Meesho Kannada - ಯಾವುದೇ ಬಂಡವಾಳವಿಲ್ಲದೆ ನಿಮ್ಮ ಮನೆಯಿಂದಲೇ ಬಿಜಿನೆಸ್ ಪ್ರಾರಂಭಿಸಿ

 Meesho Kannada ನಮ್ಮೆಲ್ಲರ ಹೆಮ್ಮೆಯ ಭಾರತೀಯ ಕಂಪನಿ ಮುಖ್ಯವಾಗಿ ಇ-ಕಾಮರ್ಸ್ ಬಿಸಿನೆಸ್ ಅನ್ನು ಯಾರು ಪ್ರಾರಂಭಿಸಲು ಹುಡುಕಾಟದಲ್ಲಿದ್ದಾರೆ ಅವರಿಗೆ Meesho Kannada App ಮುಖಾಂತರ ಯಾವುದೇ ಬಂಡವಾಳವಿಲ್ಲದೆ ತಮ್ಮ ವಸ್ತುಗಳನ್ನು ಮಾರಲು ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಈ ಕಂಪನಿಯ ಓನರ್ ಗಳಾದ Vidit Aatrey ಹಾಗೂ Sanjeev Barnwal ಡಿಸೆಂಬರ್ 2015ರಲ್ಲಿ ಈ ಕಂಪನಿಯನ್ನು ಪ್ರಾರಂಭಿಸಿದರು ಇವರು ಮೂಲತಹ ದಿಲ್ಲಿಯ IITಯಲ್ಲಿ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಗಳಿಸಿದ್ದಾರೆ.

Meesho Kannada Appನ ಮುಖಾಂತರ ಸಣ್ಣ ಉದ್ದಿಮೆದಾರರು ಅಥವಾ ಯಾವುದೇ ವ್ಯಕ್ತಿಯು ಆನ್ಲೈನ್ ಸ್ಟೋರ್ ತೆರೆಯಬಹುದು ಹಾಗೂ ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮುಖಾಂತರ ತಮ್ಮಲ್ಲಿರುವ ವಸ್ತುಗಳನ್ನು ಮಾರಾಟ ಕೂಡ ಮಾಡಬಹುದು.

ಈ ಸಂಸ್ಥೆಯನ್ನು ಬೆಂಗಳೂರಿನಲ್ಲಿ ತೆರೆಯಲಾಯಿತು ಹಾಗೂ ಮುಖ್ಯ ಕಚೇರಿ ಕೂಡ ಬೆಂಗಳೂರಿನಲ್ಲಿ ಇದೆ ಈ ಸಂಸ್ಥೆಗೆ ಫೇಸ್ಬುಕ್ ಅಂತ ದೊಡ್ಡ ಕಂಪನಿ ಕೂಡ ಇನ್ವೆಸ್ಟ್ ಮಾಡಿದೆ.

Meesho ಕಂಪನಿಯ ಮುಖ್ಯ ಉದ್ದೇಶ ಎಲ್ಲಾ ಸಣ್ಣ ಉದ್ದಿಮೆದಾರರನ್ನು ಆನ್ಲೈನ್ಗೆ ಕರೆತರುವುದು ಹಾಗೂ ಆನ್ಲೈನ್ ಮೂಲಕ ಅವರ ಪ್ರೊಡಕ್ಟ್ ಗಳನ್ನು ಮಾರಾಟ ಮಾಡಬೇಕು ಎಂಬುದೇ ಅವರ ಮುಖ್ಯ ಗುರಿ,  ಇವರು ಪ್ರತಿ ವಸ್ತುಗಳ ಮಾರಾಟಕ್ಕೆ ಕೇವಲ ಎರಡು ಪರ್ಸೆಂಟ್ ಮಾತ್ರ ಕಮಿಷನ್ ಅನ್ನು ಪಡೆಯುತ್ತಿದ್ದಾರೆ ಈ ವಿಚಾರ ನಿಮಗೆ ಆಶ್ಚರ್ಯ ಹುಟ್ಟಿಸಿದರು ಕೂಡ ನಿಜ, ನೀವು ಕೆಲವೇ ನಿಮಿಷಗಳಲ್ಲಿ Meesho Kannada Appನ್ನು ಸೇರಿ ನಿಮ್ಮ ಪ್ರೊಡಕ್ಟ್ ಅನ್ನು ಲೋಡ್ ಮಾಡಬಹುದು ಹಾಗೂ ಕೆಲವೇ ಗಂಟೆಗಳಲ್ಲಿ ನಿಮ್ಮ ಆನ್ಲೈನ್ ಬಿಸಿನೆಸ್ ಅನ್ನು ಶುರುಮಾಡಬಹುದು.

ನಿಮಗೇನಾದರೂ ಪ್ರಾಡಕ್ಟ್ ಲಿಸ್ಟಿಂಗ್ ಅಥವಾ ಸೇಲ್ಸ್ ನ ಬಗ್ಗೆ ಯಾವುದಾದರೂ ಮಾಹಿತಿ ಬೇಕಾದರೆ Meeshoನ ಕಸ್ಟಮರ್ ಕೇರ್ ಸರ್ವಿಸ್ ತುಂಬಾ ಚೆನ್ನಾಗಿದ್ದು 24x4 ನಿಮಗೆ ಯಾವುದೇ ವಿಚಾರದ ಬಗ್ಗೆ ಸಂಕಷ್ಟ ಎದುರಾದರೆ ಅದನ್ನು ನಿವಾರಿಸಲು ಸಹಕರಿಸುತ್ತಾರೆ.