ಸಕ್ಕರೆ ಕಾಯಿಲೆಗೆ ಆಹಾರ ? ಕೆಲವು ಅಧ್ಯಯನಗಳ ಪ್ರಕಾರ ಬೆಳಗಿನ, ರಾತ್ರಿಯ ಊಟವನ್ನು ಯಾರು ಬೇಗ ಮಾಡುತ್ತಾರೋ ಅವರಿಗೆ ಸಕ್ಕರೆ ಕಾಯಿಲೆ ಸಂಭವಿಸುವುದು ಕಡಿಮೆ ಎಂಬ ಮಾಹಿತಿ ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಹಿಂದಿನ ಕಾಲದಲ್ಲಿ ನಮ್ಮ ಅಜ್ಜಿ, ತಾತಂದಿರು ಹೇಳುತ್ತಿದ್ದ ಹಾಗೆ ಯಾರು ಬೇಗ ಮಲಗಿ, ಬೆಳಿಗ್ಗೆ ಬೇಗ ಹೇಳುತ್ತಾರೋ ಅವರಿಗೆ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ ಎಂಬ ಮಾತು ನೆನಪಿರಬಹುದು ಇದು ನಿಜ ಕೂಡ ಹೇಗೆಂದರೆ ಹಲವು ವೈದ್ಯಕೀಯ ಸಂಸ್ಥೆಗಳು ಇದರ ಬಗ್ಗೆ ಅಧ್ಯಯನ ನಡೆಸಿ ಈ ಮಾಹಿತಿ ಹೊರಬಂದಿದೆ.
ನೀವು ಶುಗರ್ ಕಂಟ್ರೋಲ್ ಆಹಾರ ವಿಡಿಯೋ ನೋಡಿ
ರಕ್ತದಲ್ಲಿ ಇನ್ಸುಲಿನ್ ಮಟ್ಟ
ಯಾವ ಜನರು ಉತ್ತಮ ಊಟ ಆಗುವ ನಿದ್ರೆಯಲ್ಲಿ ಸಮತೋಲನ ಕಾಪಾಡಿಕೊಂಡು ಬರುತ್ತಿದ್ದಾರೆ ಅವರಿಗೆ ಇನ್ಸುಲಿನ್ ಸಮತೋಲನದಲ್ಲಿ ಇರುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ, ಸಕ್ಕರೆ ಕಾಯಿಲೆ ಬಗ್ಗೆ ಅಧ್ಯಯನ ನಡೆಸಿದ ಕೆಲವು ಕಾಲೇಜುಗಳು ಕೆಲವು ಜನರನ್ನು ಆಯ್ಕೆ ಮಾಡಿ ಯಾವುದೇ ಸಮಯ ವ್ಯತ್ಯಾಸವಿಲ್ಲದೆ ಸರಿಯಾಗಿ 8:00 ಗಂಟೆಗೆ ಹಾಗೂ 7:00 ಗಂಟೆಗೆ ಊಟ ನೀಡುತ್ತಾ ಬಂದರು ಕೆಲವು ದಿನಗಳ ನಂತರ ಅವರ ರಕ್ತ ಮಾದರಿಯನ್ನು ಪರೀಕ್ಷಿಸಿದರು ನಂತರ ತಿಳಿದು ಬಂದ ಸುದ್ದಿ ಏನೆಂದರೆ ಇನ್ಸುಲಿನ್ ಪ್ರಮಾಣವನ್ನು ಸಮತೋಲನದಲ್ಲಿ ಇರುವುದು ಸಾಬೀತಾಗಿದೆ.
ಆಹಾರ ಸೇವನೆ ಕ್ರಮ - ಮಧುಮೇಹಕ್ಕೆ ಶಾಶ್ವತ ಪರಿಹಾರ
ನಮ್ಮ ಆಹಾರಸೇವನೆಯ ರೀತಿ ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಇನ್ನೂ ಹಲವಾರು ಜನರಿಗೆ ಗೊತ್ತಿಲ್ಲ ಬಹುಮುಖ್ಯವಾಗಿ ಬೆಳಗ್ಗೆ ಹಾಗೂ ಊಟವನ್ನು ಸರಿಯಾದ ಸಮಯಕ್ಕೆ ಸೇವಿಸಬೇಕು. ಸರಿಯಾದ ಸಮಯ ಪಾಲಿಸಿಕೊಂಡು ಹೋಗದಿದ್ದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ತುಂಬಾ ಪರಿಣಾಮ ಬೀರುವುದಲ್ಲದೆ ಇನ್ಸುಲಿನ್ ಪ್ರಮಾಣ ಕೂಡ ಕಂಟ್ರೋಲ್ ಗೆ ಸಿಗುವುದಿಲ್ಲ ಇಂತಹ ಸಮಯದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡದಂತಹ ದೀರ್ಘ ಕಾಯಿಲೆಗಳು ನಿಮ್ಮನ್ನು ಕಾಡಲಿವೆ, ನೀವೇನಾದರೂ ಚಾಕ್ಲೇಟ್ ಪ್ರಿಯರಾಗಿದ್ದರೆ ರಾತ್ರಿಯ ವೇಳೆ ಮಲಗುವಾಗ ಖಂಡಿತವಾಗಿಯೂ ಸೇವಿಸಬೇಡಿ ಏಕೆಂದರೆ ನಾವು ತಿಂದ ಆಹಾರದಿಂದಲೇ ನಮಗೆ ಇನ್ಸುಲಿನ್ ಮತ್ತು ಗ್ಲೂಕೋಸ್ ದೊರಕುತ್ತದೆ. ಮೇದೋಜೀರಕಗ್ರಂಥಿ ಇಂದ ನಮಗೆ ಇನ್ಸುಲಿನ್ ದೊರಕುತ್ತದೆ ಚಾಕ್ಲೇಟ್ ಅನ್ನು ಅತಿಯಾಗಿ ರಾತ್ರಿಯ ವೇಳೆ ತಿನ್ನುವುದರಿಂದ ನಿಮ್ಮ ಗ್ಲುಕೋಸ್ ಜೀವಕೋಶಗಳಿಗೆ ಇನ್ಸುಲಿನ್ ಪ್ರತಿರೋಧ ಒಡ್ಡುತ್ತದೆ ಇಂತಹ ಸಮಯದಲ್ಲಿ ನೀವು ಮಧುಮೇಹ type-2 ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಸಕ್ಕರೆ ಪ್ರಮಾಣ ಹೆಚ್ಚಾಗುವುದು ಹಾಗೂ ಇನ್ಸುಲಿನ್ ಪ್ರತಿರೋಧ ಶಕ್ತಿ ಪಡೆಯುವುದು ನಮ್ಮ ಜೀರ್ಣಕ್ರಿಯೆಯಿಂದ ಕಾರ್ಬೊಹೈಡ್ರೇಟ್ ಕೊಬ್ಬು ಪ್ರೋಟೀನ್ ಪ್ರಕ್ರಿಯೆಯಲ್ಲಿ ಅಡ್ಡಿ ಉಂಟಾದಾಗ ಮಧುಮೇಹದಂತಹ ದೀರ್ಘ ಕಾಯಿಲೆಗಳು ಬರುತ್ತವೆ ಹಾಗಾಗಿ ಎಲ್ಲರೂ ತಮ್ಮ ಆಹಾರ ಸೇವನೆಯನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಬೇಕು.
ಇದನ್ನು ಓದಿ: ಬಾಯಾರಿದಾಗ ಮಾತ್ರ ನೀರು ಕುಡಿಯುವುದು ತುಂಬಾ ತಪ್ಪು
ಭಾರತೀಯ ಪೌಷ್ಟಿಕಂಶ ಪರೀಕ್ಷೆ ಅಧ್ಯಯನದಲ್ಲಿ ಒಟ್ಟು ಐದು ಸಾವಿರ ಜನರು ಭಾಗವಹಿಸಿದ್ದರು ಇವರನ್ನು ಒಟ್ಟು ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು 10 ಗಂಟೆಗಳ ಕಡಿಮೆ ಅವಧಿ 13 ಗಂಟೆ ಹಾಗೂ 15 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಊಟ ಸೇವಿಸುವುದು ಎಂಬ ನಿಯಮ ಮಾಡಿ ವಿಂಗಡಿಸಿದರು ಹಾಗೂ ಅದರ ಬಗ್ಗೆ ಅಧ್ಯಯನ ಕೂಡ ನಡೆಸಿದರು, ಇದರಿಂದ ತಿಳಿದು ಬಂದ ಉಪಯುಕ್ತ ಮಾಹಿತಿ ಎಂದರೆ ಯಾರು ಊಟವನ್ನು ಹೊತ್ತು ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಸೇವಿಸುತ್ತಾರೋ ಅವರ ಇನ್ಸುಲಿನ್ ಪ್ರಮಾಣ ಸಮತೋಲನದಲ್ಲಿ ಇತ್ತು ಇನ್ನುಳಿದವರ ಇನ್ಸುಲಿನ್ ಪ್ರಮಾಣ ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆ ಆಗಿತ್ತು. ಇದರಿಂದ ತಿಳಿದ ಮಾಹಿತಿಯೆಂದರೆ ಎಲ್ಲರೂ 10 ಗಂಟೆ ಅಂತರದ ಒಳಗೆ ಊಟ ಮಾಡಬೇಕು ಹಾಗೂ ಬೆಳಗ್ಗೆ, ರಾತ್ರಿಯ ವೇಳೆ ಅತಿ ಬೇಗ ಅಂದರೆ 8 ಗಂಟೆ ಒಳಗೆ ಊಟ ಮುಗಿಸಬೇಕು ಎನ್ನುವುದು.