Bigg Boss Kannada - ಇವರೇ ನೋಡಿ ಈ ಬಾರಿಯ ಕನ್ನಡದ ಬಿಗ್ ಬಾಸ್ ಸ್ಪರ್ಧಿಗಳು

ಕರ್ನಾಟಕದ ಮನೆ ಮನೆಮಾತಾಗಿರುವ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಈ ವರ್ಷ ಆರಂಭವಾಗುತ್ತಿದ್ದು ಇದು 8ನೇ ಆವೃತ್ತಿಯಾಗಿದೆ, ಈ ಬಾರಿ ಯಾರೆಲ್ಲಾ Bigg Boss Kannada ಎಂಬುದು ಕುತೂಹಲಕಾರಿಯಾಗಿದೆ ಎಂಬುದು ನಮಗೆ ಗೊತ್ತು ಆದ್ದರಿಂದ ಈ ಬ್ಲಾಗ್ ನ ಮುಖಾಂತರ ನಿಮಗೆ ಈ ಬಾರಿಯ ರಿಯಾಲಿಟಿ ಬಿಗ್ ಬಾಸ್ 8ರ ಆವೃತ್ತಿಯಲ್ಲಿ ಯಾರ್ಯಾರು ಭಾಗವಹಿಸಲಿದ್ದಾರೆ ಎಂಬುದರ ಬಗ್ಗೆ ನಾವು ತಿಳಿಸಿ ಕೊಡಲಿದ್ದೇವೆ. ಕಲರ್ಸ್ ಕನ್ನಡ ವಾಹಿನಿಯು ಕಳೆದ ಎಪಿಸೋಡ್ಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಈ ಬಾರಿಯೂ ಕೂಡ ಈ ರಿಯಾಲಿಟಿ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ, ಇದೀಗ ಎಂಟನೇ ಆವೃತ್ತಿಯ ಪ್ರೊಮೋ ಬಿಡುಗಡೆಯಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಎಂಟರ ಆವೃತ್ತಿ ಶುರುವಾಗಲಿದೆ ಎಂದು ಸೂಚನೆ ನೀಡಿದೆ ಈ ಬಾರಿಯೂ ಕೂಡ ಕಿರುತೆರೆ ನಟರೇ ಹೆಚ್ಚಾಗಿ ಪಾಲ್ಗೊಳ್ಳಲಿದ್ದಾರೆ.

ಎಕ್ಸ್ಕ್ಯೂಸ್ಮಿ ಸಿನಿಮಾದ ನಟ ಸುನಿಲ್, ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್ ಗೌಡ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸರಿಗಮಪ ಕಾರ್ಯಕ್ರಮದಲ್ಲಿ ಖ್ಯಾತಿಯನ್ನು ಪಡೆದಿರುವ ಕುರಿಗಾಹಿ ಹನುಮಂತ ಕೂಡ ಪಾಲ್ಗೊಳ್ಳಲಿದ್ದಾರೆ ನೂರಾರು ಧಾರಾವಾಹಿಗಳು, ಕಾಮಿಡಿ ಪಾತ್ರಗಳು  ಹಾಗೂ  ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ವಿನಯಪ್ರಸಾದ್ ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಇರಲಿದ್ದಾರೆ.

ಕಳೆದ ಸೀಸನ್ ಅಂತೆಯೇ ಈ ಬಾರಿಯೂ ಕೂಡ ರೇಡಿಯೋ ಜಾಕಿಗಳು ಈ ಕಾರ್ಯಕ್ರಮದಲ್ಲಿ ಇರುತ್ತಾರೆ ವಿಶಿಷ್ಟ ಪ್ರೋಗ್ರಾಮ್ ಮುಖಾಂತರ ಹೆಸರುವಾಸಿಯಾಗಿರುವ ರೇಡಿಯೋ ಜಾಕಿ ರಾಜೇಶ್ ಕೂಡ ಈ ಕಾರ್ಯಕ್ರಮದಲ್ಲಿ ಇದ್ದಾರೆ ಇವರು ಕರ್ನಾಟಕದಲ್ಲಿ ಲವ್ ಗುರು ಎಂದೇ ಖ್ಯಾತಿಯನ್ನು ಪಡೆದಿದ್ದಾರೆ ಇನ್ನು ಗಂಡ ಹೆಂಡತಿ ಸಿನಿಮಾದ ನಿರ್ದೇಶಕ ರವಿ ಶ್ರೀವತ್ಸ ಕೂಡ ಎಂಟ್ರಿ ಕೊಡಲಿದ್ದಾರೆ ಇವರು ಕಳೆದ ಬಾರಿ ತುಂಬಾ ಸುದ್ದಿಯಾಗಿದ್ದರು ಆದರೆ ಈ ಬಾರಿ ಅವರು ಎಂಟ್ರಿ ಪಡೆಯಲಿದ್ದಾರೆ.

ಇನ್ನು ನಿಮಗೆಲ್ಲ ಗೊತ್ತಿರುವ ಹಾಗೆ ಧಾರಾವಾಹಿಯಲ್ಲಿ ನಟಿಸಿರುವ ಕೆಲವು ಆಕ್ಟರ್ಸ್ ಗಳು ಪಾಲ್ಗೊಳ್ಳಲಿದ್ದಾರೆ, ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಅನಿರುಧ್ ಈ ಬಾರಿ ಬಿಗ್ ಬಾಸ್ ನಲ್ಲಿ ಇರಲಿದ್ದಾರೆ, ಆನಂದ್ ಗುರೂಜಿ ಹೆಸರು ಕೂಡ ಈ ಕಾರ್ಯಕ್ರಮಕ್ಕೆ ತಳುಕು ಹಾಕಿಕೊಂಡಿದೆ ಆದರೆ ಇವರು ಮಾಧ್ಯಮದಲ್ಲಿ ಹೇಳಿದ ಪ್ರಕಾರ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ.

ಇನ್ನು ಕೆಲವು ನಟ-ನಟಿಯರು ಈ ಸೀಸನ್ ನಲ್ಲಿ ಇರಲಿದ್ದಾರೆ ಎಂಬ ಮಾಹಿತಿಗಳು ತಿಳಿದುಬಂದಿದೆ, ಇನ್ನು ಬಿಗ್ ಬಾಸ್ ಎಂಟರ ಆವೃತ್ತಿ ಫೆಬ್ರವರಿ 2021 ತಿಂಗಳಲ್ಲಿ ಆರಂಭವಾಗಲಿದ್ದು ಜನರಲ್ಲಿ ತುಂಬಾ ಆಸಕ್ತಿಯನ್ನು ಕೆರಳಿಸಿದೆ.