ನಮ್ಮಿಬ್ಬರಲ್ಲಿ ಯಾರನ್ನೂ ನೀವು ಹೆಚ್ಚು ಇಷ್ಟಪಡ್ತೀರಾ ಹೇಳಿ ಶಿವ

ಕರ್ನಾಟಕದಲ್ಲಿ ಡಿ ಬಾಸ್ ಯಾರಿಗೆ ಗೊತ್ತಿಲ್ಲ ಹೇಳಿ, ಕಳೆದ 25 ವರ್ಷಗಳಿಂದ ನಟಿಸುತ್ತಿರುವ ಡಿ ಬಾಸ್ ಹಲವಾರು ಹಿಟ್ ಸಿನಿಮಾಗಳನ್ನು ಕನ್ನಡಿಗರಿಗೆ ನೀಡಿದ್ದಾರೆ ಕಳೆದ ಒಂದುವರೆ ವರ್ಷದಿಂದ ಇವರ ಯಾವುದೇ ಸಿನಿಮಾ ರಿಲೀಸಾಗಲಿಲ್ಲ ಕಾರಣ ನಿಮಗೆಲ್ಲ ಗೊತ್ತೇ ಇದೆ. ಈಗ ತಾನೇ ರಿಲೀಸ್ ಆಗಿರುವ ರಾಬರ್ಟ್ ಮೂವಿ ಕನ್ನಡ,ತಮಿಳು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದೆ ಅತಿ ಹೆಚ್ಚು ಬಡ್ಜೆಟ್ ಮೂವಿ ಆದ್ದರಿಂದ ಪ್ರಮೋಷನ್ ತುಂಬಾ ಚೆನ್ನಾಗಿ ಮಾಡಿರುವ ಸಿನಿಮಾ ತಂಡ ಕರ್ನಾಟಕದ ವಿವಿಧ ಪ್ರದೇಶಗಳಿಗೆ ತೆರಳಿ ಸಿನಿಮಾವನ್ನು ಲಾಂಚ್ ಮಾಡಿದ್ದಾರೆ.ಮಾರ್ಚ್ 11ರಂದು ತೆರೆಕಂಡ ರಾಬರ್ಟ್ ಸಿನಿಮಾ ರೆಕಾರ್ಡ್ ಗಳ ಮೂಲಕ ಮುನ್ನುಗ್ಗುತ್ತಿದೆ ಹಾಗೂ ಹಲವಾರು ರೆಕಾರ್ಡುಗಳನ್ನು ಮುರಿಯಿತು ಕೇವಲ ಮೂರೇ ದಿನಗಳಲ್ಲಿ 50 ಕೋಟಿ ಕಲೆಕ್ಷನ್ ಮಾಡಿರುವ ಈ ಸಿನಿಮಾ ಇತ್ತೀಚೆಗೆ ಬಿಡುಗಡೆಯಾದ ಪೊಗರು ಮೂವಿ ಯನ್ನು ಮೀರಿಸಿದೆ.ದರ್ಶನ್ ಫ್ಯಾನ್ಸ್ ಗಳು ಕಳೆದ ಒಂದುವರೆ ವರ್ಷದಿಂದ ಇವರ ಸಿನಿಮಾಗಾಗಿ ಕಾಯ್ದುಕೊಳ್ಳುತ್ತಿದ್ದರು Corona ಕಾರಣದಿಂದ ಯಾವುದೇ ಇವರ ಸಿನಿಮಾ ರಿಲೀಸ್ ಆಗಿರಲಿಲ್ಲ ಈಗ ಹಲವು ಅಡೆತಡೆಗಳ ನಂತರ ಇವರ ಸಿನಿಮಾ ರಿಲೀಸ್ ಆಗಿ ಫ್ಯಾನ್ಸ್ ಮುಖದಲ್ಲಿ  ಸಂತಸ ತಂದಿದೆ.

ಹಲವರು ಹೇಳುವಂತೆ ಕರ್ನಾಟಕದಲ್ಲಿ ಡಿ ಬಾಸ್ಗೆ  ಹೆಚ್ಚಿನ ಫ್ಯಾನ್ಸ್ ಗಳು ಇರುವುದು ಇವರ ಹೆಸರಿನಲ್ಲಿ ಹಲವಾರು ಸಂಘ ಸಂಸ್ಥೆಗಳು ತೆರೆದುಕೊಂಡಿವೆ.50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಹಲವಾರು ಹಿಟ್ ಸಿನಿಮಾಗಳನ್ನು ಕನ್ನಡಿಗರಿಗೆ ನೀಡಿದ್ದಾರೆ ದರ್ಶನ್ ತಮ್ಮ ನಟನೆ, ಡ್ಯಾನ್ಸ್  ಹಾಗೂ ಫೈಟ್ನ ಮೂಲಕ ತುಂಬಾ ಜನ ಮನ್ನಣೆ ಪಡೆದಿದ್ದಾರೆ. ಧ್ರುವ ಸರ್ಜಾ ಕೇವಲ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ ನಟಿಸಿದ ಎಲ್ಲಾ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದೆ, ಪೊಗರು ಸಿನಿಮಾದ ಶೂಟಿಂಗ್ ಕಳೆದ ಎರಡೂವರೆ ವರ್ಷದಿಂದ ನಡೆದಿತ್ತು ಈ ಸಿನಿಮಾದಲ್ಲಿ ಹಲವಾರು ಇಂಟರ್ನ್ಯಾಷನಲ್ ಬಾಡಿ ಬಿಲ್ಡರ್ಸ್ ನಟಿಸಿದ್ದಾರೆ ಧ್ರುವ ಸರ್ಜಾರಿಗೆ ದರ್ಶನ್ ಹೋಲಿಸಿದರೆ ಫ್ಯಾನ್ ಫಾಲವರ್ಸ್ ತುಂಬಾ ಕಮ್ಮಿ ಏಕೆಂದರೆ ಇವರು ಇತ್ತೀಚಿಗಷ್ಟೇ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದವರು. ಇವರಿಬ್ಬರ ಸಿನಿಮಾಗಳು ಕೇವಲ ಒಂದು ತಿಂಗಳ ಅಂತರದಲ್ಲಿ ಬಿಡುಗಡೆಗೊಂಡು ಹಲವು ದಾಖಲೆಗಳನ್ನು ನುಚ್ಚುನೂರು ಗೊಳಿಸಿವೆ.

ನವ ನಾಯಕನಾಗಿರುವ ದ್ರುವ ಸರ್ಜಾ ನಟನೆ,ಡ್ಯಾನ್ಸ್ ಹಾಗೂ ಫೈಟ್ಲ್ಲಿ ದರ್ಶನ್ಗಿಂತ ಏನು ಕಮ್ಮಿಯಿಲ್ಲ.