Ajwain In Kannada: ಕೇವಲ ಸುವಾಸನೆಗೆಂದು ಬಳಸುವ ಕಾಳು ಎಂದು ಹಲವು ಜನರು ತಿಳಿದುಕೊಂಡಿದ್ದಾರೆ ಆದರೆ ಇದರಲ್ಲಿರುವ ಅಂಶಗಳು ಮಾನವನ ದೇಹಕ್ಕೆ ಅಚ್ಚರಿಯ ರೂಪದಲ್ಲಿ ಔಷಧಿಯ ಗುಣಗಳಾಗಿ ಸಲಹುತ್ತಿದೆ. ಈಗ ನಾವು ಈ ಕಾಳುಗಳನ್ನು ಪ್ರತಿನಿತ್ಯ ಬಳಸುವುದರಿಂದ ಆಗುವ ಆರೋಗ್ಯ ಉಪಯೋಗಗಳ ಬಗ್ಗೆ ಕುರಿತು ಚರ್ಚಿಸೋಣ.
ಜೀರ್ಣಕ್ರಿಯೆ
ಮನುಷ್ಯನ ದೇಹದಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ನಡೆಯಬೇಕು ಅಂದರೆ ಹೆಚ್ಚಿನ ನಾರಿನ ಪದಾರ್ಥ ತಿನ್ನುವುದು ಅವಶ್ಯ ಹೋಂ ಕಾಡಿನಲ್ಲಿ ನಾರಿನ ಪದಾರ್ಥ ಹೆಚ್ಚಾಗಿ ಅಡಗಿದೆ ಹಾಗೂ ಈ ಕಾಡಿನಲ್ಲಿ ವಿಶೇಷವಾದ ಆಸಿಡ್ ಅಡಗಿದೆ ಇದು ಜೀರ್ಣಕ್ರಿಯೆಯನ್ನು ಸಲೀಸಾಗಿ ಮಾಡುತ್ತದೆ, ಪ್ರತಿನಿತ್ಯ ಮಜ್ಜಿಗೆ ಸೇವಿಸುವಾಗ ಓಂಕಾಳುಗಳನ್ನು ಬೆರೆಸಿ ಕುಡಿಯಿರಿ ತುಂಬಾ ಒಳ್ಳೆಯದು.
ಹೊಟ್ಟೆ ನೋವು ನಿವಾರಣೆ
ಭಾರತದಲ್ಲಿ ಹಲವಾರು ಜನರು ಗ್ಯಾಸ್ಟ್ರಿಕ್ ಅಜೀರ್ಣ ಅಸಿಡಿಟಿ ಎಂತಹ ತುಂಬಾ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ಸುದೀರ್ಘವಾಗಿ ಹಲವು ಔಷಧಿಗಳನ್ನು ತೆಗೆದುಕೊಂಡರೂ ಸಹ ಇದರಿಂದ ಮುಕ್ತಿ ಹೊಂದಿರುವುದಿಲ್ಲ ಇಂಥವರಿಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಔಷಧ ಎಂದರೆ Ajwainನ್ನು ಬಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಸೇವಿಸುವುದರಿಂದ ಹೊಟ್ಟೆ ನೋವು ಕಡಿಮೆಯಾಗಿ ಬಿಡುತ್ತದೆ.
ಕೆಮ್ಮು ನೆಗಡಿ
ಚಳಿಗಾಲದಲ್ಲಿ ಹಲವು ಜನರಿಗೆ ಕಾಡುವಂತ ಸಮಸ್ಯೆಗಳೆಂದರೆ ಕೆಮ್ಮು ನೆಗಡಿ ಕಫ ಕಟ್ಟುವಿಕೆ ಈ ಸಮಸ್ಯೆಗಳಿಂದ ಹೊರಬರಬೇಕಾದರೆ ಮನೆಯಲ್ಲೇ ಸಿಗುವ ಹೋಂ ಕಾಳನ್ನು ಚೆನ್ನಾಗಿ ಅಗಿದು ಜಗಿದು ಸೇವಿಸುತ್ತಾ ಬಂದರೆ ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.
ಕಿಡ್ನಿ ಕಲ್ಲು ನಿವಾರಣೆ
ಈ ಕಾಳುಗಳು ಪ್ರತಿನಿತ್ಯ ನೀವು ಸೇವಿಸುತ್ತಿದ್ದರೆ ಕಿಡ್ನಿಯಲ್ಲಿ ಬೆಳೆಯುವ ಕಲ್ಲುಗಳನ್ನು ಕರಗಿಸುತ್ತದೆ ಹಾಗೂ ಇಂತಹ ಸಮಸ್ಯೆ ಬರದಂತೆ ತಡೆಯುತ್ತದೆ ಕಿಡ್ನಿಯು ಬಹಳ ಸುಲಭವಾಗಿ ಕಾರ್ಯ ಮಾಡುವಂತೆ ಇದು ಸಹಕಾರಿಯಾಗಿದೆ.
ಕೈಕಾಲು ನೋವು, ಸಂಧಿವಾತ, ಎದೆಉರಿ ನಿವಾರಿಸುತ್ತದೆ
Ajwainನಲ್ಲಿ ಅಧಿಕ ಪ್ರಮಾಣದ ಎಣ್ಣೆಯ ಅಂಶ ಇದೆ ಇದು ನೀವು ಸೇವಿಸಿದ ಬಳಿಕ ಕೀಲುಗಳು, ಹೊಟ್ಟೆ, ಎದೆ ಭಾಗ ತಲುಪಿದ ಭಾಗಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ನಿವಾರಿಸುತ್ತದೆ.
ವಾಂತಿ ಸಮಸ್ಯೆ ನಿವಾರಣೆ
ಕೆಲವು ಮಂದಿ ಪ್ರಯಾಣಿಸುವಾಗ ವಾಂತಿ ಮಾಡಿಕೊಳ್ಳುತ್ತಾರೆ ಇಂಥವರು ಪ್ರಯಾಣಿಸುವ ಸಮಯದಲ್ಲಿ ಓಂ ಕಾಳುಗಳನ್ನು ಬಾಯಲ್ಲಿ ಹಾಕಿಕೊಂಡು ಜಿಗಿಯುತ್ತ ಇದ್ದರೆ ವಾಂತಿ ಆಗದಂತೆ ತಡೆಯುತ್ತದೆ ಹಾಗೂ ಇದನ್ನು ಹೆಚ್ಚು ಸೇವಿಸುವುದರಿಂದ ಹಸಿವಿನ ಪ್ರಮಾಣ ಕೂಡ ಹೆಚ್ಚಾಗಿಸುತ್ತದೆ.
ಬಾಯಿ ವಾಸನೆ ನಿವಾರಕ
ಕೆಲವರು ಬಾಯಿ ಎಷ್ಟೇ ಬಾರಿ ತೊಳೆದುಕೊಂಡರು ವಾಸನೆ ಮುಕ್ತವಾಗಿರುತ್ತದೆ ಅಂತವರು ಬಾಯಿಯಲ್ಲಿ ಒಂದೆರಡು ಕಾಳು Ajwain ಹಾಕಿಕೊಂಡು ಪದೇಪದೇ ಜಗಿಯುತ್ತಿದ್ದರೆ ಬಾಯಿವಾಸನೆ ಗಣನೀಯವಾಗಿ ಕಡಿಮೆಯಾಗುತ್ತದೆ.
ಅಸಿಡಿಟಿ
ವಯಸ್ಸಾದವರಿಗೆ ಕಾಡುವ ದೀರ್ಘಕಾಲದ ಸಮಸ್ಯೆಯೆಂದರೆ ಅಸಿಡಿಟಿ ಈ ಸಮಸ್ಯೆಯ ನಿವಾರಣೆಯಾಗಬೇಕಾದರೆ ಜೀರಿಗೆಯೊಂದಿಗೆ ಅಜ್ವೈನ್ ಸೇರಿಸಿ ಪಾತ್ರೆಯಲ್ಲಿಟ್ಟು ಉರಿದು ಸ್ವಲ್ಪ ಸಕ್ಕರೆ ಹಾಕಿ ಪ್ರತಿನಿತ್ಯ ಸೇರಿಸಿ ಅಸಿಡಿಟಿ ಮಾಯವಾಗುತ್ತದೆ.
ಮುಟ್ಟಿನ ನೋವಿಗೆ ರಾಮಬಾಣ
ಕೆಲವು ಹುಡುಗಿಯರಲ್ಲಿ ಮುಟ್ಟಿನ ಸಮಸ್ಯೆ ಅತಿ ಹೆಚ್ಚಾಗಿರುತ್ತದೆ ರಕ್ತ ಸೋರುವಿಕೆ ಹಾಗೂ ನೋವು ವಿಪರೀತವಾಗಿರುತ್ತದೆ ಅಂತವರು ಅಜ್ವೈನ್ ಅನ್ನು ಹಾಲಿನಲ್ಲಿ ಹಾಕಿ ಚೆನ್ನಾಗಿ ನೆನೆಸಿ ಸ್ವಲ್ಪ ಸಮಯದ ನಂತರ ಸೇವಿಸಿದರೆ ನೋವು ನಿಮ್ಮ ಬಳಿ ಸುಳಿಯುವುದಿಲ್ಲ.
ರಕ್ತಶುದ್ಧಿಕಾರಕ
ಪ್ರತಿನಿತ್ಯ ಊಟದ ಮೊದಲು ಹಾಗೂ ರಾತ್ರಿ ಮಲಗುವ ಮುನ್ನ ಕಾಳುಗಳನ್ನು ಸೇವಿಸುತ್ತಿದ್ದರೆ ನಿಮ್ಮ ರಕ್ತದಲ್ಲಿ ಉಂಟಾಗುವ ಸಮಸ್ಯೆಗಳು ದೂರಾಗುತ್ತವೆ ಆಗುವ ರಕ್ತ ಶುದ್ಧೀಕರಣ ಕೂಡ ಚೆನ್ನಾಗಿ ನಡೆಯುತ್ತದೆ.