Cumin Seeds in Kannada | ಕಪ್ಪು ಜೀರಿಗೆ ಉಪಯೋಗಗಳು

Cumin Seeds in Kannadaದಲ್ಲಿ ಜೀರಾ ಅಥವಾ ಜೀರಿಗೆ ಎಂದು ಕರೆಯುತ್ತಾರೆ ಇದರ ಸೇವನೆ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ, ಭಾರತೀಯರು ಎಲ್ಲಾ ಮಸಾಲ ಅಡುಗೆ ತಯಾರಿಸಲು ಜೀರಿಗೆಯನ್ನು ಬಳಸುತ್ತಾರೆ ಇದು ಸ್ವಾದಿಷ್ಟ ವನ್ನು ಹೆಚ್ಚಾಗಿಸುತ್ತದೆ ಜೊತೆಗೆ ಆಹಾರದ ರುಚಿಯನ್ನು ಕೂಡ ಹೆಚ್ಚು ಮಾಡುವಲ್ಲಿ ಗಣನೀಯ ಪಾತ್ರವಹಿಸುತ್ತದೆ, ಕಂದು ಬಣ್ಣದಿಂದ ಕೂಡಿರುವ ಈ ಕಾಳುಗಳು ತುಂಬಾ ಸಣ್ಣ.

Cumin Seedsನಲ್ಲಿ ಹಲವು ವಿಧಗಳಿವೆ ಕೆಲವು ಜೀರಿಗೆಯನ್ನು ಊಟ ಮಾಡಿದ ನಂತರ ನೇರವಾಗಿ ಸೇವಿಸಲಾಗುತ್ತದೆ ಇನ್ನೂ ಕೆಲವು ವಿಧದ ಜೀರಿಗೆಗಳನ್ನು ಕೇವಲ ಆಹಾರ ತಯಾರಿಸಲು, ಒಗ್ಗರಣೆ ಮಾಡುವಾಗ ಬಳಸುತ್ತಾರೆ ಇವುಗಳ ಬಳಕೆ ಕೇವಲ ಸ್ವಾದಕ್ಕೆ ಮಾತ್ರವಲ್ಲ ದೇಹಾರೋಗ್ಯಕ್ಕೆ ಕೂಡ ತುಂಬಾ ಪ್ರಯೋಜನಕಾರಿ.

ಜೀರಿಗೆಗೆ ಸಂಬಂಧಿಸಿದ ಹಲವು ಉಪಯುಕ್ತ ಮಾಹಿತಿಗಳನ್ನು ನಾವು ಇಲ್ಲಿ ಚರ್ಚಿಸಿದ್ದೇವೆ ದಯಮಾಡಿ ಪೂರ್ತಿ ಓದಿ. ಜೀರಿಗೆ ಯುವತಿ ದುಬಾರಿಯೇನಲ್ಲ ಎಲ್ಲಾ ಮಾರುಕಟ್ಟೆಗಳಲ್ಲೂ ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.


Cumin Seeds ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಳ

ಜೀರಿಗೆಯಲ್ಲಿ ಹಲವು ವಿಧದ ಆಂಟಿಆಕ್ಸಿಡೆಂಟ್ಗಳಿವೆ ಜೊತೆಗೆ ಇದರಲ್ಲಿರುವ ಎಣ್ಣೆ ನಿಮ್ಮ ಹೊಟ್ಟೆ ಸೇರಿದ ನಂತರ ಯಕೃತ್ ಸಮಸ್ಯೆ ಕರುಳಿನಲ್ಲಿರುವ ಸಮಸ್ಯೆಯನ್ನು ದೂರಮಾಡುತ್ತದೆ ಇದರ ಜೊತೆಗೆ ವಿಶೇಷವಾಗಿ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಿದೆ.


ಮಲವಿಸರ್ಜನೆ

ನಮ್ಮ ಆಹಾರಕ್ರಮ ಇತ್ತೀಚಿನ ದಿನಗಳಲ್ಲಿ ತುಂಬಾ ಕೆಟ್ಟುಹೋಗಿದೆ ನಾವು ನಾರಿನ ಪದಾರ್ಥಗಳನ್ನು ತಿನ್ನುವುದನ್ನು ಬಿಟ್ಟು ಬಿಟ್ಟಿದ್ದೇವೆ ರೆಡಿಮೇಡ್ ಪದಾರ್ಥಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಈ ಕಾರಣದಿಂದಾಗಿ ನಮ್ಮ ದಿನದಲ್ಲಿ ಹಲವು ವಿಧದ ಗಣನೀಯ ಚೇಂಜಸ್ ಗಳು ಆಗಿವೆ ಈ ಕಾರಣಕ್ಕೆ ನಾವು ಬೆಳಗ್ಗೆ ಮಲವಿಸರ್ಜನೆ ಮಾಡುವ ಸಮಯದಲ್ಲಿ ತುಂಬಾ ಸಮಸ್ಯೆ ಎದುರಿಸುತ್ತೇವೆ, ಮಲವು ತುಂಬಾ ಗಟ್ಟಿಯಾಗಿ ಹೋಗುವುದು, ಮಲ ಮಾಡಲು ತುಂಬಾ ಸಮಯ ತೆಗೆದುಕೊಳ್ಳುವುದು, ಉರಿ ಹೀಗೆ ಹಲವು ಸಮಸ್ಯೆಗಳು ಬಾಧಿಸುತ್ತಿವೆ ಇಂತಹ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಜೀರಿಗೆ ನೀವು ಸೇವಿಸಬಹುದು, ನಾವು ಈಗಾಗಲೇ ಹೇಳಿದಂತೆ ಕೆಲವು ವಿಧದ Cumin Seedsನ್ನು ಊಟವಾದ ಬಳಿಕ ನೇರವಾಗಿ ಸೇವಿಸಬಹುದು ಇನ್ನೂ ಕೆಲವು ವಿಧದ ಜೀರಿಗೆಯನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಬಿಸಿ ನೀರಿನೊಂದಿಗೆ ಮಿಶ್ರಣ ಮಾಡಿ ಕೂಡ ಸೇವನೆ ಮಾಡುತ್ತಿದ್ದರೆ ಇಂತಹ ಸಮಸ್ಯೆಗಳು ನಿಮ್ಮನ್ನು ಬಾಧಿಸುವುದಿಲ್ಲ.


ಹೆಣ್ಣುಮಕ್ಕಳ ಋತುಚಕ್ರ ಸಮಸ್ಯೆ ನೀಗಿಸುತ್ತದೆ

ಇತ್ತೀಚಿನ ಮಕ್ಕಳಲ್ಲಿ ಋತುಚಕ್ರದ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತಿದೆ ಕಾರಣ ನಾವು ಸೇವಿಸುತ್ತಿರುವ ಆಹಾರ, ನಾವು ಸೇವಿಸುವ ಆಹಾರ ಕೇವಲ ಮೊಟ್ಟೆಯನ್ನು ಮಾತ್ರ ತುಂಬಿಸುತ್ತದೆ ಅದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ಒಳ್ಳೆಯ ಪರಿಣಾಮಗಳು ಆಗುತ್ತಿಲ್ಲ ಹೀಗಾಗಿ ಹೆಚ್ಚಿನ ಹೆಣ್ಣುಮಕ್ಕಳಲ್ಲಿ ಋತುಚಕ್ರದ ಸಮಸ್ಯೆ ಕಂಡುಬರುತ್ತದೆ ಇಂಥವರು ಪ್ರತಿನಿತ್ಯ ಮೂರು ಬಾರಿ ಜೀರಿಗೆಯನ್ನು ನೇರವಾಗಿ ಅಥವಾ ಆಹಾರದಲ್ಲಿ ಹೆಚ್ಚು ಪ್ರಮಾಣ ಸೇವಿಸುವುದರಿಂದ ತುಂಬಾ ಒಳ್ಳೆಯದಾಗುತ್ತದೆ.


ಕೆಮ್ಮು ಹಾಗೂ ಶೀತ ನಿವಾರಣೆ

Cumin Seeds ಬ್ಯಾಕ್ಟೀರಿಯಾ ಹಾಗೂ ವೈರಸ್ ಕೊಲ್ಲುತ್ತದೆ ಎಂಬುದು ನಮಗೆಲ್ಲ ಗೊತ್ತೇ ಇದೆ ನಮ್ಮ ಮನೆಯಲ್ಲಿ ಇರುವ ಜೀರಿಗೆ ಕೆಮ್ಮು ಕಫ ಶೀತ ಜ್ವರದಂತಹ ಸಣ್ಣಪುಟ್ಟ ರೋಗಗಳನ್ನು ತಡೆಯಲು ಗಣನೀಯ ಕಾರ್ಯ ನಿರ್ವಹಿಸುತ್ತದೆ ಎಂಬುದೇ ನಮಗೆ ಗೊತ್ತಿಲ್ಲ. ಅಕಸ್ಮಾತ್ ಏನಾದರೂ ನಿಮಗೆ ಈ ರೀತಿಯ ರೋಗಳು ಬಾಧಿಸುತ್ತಿದ್ದರೆ ಒಂದು ಗ್ಲಾಸ್ ನೀರಿಗೆ ಸ್ವಲ್ಪ ಪ್ರಮಾಣದ ಜೀರಿಗೆಯನ್ನು ಹಾಕಿ ಚೆನ್ನಾಗಿ ನೆನೆಯಲು ಬಿಡಿ ತದನಂತರ ಅದಕ್ಕೆ ಚೆನ್ನಾಗಿ ಕುಟ್ಟಿದ ಶುಂಠಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಸೇವಿಸಿ, ಹೀಗೆ ದಿನಕ್ಕೆ 2 ಬಾರಿ ಮಾಡಿದರೆ ನಿಮಗಿರುವ ಶೀತ ಕೆಮ್ಮು ದಮ್ಮು ಕಫ ಎಲ್ಲಾ ಕಾಯಿಲೆಗಳು ದೂರ ಆಗುತ್ತದೆ.


ಗರ್ಭಿಣಿಯರಿಗೆ

ಗರ್ಭಿಣಿಯರಿಗೆ ಕೆಲವೊಮ್ಮೆ ಮಲಬದ್ಧತೆ ಕಂಡುಬರುತ್ತದೆ ಏಕೆಂದರೆ ಜೀರ್ಣಕ್ರಿಯೆ ಚೆನ್ನಾಗಿ ಆಗದೆ ಇರುವ ಕಾರಣ ಜೀರಿಗೆಯಲ್ಲಿ ಅತಿಹೆಚ್ಚು ವಾಗಿ ವಿಟಮಿನ್-ಸಿ ಆಗುವ ಇದೆ ಇವುಗಳು ನಮ್ಮ ದೇಹ ಸೇರುವುದರಿಂದ ಆರೋಗ್ಯ ಚೆನ್ನಾಗಿ ಪಚನವಾಗುತ್ತದೆ ಕೆಲವು ಮಹಿಳೆಯರಲ್ಲಿ ವಾಕರಿಕೆ ಅಂತ ಲಕ್ಷಣಗಳು ಸಹ ಇರುತ್ತವೆ ಇದು ದೂರಾಗಲು ಸಹಕರಿಸುತ್ತದೆ ಇನ್ನೂ ಕೆಲವರಲ್ಲಿ ಎದೆಹಾಲಿನ ಸಮಸ್ಯೆ ಇರುತ್ತದೆ ಇಂಥವರು ಸೇವಿಸುವುದರಿಂದ ಎದೆಹಾಲಿನ ಮಟ್ಟ ಹೆಚ್ಚುತ್ತದೆ.

Cumin Seedsನ್ನು ಚನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಕೊಂಡು ಪುಡಿಮಾಡಿಟ್ಟುಕೊಳ್ಳಿ ಅರ್ಧ ಟೀ ಸ್ಪೂನ್ ಜೀರಿಗೆ ಪುಡಿಯನ್ನು ಸ್ವಲ್ಪ ಹಾಲಿನಲ್ಲಿ ಸೇರಿಸಿ ಮಿಶ್ರಣಗೊಳಿಸಿ ಅದಕ್ಕೆ ನಿಮಗೆ ರುಚಿ ಹೆಚ್ಚಾಗಿ ಬೇಕಾದರೆ ಜೇನುತುಪ್ಪ ಸೇರಿಸಿಕೊಂಡು ಸೇವಿಸಬಹುದು.


ನಿದ್ರಾಹೀನತೆ ನಿವಾರಕ

ಮೆಲಟೋನಿನ್ ಎಂಬ ಅಂಶ ಜೀರಿಗೆಯಲ್ಲಿ ಹೆಚ್ಚಾಗಿದೆ ಇದೇ ಕಾರಣಕ್ಕೆ ನಮ್ಮ ಪೂರ್ವಜರು ಜೀರಿಗೆಯನ್ನು ಬನಾನ ಜೊತೆ ಸೇರಿಸಿ ತಿನ್ನುತ್ತಿದ್ದರು ಇದರಿಂದ ಅವರಿಗೆ ನಿದ್ರಾಹೀನತೆ ಎಂಬ ರೋಗ ಬರುತ್ತಿರಲಿಲ್ಲ.

ಒಂದು ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಹಿಸುಕಿ ಪೇಸ್ಟ್ ರೀತಿ ಮಾಡಿಕೊಳ್ಳಿ ಅದಕ್ಕೆ ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ ಹಾಕಿ ಪ್ರತಿದಿನ ಮಲಗುವ ಸಮಯದಲ್ಲಿ ಸೇವಿಸಿ.


ಮುಖದ ತ್ವಚೆ ಹೆಚ್ಚಿಸುತ್ತದೆ

ನೀವು ನೈಸರ್ಗಿಕವಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಕನಸನ್ನು ಒಂದಿದ್ದರೆ ಸ್ವಲ್ಪ ಜೀರಿಗೆಗೆ ಜೇನುತುಪ್ಪ ಸೇರಿಸಿ ಮುಖಕ್ಕೆ ಮೃದುವಾಗಿ ಲೇಪಿಸಿ ಹದಿನೈದು ನಿಮಿಷಗಳ ಬಳಿಕ ತಣ್ಣಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ ಈ ರೀತಿ ಪ್ರತಿನಿತ್ಯ ಮಾಡುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.


ಕೂದಲ ಆರೋಗ್ಯಕ್ಕೆ ಜೀರಿಗೆ

ಜೀರಿಗೆಯಲ್ಲಿ ಬಹಳ ತಂಪಾದ ಗುಣಗಳಿವೆ ಹಾಗೂ ಇದರಲ್ಲಿರುವ oil ನಿಮ್ಮ ಕೂದಲ ಕಾಂತಿ ಹಾಗೂ ಸೌಂದರ್ಯ ಹೆಚ್ಚಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತದೆ ಇದನ್ನು ಹೇಗೆ ತಯಾರಿಸಿಕೊಳ್ಳಬೇಕು ಎಂದರೆ ಒಂದು ಗ್ಲಾಸ್ ನೀರಿಗೆ 1 ಟೀಸ್ಪೂನ್ ಜೀರಿಗೆ ಹಾಕಿ ನಂತರ ಮೊಟ್ಟೆಯನ್ನು ಒಡೆದು ಅದರಲ್ಲಿರುವ ಲೋಳೆಯನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದ ನಂತರ ನಿಮ್ಮ ತಲೆಯ ಕೂದಲ ಬುಡಕ್ಕೆ ಹಚ್ಚಿ ಅರ್ಧ ಗಂಟೆ ನಂತರ ಸ್ಥಾನ ಮಾಡಿಕೊಳ್ಳಿ ಈ ರೀತಿ ತಿಂಗಳಿಗೆ ಎರಡು ಸಲ ಮಾಡಿದರೆ ಕೂದಲ ಆರೋಗ್ಯ ಹೆಚ್ಚಾಗಲು ಸಂದೇಹ ಬೇಡ.