ರಾಜ ಮಾರ್ತಾಂಡ ಟ್ರೈಲರ್ ರಿಲೀಸ್ ಮಾಡಿದ ಮರಿ ಚಿರು

 

ದಿವಂಗತ ಚಿರಂಜೀವಿ ಸರ್ಜಾ ಅವರ ರಾಜಮಾರ್ತಾಂಡ ಮೂವಿಯನ್ನು ರಿಲೀಸ್ ಮಾಡಿದ ಮರಿ ಸರ್ಜಾ ಮೂವಿ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆನ್ನೆ ರಾಮಚರಣ್ ನಾರಾಯಣ್ ಚಿರು ಪುತ್ರನ ಕೈಯಲ್ಲಿ ಮೂವಿಟ್ರೈಲರ್ ರಿಲೀಸ್ ಮಾಡಲು ಪ್ಲಾನ್ ಮಾಡಿ ಮಗುವಿನ ಕೈಯಲ್ಲಿ ರಾಜಮಾರ್ತಾಂಡ ಟ್ರೈಲರ್ ರಿಲೀಸ್ ಮಾಡಿಸಿದರು. ಇದೇ ಸಂದರ್ಭದಲ್ಲಿ ನಿರ್ದೇಶಕ ರಾಮಚರಣ್ ಇದೇ ಮೊದಲ ಬಾರಿಗೆ ಏನೂ ತಿಳಿಯದ ಕಂದಮ್ಮನ ಕೈಯಲ್ಲಿ ತಂದೆಯ ಮೂವಿ ಟ್ರೈಲರ್  ರಿಲೀಸ್ ಮಾಡಿಸಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮರಿ ಚಿರು ತಾಯಿಯ ಮಡಿಲಲ್ಲಿ ಕೂತು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾನೆ, ಬಿಡುಗಡೆಯಾದ ನಂತರ ಪ್ರತಿಕ್ರಿಯಿಸಿದ ಮೇಘನಾರಾಜ್ ಇದು ಚಿರುವಿಗೆ  ತುಂಬಾ ಸ್ಪೆಷಲ್ ಚಿತ್ರ ಇದು ಅವರ ಅಭಿನಯದ ಕಡೆಯ ಚಿತ್ರ, ತುಂಬಾ ಚೆನ್ನಾಗಿ ಮೂಡಿಬಂದಿದೆ ಎಲ್ಲರೂ ನೋಡಿ ಅಭಿಮಾನಿಗಳು ಆನಂದಿಸಿ ಎಂದು ಎಂದು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.

ರಾಜಮಾರ್ತಾಂಡ ಸಿನಿಮಾದಲ್ಲಿ ಮತ್ತೊಂದು ವಿಶೇಷತೆಯೆಂದರೆ ಚಿರು ತಮ್ಮ ಸಿನಿಮಾಕ್ಕೆ ಕಂಠದಾನ ಮಾಡಿದ್ದಾರೆ ಏಕೆಂದರೆ ಸಿನಿಮಾ ವಾಯ್ಸ್ ಡಬ್ ಆಗುವ ಮೊದಲೇ ಚಿರು ತೀರಿಕೊಂಡಿದ್ದರು ಇದರಿಂದ ತಮ್ಮ ಧ್ರುವ ಸರ್ಜರ ಕೈಯಲ್ಲಿ ಡಬ್ ಮಾಡಿಸಲಾಗಿದೆ.