ಬಿಸಿ ನೀರಿನ ಉಪಯೋಗಗಳು? ನಾವು ಆಹಾರ ತಿನ್ನಬೇಕಾದ ಹಲವು ಬಾರಿ ಯೋಚನೆ ಮಾಡಿ ತಿನ್ನಬೇಕಾದ ಸಮಯ ಬಂದೊದಗಿದೆ ಏಕೆಂದರೆ ಇತ್ತೀಚಿನ ಆಹಾರ ಸಂಸ್ಕರಿಸಿದ ಆಹಾರ, ಕೀಟನಾಶಕಗಳನ್ನು ಬಳಸಿ ಬೆಳೆದ ಆಹಾರ ಅಥವಾ ಅಧಿಕ ಇದು ಇಳುವರಿ ಪಡೆಯಲು ರಸಗೊಬ್ಬರಗಳನ್ನು ಬಳಸಿ ಬೆಳೆದ ಹಣ್ಣುಗಳು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಿಗುತ್ತಿವೆ.
ನೀರಿನ ಉಪಯೋಗಗಳು? ನಾವು ಹಣ್ಣುಗಳನ್ನು ತಿನ್ನುವಾಗ ಹಲವು ಬಾರಿ ತಪ್ಪು ಮಾಡುತ್ತೇವೆ ಹೇಗೆಂದರೆ ಎಲ್ಲಾದರೂ ಬಸ್ಟ್ಯಾಂಡಿನಲ್ಲಿ ಕುಳಿತಿದ್ದಾಗ ಪಕ್ಕದಲ್ಲಿ ಬಂದ ವ್ಯಾಪಾರಿಯಿಂದ ಹಣ್ಣು ತೆಗೆದುಕೊಂಡು ಹಾಗೆ ತಿಂದು ಬಿಡುತ್ತೇವೆ ಇದು ಎಷ್ಟರ ಮಟ್ಟಿಗೆ ಸರಿ ನೀವೇ ಯೋಚಿಸಿ.
Read: Kannada Rockers, Download dubbed Latest Movies In HD Format
ಹಣ್ಣುಗಳನ್ನು ತಿಂದು ನಂತರ ನೀರು ಕುಡಿಯಬಹುದೆ?
ಯಾವುದೇ ರೀತಿಯ ಹಣ್ಣು ಅಥವಾ ಉಪಹಾರ ಸೇವಿಸುವಾಗ ಸ್ವಚ್ಛತೆಗೆ ಅತಿ ಮುಖ್ಯ ಪ್ರಾಮುಖ್ಯತೆ ನೀಡುವುದು ತುಂಬಾ ಅವಶ್ಯಕ, ಸರಿಯಾಗಿ ಸ್ವಚ್ಛ ಮಾಡದೆ ತಿಂದ ಹಣ್ಣು ನಮ್ಮ ದೇಹಕ್ಕೆ ಅಪಾಯವನ್ನು ಒಡ್ಡಬಹುದು ಹೇಗೆಂದರೆ ಜ್ವರ, ನೆಗಡಿ, ಕೆಮ್ಮು ಹೊಟ್ಟೆನೋವು ಬೇದಿ ಅಂತಹ ಹಲವು ಬಗೆಯ ರೋಗಗಳು ನಮ್ಮನ್ನು ಕಾಡಬಹುದು ಇದೇ ಕಾರಣಕ್ಕೆ ನಾವು ತಿನ್ನುವ ಆಹಾರ ಶುಚಿ ಹಾಗೂ ರುಚಿಯಾಗಿರಬೇಕು ಎನ್ನುವುದು. ಹಲವರಿಗೆ ಹೊರಗಡೆಯಿಂದ ತಂದ ಹಣ್ಣುಗಳನ್ನು ಯಾವ ರೀತಿ ಸ್ವಚ್ಛ ಮಾಡಬೇಕೆಂಬುದು ಇದುವರೆಗೂ ತಿಳಿದಿಲ್ಲ, ನೀವು ಹೊರಗಡೆಯಿಂದ ತೊಂದ ಹಣ್ಣುಗಳನ್ನು ಬಿಸಿನೀರಿನಲ್ಲಿ ಅಥವಾ ಉಪ್ಪು ನೀರಿನಲ್ಲಿ ಶುಚಿಗೊಳಿಸುವುದು ಅತಿ ಅವಶ್ಯ.
ಸ್ನಾಕ್ಸ್ ಗಳನ್ನು ಬಿಟ್ಟು ಹಣ್ಣು ತಿನ್ನಿ
ಇತ್ತೀಚಿಗೆ ಹಲವಾರು ಊಟವಾದನಂತರ ತಿಂಡಿ ತಿಂದ ನಂತರ ಅಥವಾ ಕಾಫಿ ಕುಡಿದ ನಂತರ ಸ್ನ್ಯಾಕ್ಸ್ ಗಳನ್ನು ತಿನ್ನುವ ಹವ್ಯಾಸ ಮಾಡಿಕೊಂಡಿದ್ದಾರೆ ಇದು ಖಂಡಿತವಾಗಿಯೂ ಒಳ್ಳೆಯ ಆಹಾರ ಪದ್ಧತಿ ಅಲ್ಲ ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸ್ನಾಕ್ಸ್ ತಯಾರಿಸಲು ಹಲವು ಬಗೆಯ ರಾಸಾಯನಿಕ ಪದಾರ್ಥಗಳನ್ನು ಬಳಸಲಾಗುತ್ತದೆ ಇದು ನಮ್ಮ ದೇಹಕ್ಕೆ ಖಂಡಿತವಾಗಿಯೂ ಒಳ್ಳೆಯದಾದ ದಲ್ಲ ಇದೇ ಕಾರಣಕ್ಕೆ ಸ್ನ್ಯಾಕ್ಸ್ ನ ಬದಲು ನೀವು ಊಟ ತಿಂಡಿ ಅಥವಾ ಕಾಫಿ ಆದನಂತರ ಹಣ್ಣುಗಳನ್ನು ಶುಚಿಯಾಗಿ ತೊಳೆದು ತಿನ್ನುವುದರಿಂದ ದೇಹಕ್ಕೆ ಒಳ್ಳೆಯ ಪೋಷ್ಟಿಕಾಂಶ ದೊರೆಯುವುದರ ಜೊತೆಗೆ ನಮಗೆ ಇರುವ ಹಲವು ರೋಗಗಳು ದೂರಾಗುತ್ತವೆ. ಹಣ್ಣುಗಳು ನಮಗೆ ನೈಸರ್ಗಿಕವಾಗಿ ದೊರಕುತ್ತಿವೆ ಇವುಗಳನ್ನು ತಿನ್ನುವುದರಿಂದ ಹೊಟ್ಟೆ ಹಸಿವು ನಿವಾರಣೆ ಅನಾರೋಗ್ಯ ಅಥವಾ ನಮ್ಮ ಸೌಂದರ್ಯ ಅಭಿವೃದ್ಧಿ ಕೂಡ ಸಾಧ್ಯ.
ಮಧುಮೇಹಿಗಳು ಯೋಚಿಸಿ ಹಣ್ಣುಗಳನ್ನು ಸೇವಿಸಬೇಕು
ಸಕ್ಕರೆ ಕಾಯಿಲೆ ಇರುವವರು ತುಂಬಾ ಸೂಕ್ಷ್ಮವಾಗಿ ಹಣ್ಣುಗಳನ್ನು ಗಮನಿಸಿ ತಿನ್ನುವುದು ಉತ್ತಮ ಏಕೆಂದರೆ ಹಲವು ಹಣ್ಣುಗಳಲ್ಲಿ ಅತಿಯಾದ ಗ್ಲೈಸೆಮಿಕ್ ಸೂಚ್ಯಂಕ ಕಂಡುಬಂದಿದೆ ಹಲಸಿನ ಹಣ್ಣು, ಮಾವಿನಹಣ್ಣು ಸಿಬೇಕಾಯಿ ಇತ್ಯಾದಿ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಗ್ಲೈಸೆಮಿಕ್ ಇರುವುದರಿಂದ ಮಧುಮೇಹಿಗಳು ಈ ಹಣ್ಣುಗಳಿಂದ ಆದಷ್ಟು ದೂರ ಇರಬೇಕು.
ಕೆಲವು ಹಣ್ಣುಗಳನ್ನು ತಿನ್ನುವುದರಿಂದ ಸಕ್ಕರೆಯಂಶ ಮಧುಮೇಹಿಗಳಲ್ಲಿ ಹೆಚ್ಚಾಗಿ ಉತ್ಪತ್ತಿಯಾಗುವುದರಿಂದ ಹಲವು ಸಮಸ್ಯೆಗಳನ್ನು ಕಮ್ ಇದೇ ಕಾರಣಕ್ಕೆ ಹಣ್ಣುಗಳ ಸರಿಯಾದ ಆಯ್ಕೆ ಮಾಡಿ ನಂತರ ಸೇವಿಸಬೇಕು ಇನ್ನೊಂದು ಮುಖ್ಯವಾದ ವಿಚಾರ ಎಂದರೆ ಮಧುಮೇಹಿಗಳು ರಾತ್ರಿ ಮಲಗುವ ವೇಳೆ ಯಾವುದೇ ಕಾರಣಕ್ಕೂ ಹಣ್ಣುಗಳನ್ನು ಸೇವಿಸಬಾರದು ಏಕೆಂದರೆ ರಾತ್ರಿಯ ವೇಳೆ ಹಣ್ಣುಗಳ ಸೇವನೆಯಿಂದ ನಿಮ್ಮ ಶರೀರದಲ್ಲಿ ಅತಿ ಹೆಚ್ಚು ಪ್ರಮಾಣದ ಗ್ಲೂಕೋಸ್ ಬಿಡುಗಡೆಯಾಗಿ ಹಲವಾರು ಸಮಸ್ಯೆಗಳನ್ನು ತಂದೊಡ್ಡಬಹುದು.
ಹೊರಗಡೆ ಕತ್ತರಿಸಿ ಮಾರುವ ಹಣ್ಣುಗಳನ್ನು ಎಂದಿಗೂ ತಿನ್ನಬೇಡಿ
ಹೊರಗಡೆ ಹಲವು ಜನರು ಹಣ್ಣುಗಳನ್ನು ಸರಿಯಾಗಿ ತೊಳೆಯದೆ ಅಥವಾ ಸರಿಯಾಗಿ ಶೇಖರಣೆ ಮಾಡದೆ ಮಾರುತ್ತಾ ಇರುತ್ತಾರೆ ಹಣ್ಣುಗಳನ್ನು ನೀವು ತೆಗೆದುಕೊಂಡು ತಿನ್ನುವುದರಿಂದ ಹಲವು ಬಗೆಯ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಈಡಾಗಬೇಕಾಗುತ್ತದೆ, ಈಗಾಗಲೇ ನಮಗೆ ಗೊತ್ತಿರುವ ಹಾಗೆ ಹಲವು ರೈತರು ಹಣ್ಣುಗಳನ್ನು ಬೆಳೆಯುವ ಸಂದರ್ಭದಲ್ಲಿ ರಾಸಾಯನಿಕ ಪದಾರ್ಥಗಳು ಹಾಗೂ ವಿವಿಧ ಬಗೆಯ ಕೀಟನಾಶಕಗಳನ್ನು ಬಳಸುತ್ತಿದ್ದಾರೆ ಈ ರೀತಿ ಅಕಸ್ಮಾತಾಗಿ ನೀವು ತರ ತಿನ್ನುವ ಹಣ್ಣಿನಲ್ಲಿ ಬಳಸಿದ್ದರೆ ಸರಿಯಾಗಿ ತೊಳೆಯದೆ ತಿನ್ನುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಇತ್ತೀಚಿನ ದಿನಗಳಲ್ಲಿ ಹಲವು ಹಣ್ಣಿನ ವ್ಯಾಪಾರಿಗಳು ಕಾಯಿಗಳನ್ನು ಹಣ್ಣು ಮಾಡಲು ವಿಧ ಬಗೆಯ ಕೀಟನಾಶಕಗಳನ್ನು ಬಳಸುತ್ತಿದ್ದಾರೆ ಇದು ಖಂಡಿತವಾಗಿಯೂ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.