ಸೋಂಪಿನ ವೈಶಿಷ್ಟತೆ ಹಾಗೂ ಆರೋಗ್ಯ - Fennel Seeds in Kannada

Fennel seeds in kannada: ಬಹುತೇಕ ಮಂದಿ ಊಟವಾದನಂತರ ಸೋಂಪನ್ನು ಸೇವಿಸುವುದು ರೂಢಿ ಇಟ್ಟುಕೊಂಡಿದ್ದಾರೆ ಇದು ಖಂಡಿತವಾಗಿಯೂ ಒಳ್ಳೆಯ ಆರೋಗ್ಯ ಅಭ್ಯಾಸವೇ ಈ ರೀತಿ ಪ್ರತಿದಿನ ಊಟ ತಿಂಡಿ ಆದ ಬಳಿಕ ಸೋಂಪನ್ನು ಸೇವಿಸುವುದರಿಂದ ಬಹುತೇಕ ಆರೋಗ್ಯ ಸಮಸ್ಯೆ ನಿಮ್ಮ ಬಳಿ ಸುಳಿಯುವುದಿಲ್ಲ ಇನ್ನೇಕೆ ತಡ ಇದರ ಉಪಯೋಗದಿಂದ ಸಿಗಬಹುದಾದ ಪ್ರಯೋಜನಗಳು ಈ ಕೆಳಕಂಡಂತಿವೆ.


ಸೋಂಪನ್ನು ಬಾಯಿಯ ವಾಸನೆ ದೂರಮಾಡುತ್ತದೆ

ಪ್ರತಿನಿತ್ಯ ತಿಂಡಿ ಅಥವಾ ಊಟ ಆದ ನಂತರ Fennel seeds ಸೇವಿಸುವುದನ್ನು ರೂಢಿಸಿಕೊಳ್ಳಿ ಕಾರಣ ಇದರಲ್ಲಿರುವ ಅಂಶ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ ಹಾಗೆಯೇ ಬಾಯಿಯ ವಾಸನೆ ಕಡಿಮೆಗೊಳಿಸುತ್ತದೆ.


ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ

ಸೋಂಪಿನ ಕಾಳನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ ಆ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳುವುದರಿಂದ ಕಣ್ಣಿನ ಸಮಸ್ಯೆ, ಕಣ್ಣಿನಲ್ಲಿರುವ ಕೊಳೆ ಹಾಗೂ ಭವಿಷ್ಯದಲ್ಲಿ ಕಣ್ಣಿನ ತೊಂದರೆಗಳು ಉಂಟಾಗುವುದಿಲ್ಲ.


ಹೆಣ್ಣುಮಕ್ಕಳಲ್ಲಿರುವ ಮುಟ್ಟಿನ ಸಮಸ್ಯೆ ದೂರವಿರುತ್ತದೆ

ಸೋಂಪನ್ನು ಶುದ್ಧವಾದ ನೀರಿನಲ್ಲಿ ನೆನೆಸಿ ನೀರನ್ನು ಪ್ರತಿನಿತ್ಯ Fennel seeds ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶ ದೂರವಾಗುತ್ತವೆ ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಕಂಡುಬರುವ ಮುಟ್ಟಿನ ಸಮಸ್ಯೆ , ನೋವು ಇನ್ನಿತರ ಆರೋಗ್ಯ ಸಮಸ್ಯೆ ದೂರ ಆಗುತ್ತದೆ. ಕೆಲವು ಹೆಣ್ಣು ಮಕ್ಕಳಲ್ಲಿ ಅನಿಯಮಿತ ಮುಟ್ಟು ಉಂಟಾಗುತ್ತದೆ ಪ್ರತಿನಿತ್ಯ ಸೋಂಪನ್ನು ಸೇವಿಸುವುದರಿಂದ ನಿಯಮಿತ ಮುಟ್ಟು ಸಂಭವಿಸಲು ಸಹಕರಿಸುತ್ತದೆ.


ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ನಿವಾರಿಸುತ್ತದೆ

ಹೌದು ಮಕ್ಕಳಲ್ಲಿ ಪದೇ ಪದೇ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರೆ ಸೋಂಪನ್ನು ಪ್ರತಿನಿತ್ಯ ಸೇವಿಸಲು ನಿಮ್ಮ ಮಕ್ಕಳಿಗೆ ನೀಡಿ ಇದರಿಂದ ಮಕ್ಕಳಲ್ಲಿ ಉತ್ತಮ ಜೀರ್ಣಕ್ರಿಯೆ ಉಂಟಾಗಿ ಪದೇ ಪದೇ ಕಾಣಿಸಿಕೊಳ್ಳುವ ಹೊಟ್ಟೆ ನೋವು ದೂರವಾಗುತ್ತದೆ.


ಜೀರ್ಣಕ್ರಿಯೆ

ಕೆಲವು ಜನರು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತವರು ಪ್ರತಿನಿತ್ಯ ಸೋಂಪನ್ನು ಬಳಸುವುದು ನಾವು ಸೂಚಿಸುತ್ತೇವೆ ಏಕೆಂದರೆ ಊಟವಾದ ನಂತರ ಸ್ವಲ್ಪ ಪ್ರಮಾಣದ ಸೋಂಪು ಬಳಸಿದರೆ ಜೀರ್ಣಕ್ರಿಯೆ ಉತ್ತಮಗೊಂಡು ಅಜೀರ್ಣತೆ ಸಮಸ್ಯೆ ದೂರಮಾಡುತ್ತದೆ.


ರಕ್ತ ಪರಿಶುದ್ಧಿ

ಪ್ರತಿನಿತ್ಯ ಸೋಂಪನ್ನು ಬಳಸಿದರೆ ಇದರಲ್ಲಿರುವ ಕೆಲವು ಅಂಶಗಳು ರಕ್ತದೊಳಗೆ ಸೇರಿ ರಕ್ತದ ಹಲವು ಸಮಸ್ಯೆಗಳಾದ ರಕ್ತದೊತ್ತಡ, ರಕ್ತದ ಕಲ್ಮಶಗಳನ್ನು ದೂರವಾಗಿರುತ್ತದೆ.


ಮೆದುಳು ಚುರುಕುಗೊಳಿಸುತ್ತದೆ

ಸೊಪ್ಪಿನ ಬಗ್ಗೆ ಹಲವಾರು ಯೂನಿವರ್ಸಿಟಿಗಳು ಸಂಶೋಧನೆಯ ನಡೆಸಿವೆ ಇದರ ಫಲವೇ ಮೆದುಳು ಸಂಬಂಧಿ ಕಾಯಿಲೆಗಳ ನಿವಾರಣೆಗೆ ಇದು ಒಂದು ಉತ್ತಮ ಆಹಾರ ಎಂದು.


ಬ್ಯೂಟಿ, ಉಸಿರಾಟಕ್ಕೆ ಸಹಕಾರಿ

ಉಸಿರಾಟದ ಸಮಸ್ಯೆ ಕೆಮ್ಮು ದಮ್ಮು ಇದ್ದರೆ ಇದನ್ನು ಬಳಸಲು ನಾವು ತಿಳಿಸುತ್ತೇವೆ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಸೋಂಪು ತುಂಬಾ ಸಹಕಾರಿ.


ಹೃದಯ ಸಂಬಂಧಿ ಕಾಯಿಲೆಯನ್ನು ದೂರ ಮಾಡುತ್ತದೆ

Fennel seedsನ್ನು ಪ್ರತಿನಿತ್ಯ ಬಳಸುವುದರಿಂದ ರಕ್ತದಲ್ಲಿರುವ ಕಲ್ಮಶಗಳು ದೂರವಾಗುತ್ತದೆ, ಜೀರ್ಣಾಂಗ ಕ್ರಿಯೆ ತುಂಬಾ ಸಲೀಸಾಗಿ ನಡೆಯುತ್ತದೆ, ಮಾನವನ ದೇಹದಲ್ಲಿ ಏರಿಳಿತಗಳು ಆಗದಂತೆ ಈ ಸೋಂಪು ಬಳಕೆ ಸಹಕಾರಿಯಾಗಿದೆ, ರಕ್ತಶುದ್ಧಿ ಆಗುವ ಕಾರಣ ಹೃದಯ ಸಂಬಂಧಿ ಕಾಯಿಲೆಗಳು ಕೂಡ ತುಂಬಾ ವಿರಳ.

ನಿದ್ರೆ

ಕೆಲವು ಜನರು ನಿದ್ರಾ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇಂಥವರಿಗೆ ಆಯುರ್ವೇದಿಕ್ ಡಾಕ್ಟರ್ ಸೋಂಪನ್ನು ಔಷಧಿಯಾಗಿ ಕೊಡುತ್ತಾ ಬಂದಿದ್ದಾರೆ ಇದಕ್ಕೆ ಮುಖ್ಯ ಕಾರಣ ಸೋಂಪು ಸೇವನೆ ತುಂಬಾ ತಂಪಾಗಿದ್ದು ನಿದ್ರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಸೂಕರ ನಿದ್ರೆಗೆ ನಾಂದಿಯಾಗುತ್ತದೆ.


ಕೂದಲಿನ ಆರೋಗ್ಯ

ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ paste ಮಾಡಿ ತಲೆಯ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡುತ್ತಾ ಬಂದರೆ ಡ್ಯಾಂಡ್ರಫ್, ಕೂದಲು ಉದುರುವ ಸಮಸ್ಯೆ, ಕೂದಲು ತುಂಡಾಗುವಿಕೆ ಗಣನೀಯವಾಗಿ ಕಡಿಮೆಯಾಗಿ ಬಿಡುತ್ತದೆ. ಇತ್ತೀಚೆಗೆ ಕೆಲವು ಆಯುರ್ವೇದಿಕ್ mouth freshner ಮಾರುಕಟ್ಟೆಯಲ್ಲಿವೆ ಇವುಗಳ ತಯಾರಿಕೆಯಲ್ಲಿ ಸೋಂಪನ್ನು ಬಳಸಿರುತ್ತಾರೆ ಕಾರಣ ಸೋಂಪು 1 freshner ಆಗಿ ಕಾರ್ಯನಿರ್ವಹಿಸುತ್ತದೆ ಅಲ್ಲದೆ ಹೊಟ್ಟೆಯನ್ನು ಸಡಿಲ ಮಾಡಿ ಆಹಾರ ಪಚನ ಕ್ರಿಯೆಯನ್ನು ಸುಲಭ ಮಾಡಿ ಬಿಡುತ್ತದೆ ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಇದರ ಬೇಡಿಕೆ ಹೆಚ್ಚುತ್ತಿದೆ.