ನಿಮ್ಮ ನೆಚ್ಚಿನ ನಟ ಯಾರು

ದರ್ಶನ್ ಬಾಸ್ ನಮಗೆಲ್ಲಾ ಗೊತ್ತಿರುವ ಹಾಗೆ ಹಲವಾರು ರೀತಿಯ ದಾನ ಮಾಡುತ್ತಾರೆ ಹಾಗೂ ಮಾಡಿದ ದಾನ ಬೇರೆಯವರಿಗೆ ಗೊತ್ತಾಗಬಾರದು ಎಂಬ ನಿಯಮ ಪಾಲಿಸಿಕೊಂಡು ಬಂದಿದ್ದಾರೆ, ಕಳೆದ ಲಾಕ್ಡೌನ್ ಸಮಯದಲ್ಲಿ ಹಲವು ಪ್ರಾಣಿಗಳನ್ನು ಮೈಸೂರಿನ ಮೃಗಾಲಯದಲ್ಲಿ ದತ್ತು ಪಡೆದರು ಮುಖ್ಯವಾಗಿ ಇತ್ತೀಚಿಗೆ ಹುಲಿಯನ್ನು ದತ್ತು ಪಡೆದು ಅದರ ಕರ್ಚು ವೆಚ್ಚವನ್ನೆಲ್ಲ ಬರಿಸಲು ಒಪ್ಪಿಕೊಂಡಿದ್ದಾರೆ ಅದನ್ನು ಮಾಧ್ಯಮದವರಿಗೆ ತಿಳಿಸಲು ನಿರಾಕರಿಸಿದ್ದರು ಆದರೆ ಈ ವಿಷಯ ದರ್ಶನ್ ಸ್ನೇಹಿತರೊಬ್ಬರು ಹಂಚಿಕೊಂಡ ನಂತರವಷ್ಟೇ ಫ್ಯಾನ್ಸ್ ಗಳಿಗೆ ತಿಳಿಯಿತು ದರ್ಶನ್ ಬಾಸ್ ಫ್ರೀ ಇದ್ದಾಗಲೆಲ್ಲ ಫ್ಯಾನ್ಸ್ ಗಳ ಮದುವೆ, ಮನೆ, ಪ್ರಾಣಿಗಳನ್ನು ಖರೀದಿಸಿ ಸಾಕುವುದು, ಸಮಾಜಸೇವೆ ಇನ್ನಿತರ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ ಕಳೆದ ಭಾನುವಾರ ದರ್ಶನ್ ಅವರು ಒಂದು ಅನಾಥಾಶ್ರಮಕ್ಕೆ ಭೇಟಿ ನೀಡಿ ಅನಾಥಾಶ್ರಮದ ಸ್ಥಿತಿ ಚೆನ್ನಾಗಿಲ್ಲದ ಕಾರಣ ಅನಾಥಾಶ್ರಮಕ್ಕೆ 20 ಲಕ್ಷ ದೇಣಿಗೆ ನೀಡಿ ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಬಾರದೆಂದು ಮನವಿ ಮಾಡಿದ್ದರು ಆದರೆ ಕೆಲವು ಫ್ರೆಂಡ್ಸ್ ಗಳಿಂದ ಈ ವಿಷಯ ಮಾಧ್ಯಮಕ್ಕೆ ತಿಳಿದು ಬಂತು. ಒಟ್ಟಿನಲ್ಲಿ ಹೇಳಬೇಕಾದರೆ ದರ್ಶನ್ ಯಾವಾಗಲೂ ಸಮಾಜಸೇವೆ ಮಾಡಲು ಕಾತುರದಿಂದ ಕಾಯುತ್ತಿರುತ್ತಾರೆ ಹಾಗೂ ಅವರು ಮಾಡಿದ ಸೇವೆಯನ್ನು ಯಾರಿಗೂ ತಿಳಿಸಲು ಬಯಸುವುದಿಲ್ಲ, ಒಟ್ಟಿನಲ್ಲಿ ಬಲಗೈಯಲ್ಲಿ ಮಾಡಿದ ಕೆಲಸವನ್ನು ಎಡಗೈಗೆ ಗೊತ್ತಾಗಬಾರದು ಎಂಬ ಗಾದೆ ಇದೆ ಅದು ಇವರಿಗೆ ಪಕ್ಕ ಅನ್ವಯಿಸುತ್ತದೆ, ಕಳೆದ ವಾರ ರಿಲೀಸ್ ಆದ ರಾಬರ್ಟ್ ಮೂವಿ ತುಂಬಾ ಸಕ್ಸಸ್ ಕಂಡಿದೆ ಹಾಗೂ ಹಲವಾರು ದಾಖಲೆಗಳನ್ನು ಕನ್ನಡದಲ್ಲಿ ಮಾಡಿದೆ ಕಲೆಕ್ಷನ್ ಕೂಡ ತುಂಬಾ ಚೆನ್ನಾಗಿ ಆಗುತ್ತಿದೆ ಖುಷಿಯಲ್ಲಿರುವ ಡಿಬಾಸ್ ಹಲವಾರು ಸಮಾಜಮುಖಿ ಕಾರ್ಯಗಳನ್ನು ಬಿಡುವಿನ ಸಮಯದಲ್ಲಿ ಮಾಡುತ್ತಿರುತ್ತಾರೆ.

ಮೂವಿ ಶೂಟಿಂಗ್ ಟೈಮಲ್ಲಿ ಸಹ ಇವರು ಬೇರೆಯವರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ತಮ್ಮ ಸಹ ಕಲಾವಿದರು ಹಾಗೂ ಫೈಟಿಂಗ್ ಮಾಡಲು ಬಂದಿರುವ ಹುಡುಗರಿಗೆ ತಾವು ಏನು ಊಟ ಮಾಡುತ್ತಾರೆ ಆ ಊಟವೇ ನೀಡಬೇಕೆಂದು ತಾಕೀತು ಮಾಡುತ್ತಾರೆ ಹಾಗೂ ಫೈಟಿಂಗ್ ಹುಡುಗರಿಗೆ ಆ ದಿನವೇ ದಿನಗೂಲಿಯನ್ನು ನೀಡಬೇಕೆಂದು ತಾಕೀತು ಮಾಡುತ್ತಾರೆ ತನಗೆ ಬರಬೇಕಾದ ದುಡ್ಡಿನ ಬಗ್ಗೆ ಯಾವತ್ತೂ ಕೂಡ ಮಾತನಾಡುವುದಿಲ್ಲ ಯಾವಾಗಲೂ ಬೇರೆಯವರ ಏಳಿಗೆಯನ್ನೇ ಬಯಸುವ ನಮ್ಮ ಡಿ ಬಾಸ್ ಇದೇರೀತಿ ಹಲವು ಹಿಸ್ಟರಿಯನ್ನು ಕರ್ನಾಟಕದಲ್ಲಿ ನಿರ್ಮಿಸಲಿ ಎಂದು ನಾವು ಈ ಮೂಲಕ ಕೇಳಿಕೊಳ್ಳೋಣ. ಕನ್ನಡ ಚಿತ್ರರಂಗದಲ್ಲಿ ಕೆಲವು ವರ್ಷಗಳ ಹಿಂದೆ ಅಂಬರೀಶ್ ಅವರು ಕಲಿಯುಗ ಕರ್ಣ ಎಂಬ ಹೆಸರನ್ನು ಪಡೆದಿದ್ದರು ಅವರ ನಂತರ ಈಗ ದರ್ಶನ್ ಅಣ್ಣ ಆಸ್ಥಾನವನ್ನು ತುಂಬುತ್ತಾರೆ ಇದು ನಿಜವಾಗಿಯೂ ಖುಷಿಯ ಸಂಗತಿ ಇದೇರೀತಿ ಡಿ ಬಾಸ್ ತುಂಬಾ ಸಕ್ಸಸ್ ಅನ್ನು ಪಡೆಯಲಿ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಲಿ ಎಂದು ಹಾರೈಸೋಣ.


ಇನ್ನೂ ಫ್ಯಾನ್ಸ್ ಗಳಿಗೆ ಉದ್ದೇಶಿಸಿ ಮಾತನಾಡಿದ ದರ್ಶನ್ ನೀವು ಹತ್ತು ರೂಪಾಯಿ ದುಡಿಯುತ್ತಿದ್ದಾರೆ ಒಂದು ರೂಪಾಯಿಯನ್ನು ದಾನಮಾಡಿ ಎಂದು ಫ್ಯಾನ್ಸ್ ಗಳಲ್ಲಿ ಮನವಿ ಮಾಡಿದ್ದರು ಇದು ಖಂಡಿತವಾಗಿಯೂ ನಿಜವಲ್ಲವೇ.