲಿ ತುಂಬಾ ಹಿಂದೆ ಉಳಿಯುತ್ತಾರೆ ಇದಕ್ಕೆ ಮುಖ್ಯ ಕಾರಣ ನೀವು ಸರಿಯಾಗಿ ಗಮನ ಕೊಟ್ಟು ವಿದ್ಯಾಭ್ಯಾಸವನ್ನು ನಡೆಸದೇ ಇರುವುದು ನಿಮ್ಮ ಅತಿ ಅಮೂಲ್ಯ ಸಮಯವನ್ನ ಸ್ನೇಹಿತರೊಂದಿಗೆ ಸೇರಿ ವ್ಯರ್ಥ ಮಾಡಬೇಡಿ ಆದಷ್ಟು ಓದಿನ ಕಡೆ ಗಮನವಹಿಸಿ ಇಲ್ಲವಾದರೆ ಉತ್ತಮ ಫಲಿತಾಂಶ ಪಡೆಯಲು ನಿಮಗೆ ಖಂಡಿತ ಸಹಕಾರ ಆಗೋದಿಲ್ಲ ತಂದೆ ತಾಯಿಗಳನ್ನು ನಂಬಿ ಪೋಷಕರ ಸಹಾಯ ಪಡೆದು ಪ್ರತಿದಿನ ಕನಿಷ್ಠ ಮೂರು ಗಂಟೆ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಳ್ಳಿ ಖಂಡಿತ ಒಳ್ಳೆಯದಾಗುತ್ತೆ. ಯಾರೆಲ್ಲಾ ವಿವಾಹವಾಗಿದ್ದಾರೆ ಅವರ ವೈವಾಹಿಕ ಜೀವನ ಚೆನ್ನಾಗಿರುತ್ತೆ ತುಂಬಾ ಪ್ರೀತಿಯನ್ನು ನೀವು ಅನುಭವಿಸಲಿದ್ದೀರಿ ನಿಮ್ಮ ಈ ವಾರದ ಅದೃಷ್ಟ ಸಂಖ್ಯೆ ಎರಡು ಹಾಗೂ ಬಣ್ಣ ಬೆಳ್ಳಿ.

ನಾಳೆಯ ಮೀನ ರಾಶಿ ಭವಿಷ್ಯ
ನೀವು ಜೀವನದಲ್ಲಿ ತುಂಬಾ ಸಂತೋಷವಾಗಿರಬೇಕು ಎಂದು ಎಷ್ಟೇ ಕಷ್ಟಪಟ್ಟರು ಆಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ನಿಮ್ಮ ಬಳಿ ಆರ್ಥಿಕ ಸಮಸ್ಯೆ ಇದೆ ಹೀಗಾಗಿ ನಿಮ್ಮ ಬಳಿ ಇದ್ದ ಅಮೂಲ್ಯ ವಸ್ತುಗಳನ್ನು ನೀವು ಕಳೆದುಕೊಳ್ಳುತ್ತೀರಾ. ನೀವು ಆರ್ಥಿಕ ಸಮಸ್ಯೆಯಿಂದ ಹೊರಬರಬೇಕಾದರೆ ಖಂಡಿತ ಬಿಸಿನೆಸ್ ಅನ್ನು ಪ್ರಾರಂಭಿಸಿ ಮುಂದೆ ತುಂಬಾ ಒಳ್ಳೆಯದಾಗುತ್ತೆ ಇದೇ ರೀತಿ ಕೆಲಸವನ್ನ ಮಾಡುತ್ತಾ ನೀವು ಹೋದರೆ ಖಂಡಿತ ಒಳ್ಳೆಯದಾಗುವುದಿಲ್ಲ ಹಲವಾರು ಸಮಸ್ಯೆಗಳು ಈಗಾಗಲೇ ನಿಮ್ಮನ್ನ ಕಾಡುತ್ತಿವೆ ಇದರಿಂದ ಹೊರಬರಲು ಫ್ಯಾಮಿಲಿಯ ಸಪೋರ್ಟ್ ಅನ್ನು ತೆಗೆದುಕೊಳ್ಳಿ ಸಣ್ಣಪುಟ್ಟ ಯೋಗಾಸನ ಹಾಗೂ ಧ್ಯಾನ ಮಾಡಿ ನಿಮ್ಮ ಮನಸ್ಸನ್ನ ಯಾವಾಗಲೂ ಶುದ್ಧವಾಗಿಟ್ಟುಕೊಳ್ಳಿ.

ಪ್ರತಿದಿನ ನಾಳೆಯ ರಾಶಿ ಭವಿಷ್ಯ ನೋಡಿ ಕೆಲಸ ಪ್ರಾರಂಭಿಸುವುದು ತುಂಬಾ ತಪ್ಪು ಏಕೆಂದರೆ ಏನೆಲ್ಲ ತಮ್ಮ Today's Horoscope Kannada ರಾಶಿಯಲ್ಲಿ ಬರೆದಿರುತ್ತೆ ಅದು ಖಂಡಿತ ನಿಜ ಆಗುವುದಿಲ್ಲ ಕೆಲವೊಮ್ಮೆ ಆಗಬಹುದು ಇನ್ನು ಕೆಲವೊಮ್ಮೆ ಆಗದೇ ಇರಬಹುದು ಕೆಲಸಗಳನ್ನ ಮುಂದೆ ಹಾಕುವುದು ಎಷ್ಟು ಸರಿ ಹೇಳಿ ಟುಡೇಸ್ಕೋಪ್ ಕನ್ನಡ ನೋಡಿಯೇ ಹಲವು ಜನರು ಕೆಲಸಗಳನ್ನ ಮಾಡುತ್ತಾರೆ ಅಥವಾ ಮುಂದೆ ಹಾಕಿಬಿಡುತ್ತಾರೆ ಏಕೆಂದರೆ ಈ ದಿನ ಚೆನ್ನಾಗಿಲ್ಲ ಎಂದು ದಿನಗಳನ್ನ ಕಾಯ್ದುಕೊಂಡು ಕುಳಿತರೆ ಯಾವ ಕೆಲಸವೂ ಸಹ ನೆಟ್ಟಗೆ ಆಗುವುದಿಲ್ಲ ಯಾವುದೇ ಕೆಲಸ ಆಗಿರಲಿ ಶ್ರದ್ಧೆ ಪರಿಶ್ರಮದಿಂದ ಮಾಡಿದರೆ ಫಲ ಸಿಗುತ್ತೆ ಎಂಬುದು ನಿಮ್ಮ ಗಮನದಲ್ಲಿರಲಿ ಯಾವುದೇ ಹೊಸ ಕೆಲಸ ಮಾಡುವ ಮುಂಚೆ ಯಾರಿಗೆ ಅದರ ಬಗ್ಗೆ ಅನುಭವ ಇದೆ ಹೋಗಿ ಪರಿಪೂರ್ಣವಾಗಿ ತಿಳಿದುಕೊಳ್ಳಿ ನಂತರ ಕೆಲಸಗಳನ್ನ ಪ್ರಾರಂಭಿಸಿ ಖಂಡಿತ ನಿಮಗೆ ಒಳ್ಳೆಯದಾಗುತ್ತೆ, ಅನುಭವ ಇಲ್ಲದೆ ಯಾವುದೇ ಕೆಲಸವನ್ನು ನೀವು ಪ್ರಾರಂಭಿಸಿದರು ಸಹ ಅದು ಒಳ್ಳೆಯದಾಗುವುದಿಲ್ಲ ಏಕೆಂದರೆ ಅದರ ಬಗ್ಗೆ ನಿಮಗೆ ಅನುಭವ ಇರೋದಿಲ್ಲ ಹಾಗಾಗಿ ಗುರುಹಿರಿಯರ ಸಲಹೆಯನ್ನು ಪಡೆದುಕೊಂಡು ಯಾವುದೇ ಕೆಲಸ ಮಾಡಿದರು ಸಹ ಅದರಿಂದ ಏನಾದರೂ ತೊಡಕು ಉಂಟಾದರೆ ಪೋಷಕರು ನಮ್ಮ ಹಿಂದೆ ನಿಂತು ಆ ಕೆಲಸವನ್ನು ನೆರವೇರಿಸುತ್ತಾರೆ ಈ ಕಾರಣಕ್ಕಾಗಿಯೇ ಹಿರಿಯರ ಸಲಹೆ ತುಂಬಾ ಮುಖ್ಯ.