ಮೆಂತೆ ಕಾಳಿನ ಉಪಯೋಗ | Fenugreek Seeds in Kannada

Fenugreek Seeds in Kannadaದಲ್ಲಿ ಮೆಂತೆ ಎಂದು ಕರೆಯುತ್ತಾರೆ ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಹಲವಾರು ರೋಗಗಳನ್ನು ಗೆಲ್ಲಬಹುದು ಆದರೆ ಹೇಗೆ ಯಾವ ಕಾಯಿಲೆಗೆ ಯಾವ ಪದಾರ್ಥವನ್ನು ಬಳಸಬೇಕು ಎಂಬ ಮಾಹಿತಿ ಖಚಿತವಾಗಿ ತುಂಬಾ ಜನರಿಗೆ ಗೊತ್ತಿಲ್ಲ ಸಮಸ್ಯೆಯಾಗಿರುವುದು ಇದೆ ಈಗ ಹೆಚ್ಚಿನ ಜನರು ಆಸ್ಪತ್ರೆಯಲ್ಲಿ ಸಿಗುವ ಔಷಧಿಗೆ ಹೆಚ್ಚು ಮೊರೆಹೋಗುತ್ತಾರೆ ಹೀಗಾಗಿ ಮನೆಯಲ್ಲೇ ಇರುವ ಔಷಧಿಗಳು ನಮಗೆ ಕಾಣುವುದಿಲ್ಲ, ನೈಸರ್ಗಿಕವಾಗಿ ಸಿಗುವ ಮುದ್ದುಗಳು ಬಹಳ ಬೇಗ ಪರಿಣಾಮವನ್ನು ನೀಡುವುದಿಲ್ಲ ಅದು ನಿಜ ಕೂಡ ಹಾಗಂತ ಆಯುರ್ವೇದಿಕ್ ಮೆಡಿಸನ್ ಸರಿಯಲ್ಲ ಎಂಬುದು ತಪ್ಪು. ಈ ಲೇಖನದಲ್ಲಿ ನಾವು ಮನೆಯಲ್ಲೇ ಸಿಗುವ ಮೆಂತೆ ಕಾಳಿನ ಉಪಯೋಗ ಹೇಗೆ ? ಹಲವು ರೋಗಗಳನ್ನು ತಡೆಯಬಹುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ವಿವರವನ್ನು ನೀಡಲಿದ್ದೇವೆ. ಮೆಂತ್ಯ ದಲ್ಲಿ ಆಂಟಿಆಕ್ಸಿಡೆಂಟ್ ಗಳು ಹೆಚ್ಚಾಗಿವೆ ಇದು ಸೂಕ್ಷ್ಮಜೀವಿಗಳು, ವೈರಸ್ನಿಂದ ಬರುವ ಹಲವು ರೋಗಗಳನ್ನು ಶಮನ ಮಾಡಲು ಸಹಕಾರಿಯಾಗಿದೆ.

 

ತೂಕ ಕಡಿಮೆ ಮಾಡಿಕೊಳ್ಳಲು

ತೂಕ ಕಡಿಮೆ ಮಾಡಿಕೊಳ್ಳಲು ಮೆಂತ್ಯ ಹೇಗೆ ನೆರವಾಗುತ್ತದೆ? ಇದರಲ್ಲಿ ಹೆಚ್ಚಿನ ಪ್ರಮಾಣದ ನಾರಿನ ವಸ್ತುಗಳನ್ನು ಒಳಗೊಂಡಿದೆ ಇದು ಹೆಚ್ಚು ಹಸಿವನ್ನು ನಿವಾರಣೆ ಮಾಡುತ್ತದೆ, ಪದೇ ಪದೇ ಹೊಟ್ಟೆ ಹಸಿವು ವುದು ಬೇಗ ಜೀರ್ಣಕ್ರಿಯೆ ಆಗುವುದು ಇದನ್ನೆಲ್ಲಾ ತಪ್ಪಿಸಿ ಹೆಚ್ಚು ದಪ್ಪ ಇದ್ದವರು ತೂಕ ಕಳೆದುಕೊಳ್ಳಲು ಯಶಸ್ವಿಯಾಗಿ ನೆರವು ನೀಡುತ್ತದೆ. ಬೆಳಗ್ಗೆ ಎದ್ದ ನಂತರ ಚೆನ್ನಾಗಿ ಮೆಂತ್ಯ ಕಾಳುಗಳನ್ನು ಜಗಿದು ತಿನ್ನುವುದು ಉಪಯುಕ್ತ.

 

ಸಕ್ಕರೆ ರೋಗಿಗಳಿಗೆ ಉಪಯುಕ್ತ

ಮೆಂತ್ಯ ಕಾಳುಗಳಲ್ಲಿ ಗ್ಯಾಲಕ್ಟೋಮನ್ನನ್ಹೆಚ್ಚಾಗಿದೆ ಇದು ರಕ್ತ ಸಕ್ಕರೆ ಪ್ರಮಾಣವನ್ನು ಹೆಚ್ಚು ಹೀರಿಕೊಳ್ಳುವಂತೆ ಮಾಡುತ್ತದೆ ಈ ಬಗ್ಗೆ ಹಲವು ಯೂನಿವರ್ಸಿಟಿಗಳು ಅಧ್ಯಯನ ನಡೆಸಿವೆ ಇದು ಕೇವಲ ರಕ್ತದ ಆರೋಗ್ಯ ಕಾಪಾಡುವುದಲ್ಲದೆ ಕಿಡ್ನಿ ಮತ್ತು ಹೃದಯವನ್ನು ಸಹ ಕಾಪಾಡುತ್ತದೆ.

 

ನೈಸರ್ಗಿಕ ತ್ವಚೆ

ನಮಗೆಲ್ಲಾ ತಿಳಿದಿರುವಂತೆ ಆಂಟಿಆಕ್ಸಿಡೆಂಟ್ಗಳು ದೇಹದಲ್ಲಿರುವ ಬಹುಮುಖ್ಯವಾಗಿ ಚರ್ಮದ ಉರಿಯೂತ ಕಡಿಮೆ ಮಾಡುವ ಗುಣ ಹೊಂದಿದೆ ಮುಖದ ಮೇಲೆ ಎಲ್ಲರಿಗೂ ಸಾಮಾನ್ಯವಾಗಿ ಸುಟ್ಟ, ಮೊಡವೆಯ, ಗಾಯದ ಕಲೆಗಳು ಇರುತ್ತವೆ ಇಂತಹ ಸಮಸ್ಯೆ ಇರುವವರು ಪ್ರತಿದಿನ ಮೆಂತೆ ತಿನ್ನುವುದು ಅತಿ ಅವಶ್ಯ.


ಕೂದಲಿನ ಸಮಸ್ಯೆ ನಿವಾರಣೆ

ಮೆಂತೆ ಕಾಳುಗಳನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಸ್ವಲ್ಪ ತೆಂಗಿನ ಎಣ್ಣೆಯಲ್ಲಿ ಹಾಕಿ ಮಿಶ್ರಣ ತಯಾರಿಸಿ ತಲೆಗೆ ಹಚ್ಚಿ 15 ನಿಮಿಷಗಳ ನಂತರ ಸ್ನಾನ ಮಾಡುವುದರಿಂದ ತಲೆಯಲ್ಲಿ ಉದ್ಭವಿಸುವ ಡ್ಯಾಂಡ್ರಫ್, ಹಾಗೂ ಕೂದಲು ಉದುರುವಿಕೆ ಸಮಸ್ಯೆ ದೂರಾಗುತ್ತದೆ.

 

ಕಾಮಾಸಕ್ತಿ ವೃದ್ಧಿಸುತ್ತದೆ

ಪುರುಷರಲ್ಲಿ ಹೆಚ್ಚಾಗಿ ಕಂಡು ಬರುವ ಬೊಕ್ಕತಲೆ, ಹಾರ್ನಿಯಾ ಸಮಸ್ಯೆಗೆ ಪರಿಣಾಮಕಾರಿ ಔಷಧಿ ಮೆಂತೆ ಆಗಿದೆ. ಈ ಕಾಡುಗಳಲ್ಲಿ ಅತಿ ಹೆಚ್ಚಾಗಿ ಟೆಸ್ಟೋಸ್ಟೆರಾನ್ ಇದೆ ಇದು ಕಾಮಾಸಕ್ತಿಯನ್ನು ವೃದ್ಧಿಸಲು ಸಹಕರಿಸುತ್ತದೆ. 2011ರಲ್ಲಿ ಈ ಬಗ್ಗೆ ಪೈತೋ  ತೆರೆಪಿ ರಿಸರ್ಚ್ ಜನರಲ್ ಪ್ರಕಟಪಡಿಸಿರುವ ವರದಿಯಲ್ಲಿ ತಿಳಿದುಬಂದಿದೆ. ಸಾಮನು  ನಿಮಿರು ದೋಷ ಇರುವ ಪುರುಷರು ಇದನ್ನು ಪ್ರತಿದಿನ 200 ಗ್ರಾಂ ತೆಗೆದುಕೊಳ್ಳುವುದರಿಂದ ಪುರುಷರಲ್ಲಿ ಕಾಮಾಸಕ್ತಿ ಹೆಚ್ಚಾಗಿತ್ತು ಎಂದು ವರದಿಯಲ್ಲಿ ತಿಳಿಸಿದ್ದಾರೆ.

 

ಕ್ಯಾನ್ಸರ್ ರೋಗ ನಿವಾರಣೆ

ಕ್ಯಾನ್ಸರನ್ನು ಆದಷ್ಟು ತಡೆಯಲು ಮೆಂತೆ ನೆರವಾಗುತ್ತದೆ ಇದರಲ್ಲಿರುವ ನಾರಿನ ಅಂಶ ಕ್ಯಾನ್ಸರ್ ರೋಗಾಣುವನ್ನು ಕೊಲ್ಲಲು ನೆರವಾಗುತ್ತದೆ ಈ ಬಗ್ಗೆ 2005ರಲ್ಲಿ ಹಲವು ಸಂಶೋಧನೆಗಳು ಇಲಿಗಳ ಮೇಲೆ ನಡೆಸಲಾಗಿದೆ ಈ ವರದಿಯ ಪ್ರಕಾರ ಹೆಂಗಸರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ಅನ್ನು ತಡೆಯುವ ಸಾಮರ್ಥ್ಯ ಕೂಡ ಇದೆ ಎಂಬುದು ತಿಳಿದುಬಂದಿದೆ.

 

ಬಾಣಂತಿಯ ಎದೆಹಾಲಿನ ಪ್ರಮಾಣ ಹೆಚ್ಚಿಸುತ್ತದೆ

ಪ್ರತಿಯೊಂದು ಮನೆಯಲ್ಲೂ ಬಾಣಂತಿಯರಿಗೆ ಹೆಚ್ಚಿನ ಮೆಂತೆ ಕಾಳಿನಿಂದ ಮಾಡಿರುವ ಆಹಾರವನ್ನು ಕೊಡುತ್ತಾರೆ ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ diesogen ಉಷಾ ಯಥೇಚ್ಛವಾಗಿದೆ ಇದು ಎದೆಹಾಲಿನ ಮಟ್ಟವನ್ನು ಹೆಚ್ಚಿಸಲು ನೆರವು ನೀಡುತ್ತದೆ.

ಇನ್ನು ಹಲವರಿಗೆ ಮೆಂತ್ಯೆ ಸೇವಿಸುವುದು ಇಷ್ಟ ಆಗೋದಿಲ್ಲ ಅಂಥವರು ಈ ಕೆಳಕಂಡ ರೀತಿಯಲ್ಲಿ ಸೇವನೆ ಮಾಡಬಹುದು

ಹಲವು ಗಂಡಸರು ಹೆಚ್ಚು ತೂಕವನ್ನು ಹೊಂದಿರುತ್ತಾರೆ ಈ ವಿಧಾನದಿಂದ ಟೀ ಮಾಡಿಕೊಂಡು ಕುಡಿದರೆ ತೂಕ ಇಳಿಯುತ್ತದೆ, ರಕ್ತದೊತ್ತಡ ಕಡಿಮೆಯಾಗುತ್ತದೆ ರಕ್ತದಲ್ಲಿರುವ ಕೆಟ್ಟ ವಸ್ತುಗಳು ದೂರಾಗುತ್ತವೆ ಹಾಗೂ ಹಲವಾರು ಪ್ರಯೋಜನಗಳು ಸಹ ನಿಮಗೆ ದೊರಕುತ್ತವೆ.

 

ಟೀ ಮಾಡುವ ವಿಧಾನ ಹೀಗಿದೆ

  • ಸ್ವಲ್ಪ ನೀರು ಹಾಕಿಕೊಂಡು ಮೆಂತ್ಯವನ್ನು ಹಾಕಿ ಚೆನ್ನಾಗಿ ಅರೆದು ಪುಡಿಮಾಡಿ.
  • ಟಿ ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಿ.
  • ಚೆನ್ನಾಗಿ ಕುದಿದ ನೀರಿಗೆ ಮೆಂತ್ಯೆ ಹಾಕಿ ಅದರ ಜೊತೆ ಬೇಕಾದರೆ ಶುಂಠಿ, ಕಾಳುಮೆಣಸು ಒಂದು ಚಿಟಿಕೆ ಸೇರಿಸಿಕೊಳ್ಳಬಹುದು.
  • ಐದು ನಿಮಿಷ ಇದು ಚೆನ್ನಾಗಿ ತಣಿದ ನಂತರ ಒಲೆಯನ್ನು ಆರಿಸಿ.
  • ಪ್ರತಿನಿತ್ಯ ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಿನಲ್ಲಿ ಈ ಟಿ ಎನ್ನುವ ಸೇವಿಸುತ್ತಾ ಬಂದರೆ ದೇಹಕ್ಕೆ ತುಂಬಾ ಒಳ್ಳೆಯದು.

 

ಮೆಂತೆ ಹಾಗೂ ಜೇನುತುಪ್ಪ

  1. ತೂಕ ಕಡಿಮೆ ಮಾಡಿಕೊಳ್ಳಲು ಈ ಎರಡು ವಸ್ತುಗಳು ನೆರವಾಗುತ್ತವೆ ನೈಸರ್ಗಿಕವಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ನೋಡುತ್ತಿರುವವರು ಇವೆರಡನ್ನು ಬಳಸುವುದು ಅವಶ್ಯ ಆಕರ್ಷಕ ಮೈಕಟ್ಟು ಬರಲು ನೆರವಾಗುತ್ತದೆ.
  2. ಸ್ವಲ್ಪ ಮೆಂತ್ಯ ತೆಗೆದುಕೊಂಡು ಮಿಕ್ಸರ್ ಗ್ರೈಂಡರ್ ನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ.
  3. ಕುದಿಯುವ ನೀರಿಗೆ ಸ್ವಲ್ಪ ಮೆಂತೆ ಪುಡಿ ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ, ನಿಮಗೆ ಬೇಡದಿದ್ದರೆ ಮೆಂತೆ ಜರಡಿಯಲ್ಲಿ ಸೋಸಿ ತೆಗೆದುಹಾಕಬಹುದು ನಿಮಗೆ ಇಷ್ಟ ಆದರೆ ಹಾಗೆ ಮೆಂತೆ ಹಾಗೂ ನೀರಿನ ರಸಕ್ಕೆ ಸ್ವಲ್ಪ ಜೇನುತುಪ್ಪ ನಿಂಬೆರಸ ಸ್ವಲ್ಪ ಬೆಲ್ಲ ಸೇರಿಸಿ ಪ್ರತಿನಿತ್ಯ ಎರಡು ಲೋಟ ಸೇವಿಸುತ್ತಾ ಬಂದರೆ ಆರೋಗ್ಯಕ್ಕೆ ತುಂಬಾ ಉಪಯುಕ್ತ.