ಕಳೆದ ಒಂದುವರೆ ವರ್ಷದಿಂದ ದರ್ಶನ್ ಅವರ ಯಾವ ಮೂವಿಯು ಸಹ ತೆರೆ ಕಂಡಿಲ್ಲ ಕಾರಣ ನಿಮಗೆಲ್ಲ ಗೊತ್ತೇ ಇದೆ ರಾಬರ್ಟ್ ಮೂವಿ ಕಳೆದ ವರ್ಷವೇ ತೆರೆಕಾಣಬೇಕಿತ್ತು ಆದರೆ ಕರೋನಾ ಕಾರಣದಿಂದ ರಿಲೀಸ್ ಆಗಿಲ್ಲ ಇದೀಗ ಮಾರ್ಚ್ 11ರಂದು ಈ ಮೂವಿ ತೆರೆಕಾಣಲಿದೆ ಕನ್ನಡ ತಮಿಳು ತೆಲುಗು ಭಾಷೆಯಲ್ಲಿಯೂ ಕೂಡ ಈ ಮೂವಿ ಡಬ್ ಆಗಿ ತೆರೆಕಾಣುತ್ತಿದೆ. ರಾಬರ್ಟ್ ಸಿನಿಮಾ ಬಹುನಿರೀಕ್ಷಿತ ಸಿನಿಮಾವಾಗಿದೆ ಬಹುತೇಕ ಜನರು ಕಾತುರದಿಂದ ಕಾಯುತ್ತಿದ್ದರು ಇದೀಗ ಮೂವಿ ತೆರೆಕಾಣುತ್ತಿದೆ ಈ ಮೂವಿಗೆ ಉಮಾಪತಿಯವರು ನಿರ್ಮಾಣ ಮಾಡಿದ್ದಾರೆ ಹಾಗೂ ಸುಧೀರ್ ಮಗನಾದ ತರುಣ್ ನಿರ್ದೇಶಿಸಿದ್ದಾರೆ.
ರಾಬರ್ಟ್ ಮೂವಿಯಲ್ಲಿ ಆಶಾ ಬಟ್ ಎಂಬ ಹೊಸ ನಾಯಕಿ ಪರಿಚಯಿಸಲಾಗಿದೆ ಈಗಾಗಲೇ ಇವರು ತಮ್ಮ ನಟನೆಯನ್ನು ಬಾಲಿವುಡ್ನಲ್ಲಿ ತೋರಿಸಿದ್ದಾರೆ ಹಾಗೂ ತಮ್ಮ ಎರಡನೇ ಮೂವಿಯನ್ನು ಕನ್ನಡದಲ್ಲೇ ಮಾಡುತ್ತಿದ್ದಾರೆ, ಆಶಾ ಭಟ್ ಉತ್ತರ ಕರ್ನಾಟಕದವರು ಹಾಗೂ ಬಾಲಿವುಡ್ನಲ್ಲಿ ಈಗಾಗಲೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಸಿನಿಮಾವನ್ನು ಕನ್ನಡ,ತಮಿಳು, ತೆಲುಗುವಿನಲ್ಲೂ ಸಹ ತೆಗೆದಿದ್ದಾರೆ. ಒಂದೇ ದಿನ ಎಲ್ಲಾ ಭಾಷೆಯಲ್ಲಿ ಈ ಮೂವಿ ತೆರೆಕಾಣುತ್ತಿದೆ. ಈ ಸಿನಿಮಾಕ್ಕೆ ತೆಲುಗಿನಲ್ಲಿ ಮೊದಮೊದಲು ವಿರೋಧ ವ್ಯಕ್ತಪಡಿಸಿದ್ದರು ಅನಂತರ ರಾಬರ್ಟ್ ಸಿನಿಮಾ ತಂಡ ಕನ್ನಡ ಸಿನಿಮಾ ಬೋರ್ಡ್ನಲ್ಲಿ ಮೊಕದ್ದಮೆಯನ್ನು ಹೂಡಿದರು ತದನಂತರ ತೆಲುಗುವಿನಲ್ಲಿ ಸಹ ಈ ಮೂವಿ ರಿಲೀಸ್ ಮಾಡಲು ಒಪ್ಪಿಕೊಂಡರು.
ಈ ಮೂವಿಗೆ ಹರಿಕೃಷ್ಣ ಮ್ಯೂಸಿಕ್ ಡೈರೆಕ್ಟ್ ಮಾಡಿದ್ದಾರೆ ಈಗಾಗಲೇ ಈ ಮೂವಿಯ 2 ಸಾಂಗ್ ಗಳು ತುಂಬಾ ಹಿಟ್ ಆಗಿವೆ ನಿಮಗೆಲ್ಲ ಗೊತ್ತಿರುವ ಹಾಗೆ ಇದು ತುಂಬಾ ಹೈ ಬಜೆಟ್ ಮೂವಿ ಆಗಿದ್ದು ಖಂಡಿತವಾಗಿಯೂ ಜನರ ಮನಸ್ಸನ್ನು ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಮೂವಿ ನಿರ್ಮಾಣದ ತಂಡಕ್ಕಿದೆ ಈಗಾಗಲೇ ಉತ್ತಮ ಅಡ್ವಟೈಸ್ಮೆಂಟ್ ಗಳನ್ನು ಮೂವಿತಂಡ ಮಾಡುತ್ತಲೇ ಬಂದಿದೆ, ದರ್ಶನ್ ಅಭಿಮಾನಿಗಳಿಗಂತೂ ಮಾರ್ಚ್ 11 ಹಬ್ಬವಿದ್ದಂತೆ ಬಹುದಿನಗಳಿಂದ ದರ್ಶನ್ ಫ್ಯಾನ್ಸ್ ಗಳು ದರ್ಶನ್ ಮೂವಿ ಗಾಗಿ ಕಾಯುತ್ತಿದ್ದರು ಕೊನೆಗೂ ಅವರ ಮೂವಿ ರಿಲೀಸ್ ಆಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ.
ಚಿಕ್ಕಣ್ಣ ಈ ಮೂವಿಯಲ್ಲಿ ಕಾಣಿಸಿಕೊಂಡಿದ್ದು ತುಂಬಾ ನಿಮ್ಮನ್ನು ನಗಿಸಲಿದ್ದಾರೆ ಈ ಮೂವಿ ಕಾಮಿಡಿ ಫೈಟ್ ಹಾಗೂ ಉತ್ತಮ ಕಥೆಯನ್ನು ಹೊಂದಿದ್ದು ಲವ್ ಸ್ಟೋರಿಯು ಸಹ ಇದರಲ್ಲಿದೆ.
ಒಟ್ಟಿನಲ್ಲಿ ಹೇಳಬೇಕಾದರೆ ಈ ಮೂವಿ ಕಳೆದ ವಾರ ರಿಲೀಸ್ ಆದ ಪೊಗರು ಮೂವಿ ಗಿಂತ ತುಂಬಾ ಚೆನ್ನಾಗಿದೆ ನೀವೆಲ್ಲರೂ ದಯವಿಟ್ಟು ಕುಟುಂಬ ಸಮೇತರಾಗಿ ಹೋಗಿ ಮೂವಿಯನ್ನು ಆನಂದಿಸಿ, ಜೈ ಜೈ ಜೈ ಶ್ರೀ ರಾಮ್.