ನಿಮಗೆ ಗೊತ್ತಾ ಕೋಳಿಪುಕ್ಕ ಹಾಗೂ ಕಬ್ಬಿಣದ ಚೆಂಡು ಗಾಳಿ ಇಲ್ಲದ ಪ್ರದೇಶದಲ್ಲಿ ಒಟ್ಟಿಗೆ ನೆಲದ ಮೇಲೆ ಬೀಳುತ್ತೆ


Utube= https://youtu.be/QyeF-_QPSbk
ಯಾವುದೇ ವಸ್ತುಗಳನ್ನು ನಿರ್ವಾತ ಪ್ರದೇಶದಲ್ಲಿ ಜೊತೆಗೆ ಬಿಟ್ಟರೆ ಎರಡು ವಸ್ತುಗಳು ಒಟ್ಟಾಗಿ ನೆಲವನ್ನು ಸ್ಪರ್ಶಿಸುತ್ತವೆ ಇದಕ್ಕೆ ಕಾರಣ ಗೊತ್ತಾ ನಿಮಗೆ?

ಎಲ್ಲ ಜನರು ತಿಳಿದಿರುವಂತೆ ತೂಕದ ವಸ್ತುಗಳು ನೆಲಕ್ಕೆ ಬೇಗ ಬೀಳುತ್ತವೆ ಹಾಗೂ ತೂಕದವಿಲ್ಲದ ವಸ್ತುಗಳು ನೆಲಕ್ಕೆ ನಿಧಾನವಾಗಿ ಬೀಳುತ್ತವೆ ಎಂಬುದು ನಿಜವಲ್ಲ ಇದನ್ನು ಮೊದಲು ನಿರೂಪಿಸಿದವರು ಗೆಲಿಲಿಯೋ ಗೆಲಿಲಿ 1600 ಇಸವಿಯಲ್ಲಿ ಪೀಸಾದ ವಾಲು ಗೋಪುರ ಬೆಳೆಸಿ ಎಕ್ಸ್ಪೀರಿಮೆಂಟ್ ಅನ್ನು ಮಾಡಿ ತೋರಿಸಿದ್ದರು.
ತೂಕದ ವಸ್ತುಗಳು ಬೇಗ ಬೀಳುತ್ತವೆ ಹಾಗೂ ತೂಕವಿಲ್ಲದ ವಸ್ತುಗಳು ನಿಧಾನವಾಗಿ ನೆಲಕ್ಕೆ ಬೀಳುತ್ತದೆ ಇದಕ್ಕೆ ಕಾರಣವೇನೆಂದರೆ ನಮ್ಮ ಸುತ್ತಮುತ್ತ ಇರುವ ಗಾಳಿ.
ನಮ್ಮ ಸುತ್ತಮುತ್ತ ಇರುವ ಗಾಳಿಯು ಅತಿ ಕಡಿಮೆ ತೂಕ ಇರುವ ವಸ್ತುಗಳನ್ನು ವೇಗವಾಗಿ ನೆಲಕ್ಕೆ ಬೀಳದಂತೆ ತಡೆದು ವೇಗವನ್ನು ತಗ್ಗಿಸಿ ಬಹಳ ನಿಧಾನವಾಗಿ ನೆಲಕ್ಕೆ ಬೀಳಲು ಸಹಕರಿಸುತ್ತದೆ ಹಾಗೂ ಅತಿ ಹೆಚ್ಚು ತೂಕವಿರುವ ವಸ್ತುಗಳಿಗೆ ಗಾಳಿಯು ವಿರೋಧವನ್ನು ಕೊಡುವುದಿಲ್ಲ ಇದೇ ಕಾರಣಕ್ಕೆ ಬಹಳ ಬೇಗ ಇವು ನೆಲಕ್ಕೆ ಬಿದ್ದು ಹೋಗುತ್ತದೆ.
ಇದನ್ನು ತಿಳಿಯಬೇಕಾದರೆ ನಮ್ಮ ಸುತ್ತಮುತ್ತ ಇರುವ ಗಾಳಿಯನ್ನು ಸಂಪೂರ್ಣವಾಗಿ ತೆಗೆದು  ನಿರ್ವಾತ ಪ್ರದೇಶವನ್ನು ನಿರ್ಮಿಸಿ ಆ ನಿರ್ವಾತ ಪ್ರದೇಶದಲ್ಲಿ ಕೋಳಿಪುಕ್ಕ ಹಾಗೂ ಕಬ್ಬಿಣದ ಚೆಂಡನ್ನು ಒಟ್ಟಿಗೆ ಬಿಟ್ಟರೆ ಎರಡೂ ಕೂಡ ಒಂದೇ ಸಮಯದಲ್ಲಿ ನೆಲಕ್ಕೆ ಬೀಳುತ್ತವೆ.
ಇದನ್ನು ನೀವು ತಿಳಿಯಬೇಕಾದರೆ ಮೇಲೆ ಕೊಟ್ಟಿರುವ ಇಮೇಜ್ ಅನ್ನು ಕ್ಲಿಕ್ ಮಾಡಿ ವಿಡಿಯೋ ನೋಡಿ ಹಾಗೂ ಇದು ಹೇಗೆ ಸಾಧ್ಯ ಎಂಬುದನ್ನು ತಿಳಿಯಿರಿ.
ಈ ಎಕ್ಸ್ಪರಿಮೆಂಟ್ ಅನ್ನು BBC ಟಿವಿಯು ಖುದ್ದಾಗಿ ವಿಡಿಯೋ ಶೂಟ್ ಮಾಡಿ ನಮಗೆಲ್ಲರಿಗೂ ತಿಳಿಯುವಂತೆ ತೋರಿಸಿದ್ದಾರೆ, ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.