ಹೊಟ್ಟೆ ನೋವಿಗೆ ಕಾರಣಗಳು - ಉಷ್ಣದಿಂದ ಹೊಟ್ಟೆ ನೋವು

ಹೊಟ್ಟೆ ನೋವಿಗೆ ಕಾರಣಗಳು : ಹೊಟ್ಟೆನೋವು ಮುಖ್ಯವಾಗಿ ಯಾರಲ್ಲಿ ಮಲಬದ್ಧತೆ, ಅಜೀರ್ಣತೆ ಇರುತ್ತದೆ ಅವರಿಗೆ ಉಷ್ಣದಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಸಹಜ. ನಮ್ಮ ದೇಹದಲ್ಲಿ ಹಲವಾರು ಅಂಗಗಳಿಗೆ ಅದರಲ್ಲಿ ಹೊಟ್ಟೆ ಮುಖ್ಯವಾದದ್ದು ಏಕೆಂದರೆ ನಾವು ಸೇವಿಸುವ ಆಹಾರ ಜೀರ್ಣವಾಗುವುದು ನಮ್ಮ ಹೊಟ್ಟೆಯಲ್ಲಿ ಹಾಗೂ ಜೀರ್ಣವಾದ ನಂತರ ನಮ್ಮ ಇಡೀ ದೇಹಕ್ಕೆ ಶಕ್ತಿಯನ್ನು ಕೊಡುವುದು ನಮ್ಮ ಹೊಟ್ಟೆ.

ಉಷ್ಣದಿಂದ ಹೊಟ್ಟೆ ನೋವು ಹಲವಾರು ಕಾರಣಗಳಿಂದ ಬರುತ್ತದೆ ಅವುಗಳೆಂದರೆ ಹೊಟ್ಟೆ ಹಸಿವು ತಾಳಲಾರದೆ, ಊಟ ಜಾಸ್ತಿಯಾಗಿ  ಕೆಲವರಿಗೆ ಹೊಟ್ಟೆ ನೋವು ಬರುತ್ತದೆ. ಇದರ ಜೊತೆ ಇನ್ನೂ ಹಲವು ಕಾರಣಗಳಾದ ಅಜೀರ್ಣತೆ, ಗ್ಯಾಸ್ಟ್ರಿಕ್, ಮಲಬದ್ಧತೆ, ಹೊಟ್ಟೆಯ ಸೋಂಕು, ವಿಪರೀತ ದೇಹದ ಉಷ್ಣಾಂಶ ಹೆಚ್ಚಾದಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ.

ನಾವೆಲ್ಲರೂ ನಮ್ಮ ಜೀವನದಲ್ಲಿ ಎಂದಾದರೂ ಹೊಟ್ಟೆ ನೋವನ್ನು ಅನುಭವಿಸಿರುತ್ತೇವೆ ಹೊಟ್ಟೆ ನೋವಿನಲ್ಲಿ ಕೆಲವು ಗಂಭೀರ ಸಮಸ್ಯೆಗಳು ಕೂಡ ಇರುತ್ತದೆ ಅವುಗಳೆಂದರೆ ಅಪೆಂಡಿಸೈಟಿಸ್ ಹಾಗೂ ಕಿಡ್ನಿಯಲ್ಲಿ ಕಲ್ಲುಗಳ ಕೂಡ ಹೊಟ್ಟೆ ನೋವಿಗೆ ಕಾರಣವಾಗಿದೆ.