valentines day gifts - ವ್ಯಾಲೆಂಟೈನ್ಸ್ ಡೇ ಎಂದರೇನು ಅದನ್ನು ನಾವು ಏಕೆ ಆಚರಿಸುತ್ತೇವೆ ತಿಳಿದುಕೊಳ್ಳಿ

3ನೇ ಸೆಂಚುರಿ ಯಲ್ಲಿ ರೋಮನ್ ಸಾಮ್ರಾಜ್ಯವನ್ನು ಆಳುತ್ತಿದ್ದ ಎರಡನೆಯ ಕ್ಲಾಡಿಯಸ್, ಇವನ ಅಡ್ಡಹೆಸರು ಕ್ರೂರಿ ಕ್ಲಾಡಿಯಸ್ ಎಂದೇ ಜನರು ಕರೆಯುತ್ತಿದ್ದರು ಇವನು ತುಂಬಾ ಕ್ರೂರಿ ಹಾಗೂ ಆಗಾಗ್ಗೆ ತುಂಬಾ ಯುದ್ಧಗಳನ್ನು ಮಾಡುತ್ತಿದ್ದ.

ಒಂದು ದಿನ ಇವನ ಸೇನಾಧಿಪತಿಯು ಓಡಿಬಂದು ನಾವು ಮೈಕಲ್ಸ್ ವಿರುದ್ಧ ಯುದ್ಧದಲ್ಲಿ ಸೋತೆವು ಎಂದು ತಿಳಿಸಿದನು ಇದಕ್ಕೆ ಕೋಪಗೊಂಡ ರಾಜ ಕ್ಲಾಡಿಯಸ್ ಮೈಕಲ್ಸ್ ರು  ತುಂಬಾ ವೀಕ್ ಆಗಿದ್ದರು ಆದರೂ ಯುದ್ಧವನ್ನು ಹೇಗೆ ಗೆದ್ದರು ಎಂದು ಕುಪಿತ ಕೊಂಡನು ಅದಕ್ಕೆ ಪ್ರತಿ ಉತ್ತರಿಸಿದ ಸೇನಾಧಿಪತಿ ಅವರ ಸೇನೆ ನಮ್ಮ ಸೇನೆಗಿಂತ ಎರಡರಷ್ಟು ದೊಡ್ಡದಾಗಿತ್ತು ಅದೇ ನಮ್ಮ ಸೋಲಿಗೆ ಕಾರಣವಾಯಿತು ಎಂದು ಉತ್ತರಿಸಿದನು, ನಿನಗೆ ಅವರ ಅವರ ಶಕ್ತಿ ಹಾಗೂ ನಮ್ಮ ವೀಕ್ನೆಸ್ ಬಗ್ಗೆ ಗೊತ್ತಿರ ಬೇಕಿತ್ತು ಮೊದಲೇ ಇದನ್ನು ತಿಳಿಯದೆ ಯುದ್ಧಕ್ಕೆ ಹೋದ ನೀನು ಯಾವ ರೀತಿಯ ಸೇನಾಧಿಪತಿಯೆಂದು ಕೇಳಿದನು, ಇದಕ್ಕೆ ಉತ್ತರಿಸಿದ ಸೇನಾಧಿಪತಿ ನಾವು ಈ ವರ್ಷದಲ್ಲಿ ಆಗಲೇ ಮೂರು ಬಾರಿ ಯುದ್ಧ ಮಾಡಿದ್ದೇವೆ, ಯುದ್ಧದಲ್ಲಿ ನಮ್ಮ ಎಲ್ಲಾ ಸೈನಿಕರನ್ನು ಕಳೆದುಕೊಂಡಿದ್ದೇವೆ ಎಂದು ಉತ್ತರಿಸಿದನು. ಕೋಪಗೊಂಡ ರಾಜನು ಸೈನಿಕರು ಇಲ್ಲದಿದ್ದರೆ ಏನಂತೆ ನಮ್ಮ ರಾಜ್ಯದಲ್ಲಿರುವ ಯುವಕರನ್ನು ಕರೆತಂದು ಯುದ್ಧ ಮಾಡಿಸಬೇಕಿತ್ತು ಎಂದು ಆಸ್ಥಾನದಲ್ಲಿ ಕಿರುಚಾಡಿದನು ಹಾಗೂ ನಾಳೆಯಿಂದಲೇ ಸೈನಿಕರ ಭರ್ತಿ ಕಾರ್ಯ ಪ್ರಾರಂಭಿಸು ಎಂದು ಸೇನಾಧಿಪತಿಗೆ ತಿಳಿಸಿದನು.

ಸೇನೆ ಭರ್ತಿ ಕಾರ್ಯಕ್ಕೆ ಮುಂದಾದ ಸೇನಾಧಿಪತಿ ರಾಜ್ಯದ ಪ್ರಮುಖ ನಗರಗಳಲ್ಲಿ ಸಂಚರಿಸಿದರು ಕೂಡ ಯಾರು ಸೈನ್ಯಕ್ಕೆ ಸೇರಲು ಬರಲೇ ಇಲ್ಲ, ಸೇನಾಧಿಪತಿಯು ಮನೆಮನೆಗೆ ತೆರಳಿ ಸೈನ್ಯಕ್ಕೆ ದಯವಿಟ್ಟು ಸೇರಿಕೊಳ್ಳಿ ಯುವಕರು ಎಂದು ವಿನಂತಿಸಿದರು ಕೂಡ ಯಾರು ಸೈನ್ಯಕ್ಕೆ ಸೇರಲು ಅನುಮತಿ ಸೂಚಿಸಲಿಲ್ಲ ನಂತರ ವಾಪಸಾದ ಸೇನಾಧಿಪತಿ ರಾಜನಿಗೆ ನಮ್ಮ ರಾಜ್ಯದ ಎಲ್ಲಾ ಯುವಕರು ಯುದ್ಧದ ಬಗ್ಗೆ ತುಂಬಾ ಭಯಭೀತರಾಗಿದ್ದಾರೆ ಹಾಗೂ ಯುವಕರು ಮದುವೆಯಾಗಿ ತಮ್ಮ ಕುಟುಂಬದಲ್ಲಿ ವಾಸವಾಗಿರಬೇಕು ಎಂದು ತುಂಬಾ ಇಷ್ಟಪಡುತ್ತಿದ್ದಾರೆ ಎಂದು ತಿಳಿಸಿದನು.

ಕೋಪಗೊಂಡ ರಾಜನು ನಮ್ಮ ರಾಜ್ಯದಲ್ಲಿ ವಿವಾಹವನ್ನು ಬಹಿಷ್ಕರ ಮಾಡುತ್ತೇನೆ ಆಗ ಯುವಕರು ಹೇಗೆ ತಮ್ಮ ಕುಟುಂಬದಲ್ಲಿ ವಾಸವಿರುತ್ತಾರೆ  ನೋಡೋಣ ಎಂದು ನಗುತ್ತಾ ಆಸ್ಥಾನದಿಂದ ತೆರಳಿದನು. ರಾಜನ ರೂಲ್ಸ್ ಗೆ ರಾಜ್ಯದಲ್ಲಿ ಯಾರು ಕೂಡ ವಿರೋಧ ಕೊಡಲಿಲ್ಲ ಆದರೆ ಇದಕ್ಕೆ ವಿರುದ್ಧವಾಗಿ ರಾಜ್ಯದಲ್ಲಿ ವಾಸವಿದ್ದ ವ್ಯಾಲೆಂಟೈನ್ ಎಂಬಾತ ಎದ್ದು ನಿಂತನು ಹಾಗೂ ಹಲವು ಲವರ್ಸ್ ಗಳ ಮದುವೆಯನ್ನು ಗೌಪ್ಯವಾಗಿ ನೆರವೇರಿಸಿದನು.

 ಗೌಪ್ಯವಾಗಿ ನೆರವೇರಿಸಿದ ಮದುವೆಗಳು ರಾಜನ ಗಮನಕ್ಕೆ ಬಂತು ರಾಜನ ಸೇನಾಧಿಪತಿ ಕರೆದು ಈ ರೀತಿಯ ಮದುವೆಗಳನ್ನು ಯಾರು ಮಾಡುತ್ತಿದ್ದಾರೆ ಅವರನ್ನು ಬಂಧಿಸಿ ಕರೆದು ತಾ ಎಂದು ಆಗ್ರಹಿಸಿದನು. ಒಂದು ದಿನ ಅದೇ ರೀತಿ ವ್ಯಾಲೆಂಟೈನ್ ಒಂದು ಜೋಡಿಯ ಮದುವೆ ಮಾಡಿಸುತ್ತಿದ್ದರು ಆಗ ಸೈನಿಕರ ಗಮನಕ್ಕೆ ಬಂದು ಸೈನಿಕರು ಅಲ್ಲಿಗೆ ತೆರಳಿ ವ್ಯಾಲೆಂಟೈನ್ ನನ್ನು ಬಂಧಿಸಿ ಆಸ್ತಾನಕ್ಕೆ ಕರೆತಂದು ಜೈಲಿನಲ್ಲಿಇಟ್ಟರು. ವ್ಯಾಲೆಂಟೈನ್ ಪ್ರತಿದಿನ ಜೈಲಿನಲ್ಲಿ ಪುಸ್ತಕಗಳನ್ನು ಓದಿ ಸೈನಿಕನ ಮಗಳಿಗೆ ವಿವರಣೆಯನ್ನು ನೀಡುತ್ತಿದ್ದ ವಿವರಣೆಯನ್ನು ಪ್ರತಿದಿನ ಕೇಳುತ್ತಿದ್ದ ಸೈನಿಕನ ಮಗಳಿಗೆ ವ್ಯಾಲೆಂಟೈನ್ನ ಮೇಲೆ ಲವ್ ಉಂಟಾಯಿತು.

ವ್ಯಾಲೆಂಟೈನ್ ನನ್ನು ಗಲ್ಲಿಗೇರಿಸುವ ದಿನ ಫೆಬ್ರವರಿ 14 ಬಂದೇಬಿಟ್ಟಿತು ಅವನು valentines day gifts ತನ್ನ ಪ್ರೇಯಸಿಗೆ ಪತ್ರ ಬರೆದು ಕೊನೆಯಲ್ಲಿ ನಿನ್ನ ವ್ಯಾಲೆಂಟೈನ್ ಎಂದು ಬರೆದು ಕೊಟ್ಟಿದ್ದನ್ನು. ವ್ಯಾಲೆಂಟೈನ್ ನನ್ನು ಗಲ್ಲಿಗೇರಿಸಿ ಚರ್ಚಿನ ಪಕ್ಕದಲ್ಲೇ ಅವನ ಅಂತಿಮ ಕಾರ್ಯ ನಡೆಸಲಾಯಿತು. ಇದೇ ಕಾರಣಕ್ಕೆ ಹಲವು ಶತಮಾನಗಳು ಕಳೆದರೂ ವ್ಯಾಲೆಂಟೈನ್ಸ್ ಡೇ ಫೆಬ್ರವರಿ 14ರಂದು ನಡೆಯುತ್ತಿದೆ.