ಗ್ಯಾಸ್ಟ್ರಿಕ್ ಗೆ ಶಾಶ್ವತ ಪರಿಹಾರ, ಗ್ಯಾಸ್ಟ್ರಿಕ್ ಲಕ್ಷಣಗಳು : Gastric Symptoms in Kannada

ಗ್ಯಾಸ್ಟ್ರಿಕ್ ಲಕ್ಷಣಗಳು? ಹೊಟ್ಟೆ ನೋವನ್ನು ಯಾರು ಅನುಭವಿಸಿಲ್ಲ ಹೇಳಿ ಇದು ಸಹಜ ಪ್ರಕ್ರಿಯೆ ನಿಜ, ಇದಕ್ಕೆ ಹಲವಾರು ಮನೆಯಲ್ಲೇ ಮದ್ದುಗಳು ಸಹ ಇದೆ. ಮನುಷ್ಯನ ಜೀವನದಲ್ಲಿ ಆರೋಗ್ಯದ ಏರುಪೇರು ಆಗುವುದು ಸರ್ವೇಸಾಮಾನ್ಯ ಏಕೆಂದರೆ ದಿನನಿತ್ಯ ಜೀವನದಲ್ಲಿ ಮನುಷ್ಯ ಹಲವಾರು ಕಡೆ ಓಡಾಟ ನಡೆಸಬೇಕು ಊಟ, ನೀರು, ನಿದ್ರೆ ಇವೆಲ್ಲವೂ ಜನರ ಅತಿ ಮುಖ್ಯ ಅಂಗ ಇದರಲ್ಲೇನಾದರೂ ಸ್ವಲ್ಪ ವ್ಯತ್ಯಾಸವಾದರೆ ಮನುಷ್ಯನ ಆರೋಗ್ಯ ಇರುವುದಂತೂ ನಿಜ ಅದರಲ್ಲಿ ಬಹುಮುಖ್ಯವಾಗಿ ಊಟ, ನೀರು ಬದಲಾವಣೆಯಿಂದ ಸಂಭವಿಸುವ ಅತಿ ಸಾಮಾನ್ಯ ತೊಂದರೆ ಎಂದರೆ ಅದು ಅಸಿಡಿಟಿ ಅಥವಾ ಹೊಟ್ಟೆ ನೋವು.


ಗ್ಯಾಸ್ಟ್ರಿಕ್ ಗೆ ಶಾಶ್ವತ ಪರಿಹಾರದ ಆಹಾರ ವಿಡಿಯೋ ನೋಡಿ


ಮನುಷ್ಯನ ಆಹಾರ ಪದ್ಧತಿ ಜೀವನ ಶೈಲಿ ದಿನ ಕಳೆದಂತೆ ತುಂಬಾ ಬದಲಾಗುತ್ತಿದೆ ಇದೆ ಈ ರೀತಿಯ ಸಮಸ್ಯೆಗಳಿಗೆ ಬಹುಮುಖ್ಯ ಕಾರಣವಾಗಿದೆ, ಜನರು ಇತ್ತೀಚಿನ ದಿನಗಳಲ್ಲಿ ತುಂಬಾ ಸ್ಟ್ರೆಸ್ ನಲ್ಲಿ ಇದ್ದಾರೆ ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ, ನಿದ್ರಿಸುವುದಿಲ್ಲ ಹಾಗೂ ಕೆಲವರು ನೀರನ್ನು ಸಹ ಸರಿಯಾಗಿ ಸೇವಿಸುತ್ತಿಲ್ಲ ಇದರ ಪರಿಣಾಮ ಈ ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ.

ಏನೇ ಇದ್ದರೂ ಹೊಟ್ಟೆ ಸಮಸ್ಯೆ ಬಂದಾಗ ಅದನ್ನು ಗಂಭೀರವಾಗಿ ಪರಿಗಣಿಸುವುದು ತುಂಬಾ ಅವಶ್ಯಕ, ಅಸಡ್ಡೆ ತೋರಿಸಿದರೆ ಮುಂದೆ ಈ ಸಮಸ್ಯೆ ಉಲ್ಬಣಿಸಿ ತುಂಬಾ ಗಂಭೀರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಣ್ಣ ಪ್ರಮಾಣದಲ್ಲಿ ಹೊಟ್ಟೆನೋವು ಸಂಭವಿಸಿದರೆ ಮನೆಯಲ್ಲೇ ಸಿಗುವ ಓಂ ಕಾಳುಗಳನ್ನು ಸೇವಿಸುವುದರಿಂದ ಸ್ವಲ್ಪಮಟ್ಟಿನ ಉಪಶಮನ ದೊರೆಯುತ್ತದೆ ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


ಹೊಟ್ಟೆನೋವು ಹಲವು ಜನರಿಗೆ ಹಲವು ಕಾರಣಗಳಿಂದ ಹಾಗೂ ಹಲವು ವಿಧದಲ್ಲಿ ಬರುತ್ತದೆ ಅದರಲ್ಲಿ ಬಹುಮುಖ್ಯವಾಗಿ ಪುಟ್ ಪಾಯಿಸೋನಿಂಗ್, ಅಜೀರ್ಣ, ಗ್ಯಾಸ್ಟ್ರಿಕ್ನಿಂದ ಕೂಡ ಹೊಟ್ಟೆ ನೋವು ಬರುತ್ತದೆ.


ಸ್ವಲ್ಪ ಓಂಕಾಳುಗಳನ್ನು ನೀರಿನಲ್ಲಿ ಸ್ವಲ್ಪ ಸಮಯದವರೆಗೆ ನೆನೆಸಿ ಅಥವಾ ಸ್ವಲ್ಪ ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ ಆ ನೀರನ್ನು ಪ್ರತಿನಿತ್ಯ ಸೇವಿಸುವುದರಿಂದ ಕ್ರಮೇಣ ನಿಮ್ಮ ಹೊಟ್ಟೆನೋವು ದೂರವಾಗುತ್ತದೆ. ಹಲವು ಜನರು ಓಂಕಾಳುಗಳನ್ನು ಊಟವಾದ ನಂತರ ಜಗಿದು ತಿನ್ನುತ್ತಾರೆ ಇದು ಕೂಡ ಉತ್ತಮ ಆರೋಗ್ಯ ಅಭ್ಯಾಸವೇ.

ಇದನ್ನು ಓದಿತೂಕ ಇಳಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟ್ರಿಕ್ಸ್ 


ಗ್ಯಾಸ್ಟ್ರಿಕ್ ಗೆ ಶಾಶ್ವತ ಪರಿಹಾರ ನೀವು ಓಂಕಾಳು ನೀರನ್ನು ಈ ರೀತಿ ತಯಾರಿಸಬಹುದು

  1. ಒಂದು ಚಮಚ ಓಂ ಕಾಳುಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಅಥವಾ ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಇಟ್ಟು ಆ ನೀರನ್ನು ಪ್ರತಿನಿತ್ಯ ಸೇವಿಸುವುದರಿಂದ ಹೊಟ್ಟೆಯ ನೋವಿನ ಸಮಸ್ಯೆ ದೂರವಾಗುತ್ತದೆ ಹಾಗೂ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.
  2. ಕೆಲವರು ಪ್ರತಿನಿತ್ಯ ಎಲೆ ಅಡಿಕೆ ಹಾಕಿಕೊಳ್ಳುವ ವಾಡಿಕೆ ಇಟ್ಟುಕೊಂಡಿದ್ದಾರೆ ನೀವು ಓಂ ಕಾಳುಗಳನ್ನು ಎಲೆಅಡಿಕೆ ಜೊತೆ ಮಿಶ್ರಣ ಮಾಡಿ ಜಗಿದು ತಿನ್ನುವುದರಿಂದ ನಿಮ್ಮ ಜೀರ್ಣಶಕ್ತಿ ಹೆಚ್ಚಾಗುವುದಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
  3. ಓಂಕಾಳು, ಶುಂಠಿ ಕಷಾಯ - ಕೆಲವರು ಪ್ರತಿನಿತ್ಯ ಕಷಾಯ ಕುಡಿಯುವುದು ವಾಡಿಕೆ ಅದರಲ್ಲೂ ಬಹುಮುಖ್ಯವಾಗಿ ಶುಂಠಿ ಕಷಾಯವನ್ನು ತಯಾರಿಸುವ ಸಮಯದಲ್ಲಿ ಸ್ವಲ್ಪ ಪ್ರಮಾಣದ ಓಂ ಕಾಳುಗಳನ್ನು ಮಿಕ್ಸ್ ಮಾಡಿ ಕುದಿಸಿ ಬಿಸಿ ಇರುವ ಸಮಯದಲ್ಲಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ನೋವು ಸಮಸ್ಯೆ ಸಂಭವಿಸುವುದಿಲ್ಲ.