ಪ್ರಸ್ತುತ ಮೈಸೂರಿನ DCಯಾಗಿರುವ ರೋಹಿಣಿ ಸಿಂಧೂರಿ ಅವರ ವಿಡಿಯೋ ಇವತ್ತು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು ಇದಕ್ಕೆ ಮುಖ್ಯ ಕಾರಣ ನಮ್ಮ ಮಾಧ್ಯಮಗಳು, ಇವರು ತಮ್ಮ ಕಾರಿಗೆ ತಾವೇ ಪಂಚರ್ ಹಾಕಿದರು ಎಂದು ತೋರಿಸುತ್ತಿದ್ದಾರೆ ಆದರೆ ಸತ್ಯ ಏನಪ್ಪ ಅಂದ್ರೆ ಇವರು ಹಾಕಿದ್ದು ಪಂಚರ್ ಅಲ್ಲ, ಪಂಚರ್ ಆದ ಟೈಯರ್ ಅನ್ನು ಚೇಂಜ್ ಮಾಡಿದ್ದಾರೆ.
ಪ್ರಸ್ತುತ ದಿನಗಳಲ್ಲಿ ನಾವು ನ್ಯೂಸ್ ಚಾನೆಲ್ ಗಳನ್ನು ನಂಬುವಂತಿಲ್ಲ ಏಕೆಂದರೆ ಅವರು ತಮ್ಮ TRP ಯನ್ನು ಹೆಚ್ಚಿಸಿಕೊಳ್ಳಲು ವಿವಿಧ ತರಹದ ಗಿಮಿಕ್ ಮಾಡುತ್ತಿದ್ದಾರೆ. ಸತ್ಯ ಯಾವುದೆಂದು ಜನರ ಮುಂದೆ ಇಡದೆ TRPಗೋಸ್ಕರ ಸುಳ್ಳನ್ನು ಸತ್ಯ ಎಂದು, ಸತ್ಯವನ್ನು ಸುಳ್ಳು ಎಂದು ಇತ್ತೀಚಿನ ದಿನಗಳಲ್ಲಿ ತೋರಿಸುತ್ತಿದ್ದಾರೆ.
ಇದೇ ರೀತಿ ಮಾಧ್ಯಮಗಳು ತಮ್ಮ ಭಂಡತನವನ್ನು ಮುಂದುವರಿಸಿದರೆ ಮುಂದೆ ಅವರ ಅಸ್ತಿತ್ವವನ್ನು ಕಳೆದುಕೊಳ್ಳುವುದು ಗ್ಯಾರಂಟಿ. ದೊಡ್ಡವರು ಹೇಳಿದ್ದಾರೆ ಸುಳ್ಳನ್ನು ಪ್ರಮಾಣಿಸಿ ನೋಡು ಎಂದು ಈಗ ಅದೇ ಪರಿಸ್ಥಿತಿ ನಮಗೆಲ್ಲ ಬಂದೊದಗಿದೆ.
ಹಲೋ ಫ್ರೆಂಡ್ಸ್ DC ರೋಹಿಣಿ ಸಿಂಧೂರಿಯವರು ಹಾಕಿದ್ದು ಪಂಚರ್ ಅಲ್ಲ ಕೇವಲ ಪಂಚರ್ ಆದವರನ್ನು ಬದಲಾಯಿಸಿದರು ಎಂಬುದು ಈಗ ತಿಳಿಯಿತೇ.
ಏನೇ ಆದರೂ ಇವರು ತುಂಬಾ ಸರಳ ವ್ಯಕ್ತಿ ಹಲವಾರು ಬಡವರಿಗೆ ಸರ್ಕಾರದ ಯೋಜನೆಗಳನ್ನು ಮುಟ್ಟುವಂತೆ ಮಾಡಿದ್ದಾರೆ, ತುಂಬಾ ನಿಷ್ಠಾವಂತ ಅಧಿಕಾರಿಯಾಗಿರುವ ಇವರು ಇದೇ ರೀತಿ ತಮ್ಮ ಕೆಲಸದ ಮೂಲಕ ಕರ್ನಾಟಕದ ಎಲ್ಲರ ಮನೆ ಮಾತಾಗಲಿ ಎಂದು ನಾವು ಬಯಸುತ್ತೇವೆ.