Essay in Kannada : ಕನ್ನಡ ಪ್ರಬಂಧ ಬರೆಯುವುದು ಹೇಗೆ ?

Essay in Kannada: ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ Essay in Kannada ಬರೆಯಲು ಸೂಚಿಸಿರುತ್ತಾರೆ ಅದನ್ನು ಹೇಗೆ ಬರೆಯುವುದು ಎಂದು ಚಿಂತಿಸುತ್ತಿದ್ದೀರಾ, ನಮ್ಮ ಬ್ಲಾಗ್ ಓದಿ ತಿಳಿದುಕೊಳ್ಳಿ. ಪ್ರಬಂಧಗಳನ್ನು ಬರೆಯುವಾಗ ಹಲವುಬಾರಿ ತಪ್ಪಾಗುವುದು ಸಹಜ ಆ ರೀತಿ ಆದಾಗ ಅತಿಯಾದ ಗೆರೆಗಳನ್ನು ಹಾಕಬಾರದು ಕೇವಲ ಒಂದು ಗೆರೆ ಹಾಕಿದರೆ ಸಾಕು, ನೆನಪಿಡಿ ತಪ್ಪಾಗುವುದು ಸಮಾಜ ಸಹಜ ಆದರೆ ಅದನ್ನು ಮುಚ್ಚಿಡಲು ನಿಮ್ಮ ಉತ್ತರ ಪತ್ರಿಕೆಯನ್ನು ಹಾಳುಮಾಡದಿರಿ.

ಪ್ರಬಂಧ ಬರೆಯುವುದು ಹೇಗೆ ವಿಡಿಯೋ ನೋಡಿ


ಇದರಿಂದ ಮೌಲ್ಯಮಾಪನ ಮಾಡುವವರಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ.

ಪ್ರಬಂಧ ಪ್ರಾರಂಭಿಸುವುದಕ್ಕೆ ಮೊದಲು ಸ್ವಸ್ತಿಕ್, ಗಣೇಶಾಯ ನಮಃ ಇತ್ಯಾದಿ ಉತ್ತರ ಪತ್ರಿಕೆಯಲ್ಲಿ ಬರೆಯಬಾರದು. ಯಾವುದೇ ಪ್ರಬಂಧ ಬರೆಯುವಾಗ ಕಂಠಪಾಠ ಮಾಡಿ ಬರೆಯಬಾರದು ಪುಸ್ತಕವನ್ನು ಓದಿ ಅದರಲ್ಲಿರುವ ಅರ್ಥವನ್ನು ಅರ್ಥೈಸಿಕೊಂಡು ವಿಷಯವನ್ನು ವಿಸ್ತಾರವಾಗಿ ಬರೆಯಬೇಕು.

ಇದನ್ನು ಓದಿಕಾರಿನ ಹಿಂಭಾಗದಲ್ಲಿ ಈ ರೀತಿ ಯಾಕ್ ಇರುತ್ತದೆ ಗೊತ್ತಾ 

ಪ್ರಬಂಧ ಬರೆಯುವಾಗ ಅಲ್ಲಲ್ಲಿ ಗಾದೆಮಾತುಗಳು, ಸರ್ಕಾರದ ತೀರ್ಪುಗಳನ್ನು ನೀವು ಎಚ್ಚರಿಕೆಯಿಂದ ಬಳಸಬಹುದು.

ಕೆಲವು ನಕ್ಷೆಗಳನ್ನು ಸಹ ನೀವು ಬರೆಯಬಹುದು, ಉದಾಹರಣೆಗೆ ನದಿಗಳು, ಗಡಿ ಸಮಸ್ಯೆ ಅವಶ್ಯಕತೆಗನುಗುಣವಾಗಿ ನೀವು ಸರ್ಕಾರದ ನಿಯಮಗಳನ್ನು ಕೂಡ ಬಳಸಿಕೊಳ್ಳಬಹುದು.

ಪ್ರಬಂಧ ಬರೆಯಲು ಎಷ್ಟು ಸಮಯ ಮೀಸಲಿಡಬೇಕು ಎಂಬುದನ್ನು ಅಂಕಗಳಿಗೆ ತಕ್ಕನಾಗಿ ಬಳಸಬೇಕು ಇಲ್ಲವಾದರೆ ಬೇರೆ ಪ್ರಶ್ನೆಗಳಿಗೆ ಉತ್ತರಿಸಲು ಸಮಯದ ಅಭಾವ ಉಂಟಾಗಬಹುದು.

ನಮಗೆಲ್ಲ ತಿಳಿದಿರುವ ಹಾಗೆ Essayಲ್ಲಿ ಎರಡು ರೀತಿ ಇವೆ ಸ್ಪರ್ಧಾತ್ಮಕ ಪ್ರಬಂಧ & ಸಾಮಾನ್ಯ ಪ್ರಬಂಧ. ಸಾಮಾನ್ಯ ಪ್ರಬಂಧ ಎಂದರೆ ಶಾಲೆಗಳಲ್ಲಿ ಅಥವಾ ಚಿಕ್ಕ ಮಕ್ಕಳು ಶಾಲಾ ಮಟ್ಟದಲ್ಲಿ ಬರೆಯುವ ಪ್ರಬಂಧ ವಾಗಿರುತ್ತದೆ. ಇನ್ನು ಸ್ಪರ್ಧಾತ್ಮಕ ಪ್ರಬಂಧ ಎಂದರೆ ಕೆಲಸದ ದೃಷ್ಟಿಯಿಂದ ಪರೀಕ್ಷೆಗಳಲ್ಲಿ ಬರೆಯುವ ಪ್ರಬಂಧ. ಇಲ್ಲಿ ಪರೀಕ್ಷೆಯಲ್ಲಿ ಬರೆಯುವ ಸ್ಪರ್ಧಾತ್ಮಕ ಪ್ರಬಂಧ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ ಏಕೆಂದರೆ ಇಲ್ಲಿ ನೀವು ಪ್ರಬಂಧ ಬರೆಯುವುದಕ್ಕಿಂತ ಮುಂಚೆ ಕೊಟ್ಟಿರುವ ಪ್ರಶ್ನೆಯನ್ನು ಸರಿಯಾಗಿ ಅರ್ಥೈಸಿ ಅದರ ಪರ ಹಾಗೂ ವಿರೋಧ ಪ್ರಬಂಧವನ್ನು ಬಹಳ ಸವಿಸ್ತಾರವಾಗಿ ಬರೆಯುವ ಅಗತ್ಯತೆ ಇರುತ್ತದೆ.

ಹೆಚ್ಚು ಬರೆದರೆ ಹೆಚ್ಚು ಮಾರ್ಕ್ ಸಿಗುತ್ತದೆ ಎಂಬ ಕಲ್ಪನೆಯನ್ನು ದೂರ ಮಾಡಿ ಏಕೆಂದರೆ ನೀವು ಎಷ್ಟು ಬರೆದಿದ್ದೀರಾ ಅನ್ನುವುದು ಮುಖ್ಯವಲ್ಲ ಎಷ್ಟು ಸಮಂಜಸವಾಗಿ ಉತ್ತರ ಬರೆದಿದ್ದರ ಎಂಬುದೆ  ಮುಖ್ಯವಾಗಿರುತ್ತದೆ.

ನಿಮಗೆ ಏನು ಹೇಳಬೇಕು ಎನಿಸುತ್ತದೆ ಅದನ್ನು ಸರಳವಾಗಿ, ವಿಸ್ತಾರವಾಗಿ ಉತ್ತಮ ಪದಗಳಿಂದ ಬರೆಯಿರಿ.

ನೀವು ಉತ್ತರ ಪತ್ರಿಕೆಯಲ್ಲಿ ಬರೆಯುವ ಪ್ರಬಂಧ ಸ್ಪಷ್ಟವಾಗಿ ಒಳ್ಳೆಯ ಮಾದರಿಯಲ್ಲಿ ಇರಲಿ.

ಸರ್ಕಾರವು ಹಲವಾರು ನಾಗರಿಕ ಸೇವಾ ಪರೀಕ್ಷೆ, ಗೆಜೆಟ್, ಫಾರೆಸ್ಟ್, IAS, IPS ಪರೀಕ್ಷೆಗಳಲ್ಲಿ ಪ್ರಬಂಧವನ್ನು ನೀಡಲಾಗಿರುತ್ತದೆ ಪ್ರಬಂಧ ಬರೆಯುವುದು ಕಡ್ಡಾಯ ಕೂಡ ಆಗಿದೆ.


Essayಲ್ಲಿ 2 ವಿಧಗಳಿವೆ

  • ಸ್ಪರ್ಧಾತ್ಮಕ ಪರೀಕ್ಷೆ ಪ್ರಬಂಧ
  • ಸಾಮಾನ್ಯ ಪ್ರಬಂಧ
ಸಾಮಾನ್ಯವಾಗಿ ಬರೆಯುವ Essay ಹಾಗೂ ಪರೀಕ್ಷೆಗಳಲ್ಲಿ ಬರೆಯುವ ಪ್ರಬಂಧಗಳ ರೀತಿಯಲ್ಲಿ ಬಹಳಷ್ಟು ವ್ಯತ್ಯಾಸವಿರುತ್ತದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತುಂಬಾ ನೈಪುಣ್ಯತೆ ಹೊಂದಿರುವವರು ಹೆಚ್ಚಿನ ಅಂಕಗಳಿಸಿ ಪಾಸ್ ಆಗುತ್ತಾರೆ ನೈಪುಣ್ಯತೆ ಇಲ್ಲದೆ ಇರುವವರು fail ಆಗುತ್ತಾರೆ. ಈ ಕಾರಣಕ್ಕೆ ಪರೀಕ್ಷೆ ಮೊದಲು ಬಹಳಷ್ಟು ಪರಿಶ್ರಮಪಟ್ಟು ಪ್ರಾಕ್ಟಿಸ್ ಮಾಡುವುದು ತುಂಬಾ ಅಗತ್ಯ, ಅನಿವಾರ್ಯ ಕೂಡ.

ಪ್ರಬಂಧ ಬರೆಯುವಾಗ ನೀವು ಬಹು ಮುಖ್ಯವಾಗಿ ಗಮನಿಸಬೇಕಾದ ಅಂಶಗಳು
  • ಕೇಳಲಾಗಿರುವ ಪ್ರಶ್ನೆಯನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಬೇಕು.
  • ಕೊಟ್ಟಿರುವ ಅಂಕಗಳಿಗೆ ಸಮನಾದ ಉತ್ತರ ಬರೆಯಬೇಕು.
  • ಪ್ರತಿಯೊಂದು ಪ್ರಶ್ನೆಯಲ್ಲೂ ಒಂದು ಮುಖ್ಯ ದೀಪದ ಇರುತ್ತದೆ ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ವಿಶ್ಲೇಷಣೆ ಮಾಡಿ ವಿಸ್ತೃತ ರೂಪವನ್ನು ಬರೆಯಬೇಕು.

ಬಹಳ ಜನ ಹೇಳುತ್ತಾರೆ ನಾನು ತುಂಬಾ ಚೆನ್ನಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರೆದಿದ್ದೆ ಆದರೆ ನಿರೀಕ್ಷಿಸಿದ ಅಂಕ ಸಿಗಲಿಲ್ಲ ಎಂದು ಇದಕ್ಕೆ ಮುಖ್ಯ ಕಾರಣ ನೀವು ಪರೀಕ್ಷೆ ಮೊದಲು ಅಭ್ಯಾಸ ಮಾಡದೇ ಇರುವುದು.


ಬರವಣಿಗೆಯ ವೇಗ ಮತ್ತು ಅಂದವಾಗಿ ಬರೆಯಬೇಕು

ನೀವು ತುಂಬಾ ಚೆನ್ನಾಗಿ ಉತ್ತರ ಬರೆಯಬಹುದು ಆದರೆ ಉತ್ತರ ವ್ಯಾಲ್ಯೂಯೇಷನ್ ಮಾಡುವವರಿಗೆ ಅರ್ಥವಾಗಬೇಕು ಎಂದರೆ ನಿಮ್ಮ ಬರವಣಿಗೆ ಚೆನ್ನಾಗಿರಬೇಕು ಇಲ್ಲವಾದಲ್ಲಿ ಉತ್ತಮ ಅಂಕಗಳಿಸಲು ಸಾಧ್ಯವಾಗುವುದಿಲ್ಲ ಅದೇ ರೀತಿ ದೇಶವಾಗಿ ಎಂಬ answer ಬರೆಯುವ ಕಲೆಯನ್ನು ಅಭ್ಯಾಸ ಮಾಡಿರಬೇಕು ಇಲ್ಲವಾದಲ್ಲಿ ನೀವು ಎಲ್ಲಾ ಪ್ರಶ್ನೆಗಳಿಗೆ ಸಮಂಜಸ ಉತ್ತರ ಬರೆಯಲು ವಿಫಲಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.


ಉತ್ಕೃಷ್ಟ Essay ಸಲಹೆಗಳು

ನೀವು ಪ್ರಬಂಧ ಬರೆಯುವಾಗ ತಪ್ಪಾಗುವುದು ತುಂಬಾ ಸಹಜ ಅಂತಹ ಸಂದರ್ಭದಲ್ಲಿ ಹೆಚ್ಚಿಗೆ ಗೀಟು ಹಾಕಬಾರದು, ತಪ್ಪಾಗಿರುವ ಪ್ರಬಂಧ ಸಾಲಿಗೆ ಕೇವಲ ಒಂದು ಗೀಟು ಹಾಕಿ ಪ್ರಬಂಧ ಮುಂದುವರಿಸಬೇಕು, ನಿಮ್ಮ ತಪ್ಪನ್ನು ಮುಚ್ಚಿ ಹಾಕಲು ಅತಿಯಾದ ಗೇಟು ಹಾಕಿದರೆ ನಿಮ್ಮ ಉತ್ತರ ಪತ್ರಿಕೆ ಹಾಳಾಗುವುದಲ್ಲದೆ ಮೌಲ್ಯಮಾಪನ ಮಾಡುವವರಿಗೆ ತುಂಬಾ ಕಿರಿಕಿರಿಯಾಗಿ ಉತ್ತಮ ಅಂಕಗಳು ದೊರೆಯುವುದಿಲ್ಲ.

ಯಾವುದೇ ಪ್ರಬಂಧ ಬರೆಯುವಾಗ ಪುಸ್ತಕದಲ್ಲಿರುವ ಅಂತೆ ಕಂಠಪಾಠ ಮಾಡಿ ಮರೆಯಬಾರದು ಕೊಟ್ಟಿರುವ ಪ್ರಶ್ನೆಯನ್ನು ಸರಿಯಾಗಿ ಅರ್ಥೈಸಿ ಸುಲಭ ಪದಗಳನ್ನು ಬಳಸಿ ಉತ್ತರ ಮಂಡಿಸುವುದು ತುಂಬಾ ಸೂಕ್ತ.

ಕೊಟ್ಟಿರುವ ಪ್ರಶ್ನೆ ಹಾಗೂ ಅಂಕಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಉತ್ತರವನ್ನು ಬರೆಯಬೇಕು ಇಲ್ಲವಾದಲ್ಲಿ ಸಮಯ ಭಾರತ ವಾಗುವುದರ ಜೊತೆಗೆ ನೀವು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ.

ನೀವು ಪ್ರಬಂಧ ಬರೆಯುತ್ತಿರುವಾಗ ಯಾವುದೇ ರೀತಿಯ ಧಾರ್ಮಿಕ ಚಿಹ್ನೆಗಳು, ಸಂಕೇತ ಬಳಸಬಾರದು ಉದಾಹರಣೆಗೆ ಓಂ ನಮಃ ಶಿವಾಯ, ಸ್ವಸ್ತಿಕ್.

ಪ್ರಬಂಧ ಅರ್ಥಪೂರ್ಣಗೊಳಿಸಲು ಬೇಕಾದರೆ ಗಾದೆ ಮಾತುಗಳನ್ನು ಸಹ ಬರೆಯಬಹುದು ಆದರೆ ಬರೀ ಗಾದೆಮಾತುಗಳನ್ನು ನಿಮ್ಮ ಉತ್ತರ ಪತ್ರಿಕೆ ತುಂಬಾ ಇರದಂತೆ ಎಚ್ಚರವಹಿಸಬೇಕು.

ನಿಮ್ಮ ಉತ್ತರ ಪತ್ರಿಕೆಯಲ್ಲಿ ನಕ್ಷೆ ಬರೆಯುವುದು ಅವಶ್ಯವಿದ್ದರೆ ಬರೆಯಬಹುದು.

ಇದನ್ನು ಓದಿವ್ಯಾಲೆಂಟೈನ್ಸ್ ಡೇ ಎಂದರೇನು ಅದನ್ನು ನಾವು ಏಕೆ ಆಚರಿಸುತ್ತೇವೆ ತಿಳಿದುಕೊಳ್ಳಿ 


ಸಾಮಾನ್ಯ ಪ್ರಬಂಧ ಬರೆಯಲು ಈ ಕೆಳಗೆ ನೀಡಿರುವ ಟಿಪ್ಸ್ ಪಾಲಿಸಿ

ಹಲವಾರು ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯುವುದು ನುಂಗಲಾರದ ತುತ್ತಾಗಿದೆ ಇದಕ್ಕೆ ಬಹುಮುಖ್ಯ ಕಾರಣ ಅವರಿಗೆ ಪ್ರಬಂಧದ ಬಗ್ಗೆ ಆಸಕ್ತಿ ಇಲ್ಲದಿರುವುದು ಅಥವಾ ಪ್ರಬಂಧ ಹೇಗೆ ಮಂಡಿಸುವುದು ಎಂಬುದು ಅವರ ಅರಿವಿಗೆ ಬರದೇ ಇರುವುದು. ಕೆಳಗೆ ನಾವು ನೀಡಿರುವ ಸ್ಟೆಪ್ಸ್ ಗಳನ್ನು ಫಾಲೋ ಮಾಡಿ ಪ್ರಬಂಧ ಹೇಗೆ ಬರೆಯಬೇಕು ಎಂಬುದನ್ನು ಕಂಪ್ಲೀಟ್ ಆಗಿ ತಿಳಿದುಕೊಳ್ಳಿ


ಒಂದು ಉತ್ತಮ ಟಾಪಿಕ್ ತೆಗೆದುಕೊಳ್ಳಿ

ನಿಮಗೆ ಸಿಕ್ಕಿರುವ ಟಾಪಿಕ್ ಅಥವಾ ತೆಗೆದುಕೊಂಡ ಟಾಪಿಕ್ ಬಗ್ಗೆ ಗಂಭೀರವಾಗಿ ಸ್ವಲ್ಪ ನಿಮಿಷಗಳ ಕಾಲ ಆಲೋಚಿಸಿ ನಂತರ ಮುನ್ನುಡಿಯನ್ನು ಬರೆಯಲು ಪ್ರಾರಂಭಿಸಿ ಇಲ್ಲಿ ಮುಖ್ಯವಾಗಿ ನಿಮಗೆ ಸಿಕ್ಕಿರುವ topic ಸಾರಾಂಶ ಇರಬೇಕು ಎಲ್ಲಿಯೂ ಓದುವರಿಗೆ ಬೋರಾಗದಂತೆ ಪದಗಳನ್ನು ರಚಿಸಿ ಬರೆಯಬೇಕು.

ನಂತರ ಬರುವುದು ಪ್ರಬಂಧದ ಬಾಡಿ, ಇಲ್ಲಿ ನಿಮಗೆ ಸಿಕ್ಕಿರುವ ಟಾಪಿಕ್ ನಾ ವಿಶ್ಲೇಷಣೆ ರೂಪವನ್ನು ಬರೆಯಬೇಕು ಅಥವಾ ಇದರ ಬಗ್ಗೆ ಹಲವಾರು ಎಕ್ಸಾಂಪಲ್ ಗಳನ್ನು ತೆಗೆದುಕೊಂಡು ಪ್ರಬಂಧವನ್ನು ತುಂಬಾ ವಿಸ್ತೃತವಾಗಿ ಬರೆಯುವುದು ಅವಶ್ಯ ಕೆಲವರು ಇಲ್ಲಿ ಗಾದೆಯನ್ನು ಸಹ ಬಳಸುತ್ತಾರೆ ಅವಶ್ಯವಿದ್ದಲ್ಲಿ ಕೆಲವೊಂದು ಚಿತ್ರಗಳನ್ನು ಸಹ ನೀವು ಬಿಡಿಸಬಹುದು ಉದಾಹರಣೆಗೆ ಯಾವುದಾದರೂ ರಾಜರ ಬಗ್ಗೆ ಬರೆಯಬೇಕಾದರೆ ಅವರ ಲಾಂಛನ, ಭೂಪಟ, ಬಳಕೆಯಾಗುತ್ತಿದ್ದ ನಾಣ್ಯ ಮುಂತಾದ ಚಿತ್ರಗಳನ್ನು ಸಹ ನೀವು ಇಲ್ಲಿ ಬರೆಯಬಹುದು.


Concusion:

Conclusionನ್ ಅನ್ನು ಬರೆಯಲು ಮರೆಯದಿರಿ ಏಕೆಂದರೆ ಇದು ಅಷ್ಟು ಪ್ರಾಮುಖ್ಯತೆ ಪಡೆದಿದೆ ಪ್ರಬಂಧ ಮಂಡಿಸಿದ ನಂತರ ಕೊನೆಯಲ್ಲಿ ನೀವು ಪ್ರಬಂಧದಲ್ಲಿ ಬರೆದ ಪ್ರಮುಖ ಅಂಶಗಳನ್ನು ಇಲ್ಲಿ ಬರೆಯಬಹುದು ಅಥವಾ ನೀವು ಬರೆದ ಪ್ರಬಂಧದ ವಿಶ್ಲೇಷಣೆ ಬಗ್ಗೆ ಕೂಡ ಬರೆಯಬಹುದು.


ಕಾಲೇಜು ಮತ್ತು ಸ್ಕಾಲರ್ಷಿಪ್ Essay

ಇತ್ತೀಚಿನ ದಿನಗಳಲ್ಲಿ ಎಲ್ಲಾ ಸ್ಕೂಲು ಮತ್ತು ಕಾಲೇಜು ಸೇರಿಕೊಳ್ಳುವ ವೇಳೆ ಪ್ರತಿಯೊಬ್ಬರು ಎದುರಿಸಲೇಬೇಕಾದ ಬಹುಮುಖ್ಯ ಘಟ್ಟ ಪ್ರಬಂಧ ಬರೆಯುವುದು, ಹೌದು ಇತ್ತೀಚಿಗೆ ಕೆಲವು ಕಾಲೇಜು ಹಾಗೂ ಸ್ಕೂಲುಗಳಲ್ಲಿ ಇದು ಸಾಮಾನ್ಯವಾಗಿದೆ ಯಾವುದೇ ವಿದ್ಯಾರ್ಥಿಯನ್ನು ತಮ್ಮ ಕಾಲೇಜು ಅಥವಾ ಸ್ಕೂಲಿಗೆ ದಾಖಲಿಸಿಕೊಳ್ಳುವ ಮೊದಲು ವಿದ್ಯಾರ್ಥಿಯ ತಿಳುವಳಿಕೆಯ ಮಟ್ಟವನ್ನು ನಿರ್ಧರಿಸಲು ಪ್ರಬಂಧ ಬರೆಯಲು ನೀಡುತ್ತಾರೆ ಅಕಸ್ಮಾತ್ ಯಾವ ವಿದ್ಯಾರ್ಥಿ ಉತ್ತಮವಾಗಿ ಪ್ರಬಂಧ ಬರೆಯುತ್ತಿಲ್ಲ ವಿದ್ಯಾರ್ಥಿಗೆ ಶಾಲಾ-ಕಾಲೇಜುಗಳಲ್ಲಿ ದಾಖಲಾಗಲು ಅವಕಾಶ ನೀಡುವುದಿಲ್ಲ ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಪ್ರಬಂಧ ಬರೆಯುವುದನ್ನು ರೂಢಿಸಿಕೊಳ್ಳುವುದು ಅವಶ್ಯ.

ಸಮಯ ಸಿಕ್ಕಾಗಲೆಲ್ಲ ಪುಸ್ತಕಗಳನ್ನು ಓದಿ ನಿಮ್ಮ ಸ್ನೇಹಿತರೊಂದಿಗೆ ತಿಳಿದುಕೊಂಡ ವಿಷಯಗಳನ್ನು ಚರ್ಚಿಸಿ ಇದು ನಿಮ್ಮ ಪ್ರಬಂಧ ಬರೆಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ವೆಬ್ಸೈಟ್ ಗಳಾದ ಫೇಸ್ಬುಕ್, ಟ್ವಿಟರ್, ಇಷ್ಟ ಗ್ರಾಮಗಳಲ್ಲಿ ಕೆಲವು ವಿಷಯಗಳ ಬಗ್ಗೆ ಪೋಸ್ಟ್ ಮಾಡಿ ಇದರೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಚರ್ಚಿಸಿ ಎಲ್ಲಾ ಚಟುವಟಿಕೆಗಳು ನಿಮ್ಮ ಬರೆಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.