Side Effects of Air Conditioner on Human Body : ಹವಾ ನಿಯಂತ್ರಣ ಯಂತ್ರ ಆರೋಗ್ಯಕ್ಕೆ ತುಂಬಾ ಹಾನಿಕಾರಕ

  

Side Effects of Air Conditioner on Human Body: ಯಾರು ಮನೆ, ಕಚೇರಿ,ತಮ್ಮ ಕಾರಿನಲ್ಲಿ ಹವಾ ನಿಯಂತ್ರಣ ಯಂತ್ರ ಹೆಚ್ಚಾಗಿ ಬಳಸುತ್ತಾರೆ ಅವರು ಈ ಲೇಖನವನ್ನು ಖಂಡಿತ ಓದಲೇಬೇಕು. ಕೆಲವು ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ಹೇಗೆ ಬಿಸಿಲು ಇರುತ್ತದೆ ಎಂದರೆ ನೆನೆಸಿಕೊಳ್ಳುವುದು ತುಂಬಾ ಭಯವಾಗುತ್ತದೆ ಆರೀತಿಯ ಬಿಸಿಲ ಧಗೆಯ ಇರುತ್ತದೆ ಹೀಗಾಗಿ ಕೆಲವರು ಮನೆ, ಕಚೇರಿ ಹಾಗೂ ಸ್ವಂತ ಕಾರಿನಲ್ಲಿ ಪ್ರತಿದಿನ ಏರ್ ಕಂಡೀಶನರ್ನ ಮೊರೆಹೋಗಿದ್ದಾರೆ ಇದು ಎಷ್ಟು ಸರಿ ಎನ್ನುವುದು ಮಾತ್ರ ಅವರು ಎಂದಿಗೂ ಯೋಚಿಸಿಲ್ಲ ಕೆಲವರು ಕೆಲವರು ಹೇರ್ಕಂಡಿಷನರ್ ಇಲ್ಲದೆ ಹೋದರೆ ಇರುವುದಕ್ಕೆ ಆಗುವುದಿಲ್ಲ ಎಂದು ಚಿಂತಿಸುತ್ತಾರೆ. ದಿನ ಪ್ರತಿ ಹೇರ್ಕಂಡಿಷನರ್ ಬಳಸುವುದರಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ನಿಮಗೆ ಏನಾದರೂ ಮಾಹಿತಿ ಇದೆಯಾ, ಇಲ್ಲವಾದಲ್ಲಿ ಖಂಡಿತವಾಗಿಯೂ ನೀವು ಈ ಬ್ಲಾಗನ್ನು ಓದಲೇಬೇಕು.


ಕಣ್ಣುಗಳ ಬರಿದಾಗುವಿಕೆ

ಕಣ್ಣುಗಳು ಒಣಗುವುದರಿಂದ ಏನೆಲ್ಲಾ ತೊಂದರೆಗಳು ಉಂಟಾಗುತ್ತವೆ ಎಂಬ ಮಾಹಿತಿ ನಿಮಗೆ ಇರದೇ ಇರಬಹುದು, ಕಣ್ಣುಗಳು ಒಣಗುವುದು, ತುರಿಕೆ, ಕೆಂಪಾಗುವುದು, ಕಿರಿಕಿರಿ, ಉರಿ ಕೂಡ ಸಂಭವಿಸಬಹುದು.


ತಲೆನೋವು ಬರುವುದು

ಮನೆಯ ಹೊರಗೆ ಹಾಗೂ ಒಳಗೆ ಉಷ್ಣತೆಯ ತುಂಬಾ ವ್ಯತ್ಯಾಸ ಇರುವುದರಿಂದ ಯಾರಾದರೂ ಮನೆಯ ಹೊರಗಿಂದ ಮನೆ ಒಳಗಡೆ ಪ್ರವೇಶಿಸಿದರೆ ಉಷ್ಣತೆಯ ತುಂಬಾ ವ್ಯತ್ಯಾಸ ಇರುವ ಕಾರಣ ನಮ್ಮ ದೇಹ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ ಇದೇ ಕಾರಣಕ್ಕೆ ನಮ್ಮ ದೇಹದಲ್ಲಿ ನಿರ್ಜಲೀಕರಣ ಉಂಟಾಗುವ ಸಾಧ್ಯತೆ ಇದೆ ಆದ್ದರಿಂದ ಆದಷ್ಟು ಹೇರ್ಕಂಡಿಷನರ್ ಬಳಸುವುದನ್ನು ತಪ್ಪಿಸಿ.


ಸೋಂಕು ಹರಡುವಿಕೆ

ನೀವು ಗಮನಿಸಿರಬಹುದು Air Conditioner ಗಾಳಿಯನ್ನು ನೀವು ಸೇವಿಸುತ್ತಾ ಹೋದರೆ ಮೂಗಿನ ನಾಳೆ ಒಣಗಿದಂತೆ ಅನುಭವ ಆಗುತ್ತದೆ ಈ ಕಾರಣದಿಂದ ಕಬದ ಕೊರತೆ ಆಗಿ ಸೋಂಕಿನ ಸಮಸ್ಯೆ ಉಂಟಾಗಬಹುದು, ನಿಮಗೆ ಗೊತ್ತಿರಲೇಬೇಕು ಕಾಪಾಡು ನಮ್ಮ ದೇಹದೊಳಗೆ ಸುಲಭವಾಗಿ ಯಾವುದೇ ರೀತಿಯ ಸೋಂಕುಗಳು ಹೋಗದಂತೆ ತಡೆದು ನಮ್ಮ ದೇಹವನ್ನು ಸುರಕ್ಷಿತವಾಗಿ ಇಡುವಲ್ಲಿ ಸಹಕರಿಸುತ್ತದೆ ಈ ರೀತಿಯ ಏರ್ ಕಂಡೀಶನರ್ ಬಳಕೆಯಿಂದ ಕಪದ ಕೊರತೆ ಉಂಟಾಗುತ್ತದೆ ಹಾಗೂ ದೇಹದೊಳಗೆ ಸೋಂಕು ಸುಲಭವಾಗಿ ಪ್ರವೇಶಿಸಲು ಅನುವುಮಾಡಿಕೊಡುತ್ತದೆ.


ಉಸಿರಾಟದ ಸಮಸ್ಯೆ

ಪ್ರತಿದಿನ Air Conditioner ಬಳಕೆಯಿಂದಾಗಿ ನಮ್ಮ ಗಂಟಲು ಹಾಗೂ ಮೂಗಿನ ಕ್ಷಮತೆ ಮೇಲೆ ಪರಿಣಾಮ ಉಂಟಾಗುತ್ತದೆ ಇದರಿಂದ ನಮ್ಮ ಉಸಿರಾಟ ವ್ಯವಸ್ಥೆಯಲ್ಲಿ ಏರುಪೇರು ಆಗಬಹುದು ಪರಿಣಾಮ ಉರಿಯೂತವು ಸಹ ಕಂಡುಬರಬಹುದು.


ಒಣಚರ್ಮದ ಸಮಸ್ಯೆ ಎದುರಾಗುತ್ತದೆ

ಯಾವಾಗಲೂ Air Conditionerನಲ್ಲಿ ಇರುವವರು ಈ ಸಮಸ್ಯೆಯನ್ನು ಸರ್ವೇಸಾಮಾನ್ಯವಾಗಿ ಎದುರಿಸಿರುತ್ತಾರೆ ಅತಿಯಾದ ಹೇರ್ಕಂಡಿಷನರ್ ಬಳಕೆ ತಲೆಬುರುಡೆ ಒಣಗಲು ಸಹಕರಿಸುತ್ತದೆ ಹಾಗೂ ಇದೇ ಕಾರಣಕ್ಕೆ ತಮ್ಮ ಕೂದಲ ಹಾನಿ ಆಗುವ ಸಾಧ್ಯತೆ ಕೂಡ ಇದೆ.


ಆಲಸ್ಯ ಬರುವಿಕೆ

ಏರ್ ಕಂಡೀಶನರ್ ಗಾಳಿ ಹಾಗೂ ನೈಸರ್ಗಿಕ ಗಾಳಿಯಲ್ಲಿ ತುಂಬಾ ವ್ಯತ್ಯಾಸವಿದೆ. ಏರ್ ಕಂಡೀಶನರ್ ಕೋಣೆಯಲ್ಲಿ ಹೆಚ್ಚು ಕಾಲ ಸಮಯ ಕಳೆಯುವರಲ್ಲಿ ಉದಾಸೀನತೆ ಅಥವಾ ಆಲಸ್ಯ ಕಂಡು ಬರುವುದು ಸಾಮಾನ್ಯ.


ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಎದುರಾಗಬಹುದು

ನಿಮಗೆ ಗೊತ್ತಿರಲಿ Air Conditioner ವ್ಯವಸ್ಥೆಯನ್ನು ಪ್ರತಿದಿನ ಶುದ್ಧಗೊಳಿಸಬೇಕು ಈ ರೀತಿ ಶುದ್ಧಗೊಳಿಸದಿದ್ದಲ್ಲಿ  ಮಾಲಿನ್ಯವು ಮನೆಯಲ್ಲಾ ಹರಡುವುದು ಹಾಗೂ ತಾವು ಇದೇ ಗಾಳಿಯನ್ನು ಸೇವಿಸುವುದರಿಂದ ಉತ್ತಮ ಅಥವಾ ಮುಂದೆ ಒಂದು ದಿನ ಉಸಿರಾಟದ ಸಮಸ್ಯೆ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಹೇರ್ಕಂಡಿಷನರ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದಿದ್ದರೆ ಅದರಲ್ಲಿರುವ ರಾಸಾಯನಿಕಗಳು ಕೆಲವು ಬಾರಿ ಸೋರಿಕೆ ಆಗುವ ಸಾಧ್ಯತೆ ಇದೆ ಈ ರೀತಿ ಸೋರಿಕೆ ಆದರೆ ಅದು ನೇರವಾಗಿ ನಿಮ್ಮ ದೇಹ ಸೇರಿ ಆರೋಗ್ಯ ಹಾನಿ ಆಗುವುದು ಸಹ ಸುಲಭ ಸಾಧ್ಯ.