Kannada Health Tips - ಆರೋಗ್ಯದ ವಿಷಯದಲ್ಲಿ ಹಲವಾರು ಜನರಿಗೆ ತುಂಬಾ ಅನುಮಾನಗಳಿವೆ ಹಲವಾರು ವೈದ್ಯರು ಕೂಡ ಆರೋಗ್ಯದ ಬಗ್ಗೆ ಒಂದೊಂದು ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ, ಹಲವಾರು ವಿಜ್ಞಾನಿಗಳು ಇದರ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ಕೆಲವು ಉಪಯುಕ್ತ Tipsಗಳನ್ನು ಹೇಳಿದ್ದಾರೆ ಅವುಗಳೆಂದರೆ,
ಹೆಚ್ಚಿನ ಸಿಹಿ ಪದಾರ್ಥಗಳನ್ನು ಸೇವಿಸಬೇಡಿ
ಸಿಹಿತಿಂಡಿಗಳಲ್ಲಿ ಹೆಚ್ಚಿನ ಪ್ರಮಾಣದ ಫ್ಯಾಟ್ ಅಂಶವಿರುತ್ತದೆ ಇದರಿಂದ ನಿಮ್ಮ ತೂಕ ಹೆಚ್ಚಾಗಬಹುದು, ಸಿಹಿ ತಿಂಡಿಗಳಾದ ಕೇಕ್ ಡ್ರಿಂಕ್ಸ್ ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಒಬೆಸಿಟಿ ಅಂಶಗಳು ಇರುತ್ತವೆ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತದೆ, ನೀವು ದಿನಪ್ರತಿ ಸೇವಿಸುವ ಡ್ರಿಂಕ್ಸ್ ಗಳಲ್ಲೂ ಕೂಡ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿದ್ದು ಇದರ ಅತಿಯಾದ ಸೇವನೆ ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಇದನ್ನು ಓದಿ: ಹೊಟ್ಟೆ ನೋವಿಗೆ ಮನೆ ಮದ್ದು
ಹೆಚ್ಚಿನ ಕಾಳು ಪದಾರ್ಥಗಳನ್ನು ಸೇವಿಸಿ
ಕಾಳುಗಳ ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿಯೆಂಟ್ ಹಾಗೂ ಹೆಲ್ತಿ ಅಂಶಗಳನ್ನು ಒಳಗೊಂಡಿವೆ, ಅವುಗಳೆಂದರೆ ವಿಟಮಿನ್, ಮೆಗ್ನೀಷಿಯಂ, ಫೈಬರ್ ಹಾಗೂ ಹಲವು ಟ್ರಿಯನ್ಸ್ ಗಳನ್ನು ಹೊಂದಿದೆ. ಇದರ ಬಗ್ಗೆ ಹಲವಾರು ಅಧ್ಯಯನಗಳು ನಡೆದಿದ್ದು ಹೆಚ್ಚಿನ ಕಾಳುಗಳನ್ನು ತಿನ್ನುವುದರಿಂದ ಡಯಾಬಿಟಿಸ್ ಹಾಗೂ ಹೃದಯಸಂಬಂಧಿ ಕಾಯಿಲೆಗಳು ಕೂಡ ಕಡಿಮೆಯಾಗುತ್ತದೆ.
ಜಂಕ್ ಫುಡ್ ಅನ್ನು ತಿನ್ನಬೇಡಿ
ರೆಡಿಮೇಡ್ foodಗಳಾದ ಮ್ಯಾಗಿ, ಬರ್ಗರ್, ಪಿಜ್ಜಾ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ ಇರುತ್ತದೆ. ಆದಷ್ಟು ಈ ತರಹದ ಫುಡ್ಗಳನ್ನು ಸೇವಿಸಬೇಡಿ ಏಕೆಂದರೆ ಇದರಲ್ಲಿ ಕಡಿಮೆ ಪ್ರಮಾಣದ ಪ್ರೊಟೀನ್, ಮೈಕ್ರೋನ್ಯೂಟ್ರಿಯಂಟ್ ಹಾಗೂ ಆರೋಗ್ಯ ವಲ್ಲದ ವಸ್ತುಗಳನ್ನು ಸೇರಿಸಿರುತ್ತಾರೆ ಇದು ನಿಮ್ಮ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.
ಊಟದ ಮೊದಲು ಹಾಗೂ ನಂತರ ನೀರು ಕುಡಿಯಿರಿ
ಹೌದು ಹೆಚ್ಚಾಗಿ ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ, ನಿಮ್ಮ ದೇಹದಲ್ಲಿ ಪಚನ ಕ್ರಿಯೆಯನ್ನು ಸರಾಗಗೊಳಿಸುತ್ತದೆ ಹಾಗೂ ಕೆಟ್ಟ ದೇಹದ ಫ್ಯಾಟನ್ನು ಕರಗಿಸಲು ಸಹಕರಿಸುತ್ತದೆ.
ನೀವು ತಿನ್ನುವ Fat ಪದಾರ್ಥಗಳು 30 ಪರ್ಸೆಂಟ್ ಗಿಂತ ಕಡಿಮೆ ನಿಮ್ಮ ದೇಹ ಉಪಯೋಗಿಸುತ್ತದೆ ಬಳಸಿ ಇನ್ನುಳಿದ 70 ಪರ್ಸೆಂಟ್ ನಿಮ್ಮ ದೇಹದಲ್ಲಿ ಬೇಡದ Fat ಹಾಗೇ ಉಳಿದುಕೊಂಡು ಬಿಡುತ್ತದೆ ಇದರಿಂದ ನಿಮ್ಮ ದೇಹದ ತೂಕ ತಾನಾಗಿಯೇ ಹೆಚ್ಚಾಗುತ್ತದೆ ಹಾಗೂ NCD ಹತೋಟಿಯಲ್ಲಿಡುವುದು ತುಂಬಾ ಕಷ್ಟವಾಗುತ್ತದೆ.
ಮದ್ಯಪಾನದಿಂದ ಆದಷ್ಟು ದೂರವಿರಿ
ಅತಿಯಾದ ಮದ್ಯ ಸೇವನೆಯಿಂದ ನಿಮ್ಮ ದೇಹದ ಮೇಲೆ ಹಲವಾರು ತೊಂದರೆಗಳನ್ನು ಉಂಟುಮಾಡುತ್ತದೆ ಅವುಗಳೆಂದರೆ ಮಾನಸಿಕ, ದೈಹಿಕ ಆರೋಗ್ಯ ಬಹುಮುಖ್ಯವಾಗಿ ಹದಗೆಡುತ್ತದೆ ಹಾಗೂ ನಿಮ್ಮ ಲಿವರ್ ಗೆ ಸಂಬಂಧಿಸಿದ ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು ತುಂಬಾ ಹೆಚ್ಚಾಗುತ್ತದೆ.
ಧೂಮಪಾನ ಮಾಡಬೇಡಿ
ಧೂಮಪಾನದಿಂದ ಹಲವಾರು ಶ್ವಾಸಕೋಶಕ್ಕೆ ಸಂಬಂಧಿಸಿದ, ಹೃದಯಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತದೆ ಧೂಮಪಾನ ಮಾಡುವುದು ನಿಮ್ಮನ್ನಷ್ಟೇ ಕೊಲ್ಲದೆ ಬೇರೆಯವರಿಗೂ ಕೂಡ ತುಂಬಾ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ಒಂದು ಕೋಟಿಗೂ ಹೆಚ್ಚು ಜನ ತಂಬಾಕು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
ಬ್ಲಡ್ ಪ್ರೆಶರ್ ಆಗಾಗ ಪರೀಕ್ಷಿಸಿಕೊಳ್ಳಿ
ಹೌದು ನಿಮ್ಮ ದೇಹದಲ್ಲಿ ಯಾವುದೇ ರೀತಿಯ ಕಾಯಿಲೆಗಳು ಕಂಡುಬಂದಾಗ ಅದು ನಿಮ್ಮ ರಕ್ತದ ಒತ್ತಡದ ಮೇಲೆ ಪರಿಣಾಮವನ್ನು ಬೀರುತ್ತದೆ ಆದ್ದರಿಂದ ನಿಮಗೆ ಸಮಯ ಸಿಕ್ಕಾಗ ಹಾಗಾದರೆ ವೈದ್ಯರೊಂದಿಗೆ ತಪಾಸಣೆ ಮಾಡಿಸಿಕೊಳ್ಳಿ.
ಇದನ್ನು ಓದಿ: ಕಣ್ಣಿನ ನೋವಿಗೆ ಸರಳ ಪರಿಹಾರ
ಶುದ್ಧ ನೀರನ್ನು ಬಳಸಿ
ಕುಡಿಯಲು ಯೋಗ್ಯವಲ್ಲದ ನೀರಿನ ಸೇವನೆಯಿಂದ ಹಲವಾರು ರೋಗಗಳಾದ ಕಾಲರ, ಪೋಲಿಯೋಗಳಂತಹ ಭಯಾನಕ ರೋಗಗಳು ನಿಮ್ಮನ್ನು ಆವರಿಸುತ್ತದೆ ಆದ್ದರಿಂದ ಆದಷ್ಟು ಕಾಯಿಸಿ ಆರಿಸಿದ ನೀರನ್ನು ಕುಡಿಯಿರಿ, ಆಹಾರ ತಯಾರಿಕೆಗೆ ಸ್ವಚ್ಛವಾದ ನೀರನ್ನು ಮಾತ್ರ ಬಳಸಿ.
ದಿನನಿತ್ಯ ಆರೋಗ್ಯಕರ ಆಹಾರ ಸೇವಿಸಿ
ದಿನನಿತ್ಯ ಹಲವು ಬಗೆಯ ಊಟವನ್ನು ಸೇವಿಸಿ ಅಂದರೆ ಫ್ರೂಟ್ಸ್, ವೆಜಿಟೇಬಲ್ಸ್ , ಹಲವು ಬಗೆಯ ದಾನ್ಯ, ಜ್ಯೂಸ್ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಪ್ರೋಟೀನ್ಸ್, ಮಿನರಲ್ಸ್ , ಕಬ್ಬಿಣದ ಅಂಶ ದೊರಕುತ್ತದೆ, ಊಟದ ಜೊತೆ ಅಥವಾ ಊಟವಾದ ನಂತರ ಹಣ್ಣುಗಳನ್ನು ಸೇವಿಸುತ್ತಾ ಬನ್ನಿ ಇದರಿಂದ ನಿಮಗೆ ದಯವಿಟ್ಟು ಡಯಾಬಿಟಿಸ್, ಕ್ಯಾನ್ಸರ್, ಸ್ಟ್ರೋಕ್ ನಂತಹ ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.
ಕಡಿಮೆ ಪ್ರಮಾಣದ ಸಕ್ಕರೆ ಹಾಗೂ ಉಪ್ಪನ್ನು ಸೇವಿಸಿ
ಅತಿ ಹೆಚ್ಚು ಉಪ್ಪು ಸೇವನೆ ನಿಮಗೆಲ್ಲಾ ಗೊತ್ತಿರುವ ಹಾಗೆ ನಿಮ್ಮ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ ಅಲ್ಲದೆ ಹೃದಯಘಾತ, Sugar, ಸ್ಟ್ರೋಕ್ ಆಗುವ ಸಂಭವ ಜಾಸ್ತಿ ಇರುತ್ತವೆ. ಉಪ್ಪಿನಲ್ಲಿ ಅತಿ ಹೆಚ್ಚು ಸೋಡಿಯಂ ಅಂಶ ಇರುತ್ತದೆ ಇದು ನಿಮ್ಮ ದೇಹಕ್ಕೆ ಉಪಯೋಗಕರ ವಲ್ಲ ಆದಕಾರಣ ಹೆಚ್ಚು ಪ್ರಮಾಣದ ಉಪ್ಪು ಸೇರಿರುವ ಆಹಾರವನ್ನು ಸೇವಿಸಲೇ ಬೇಡಿ ಅವುಗಳೆಂದರೆ salt, ಸೋಯಾಸಾಸ್, ಸೋಯಾ ಸಾಸ್ ಇನ್ನಿತರ ಸೋಡಿಯಂನಿಂದ ಮಾಡಿರುವ ಆಹಾರ ಸೇವಿಸಬೇಡಿ. ಚಿಕ್ಕ ಮಕ್ಕಳಲ್ಲಿ ಅಧಿಕ ಉಪ್ಪು ಸೇವನೆಯಿಂದ ಹುಳುಕಲ್ಲು, ದೇಹದ ಗಾತ್ರ ಹೆಚ್ಚಾಗುವಿಕೆ ಸಮಸ್ಯೆ ಎದುರಾಗುತ್ತದೆ.
ಪ್ರತಿನಿತ್ಯ ದೈಹಿಕ ಚಟುವಟಿಕೆ ನಡೆಸಿ
ದಿನನಿತ್ಯ ಓಡಾಡುವುದು ಜಾಗಿಂಗ್ ಮಾಡುವುದು ಹಾಗೂ ಇನ್ನಿತರ ರೀತಿಯ ಎಕ್ಸಸೈಜ್ ಮಾಡುವುದರಿಂದ ನಿಮ್ಮ ದೇಹಕ್ಕೆ ಚೈತನ್ಯ ದೊರಕುವುದು ಇದಲ್ಲದೆ ನೀವು ದೈಹಿಕ ಆಟಗಳಾದ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್ ಶಟಲ್ ಕಾಕ್ ನಂತಹ ಆಟಗಳನ್ನು ಸಹ ಆಡಬಹುದು. ನಿಮ್ಮ ದೇಹಕ್ಕೆ ಬೇಕಾದ ದೈಹಿಕ ಎಕ್ಸಸೈಜ್ ನಿಮ್ಮ ವಯಸ್ಸಿನ ಮೇಲೆ ನಿಗದಿಯಾಗುತ್ತದೆ ನಿಮ್ಮ ವಯಸ್ಸು 18 ರಿಂದ 60 ಆಗಿದ್ದರೆ ನಿಮಗೆ ಪ್ರತಿನಿತ್ಯ ಎರಡು ಗಂಟೆಯ ಆಟ ಆಡುವ ಅವಶ್ಯಕತೆ ಇರುತ್ತದೆ.
ವ್ಯಾಕ್ಸಿನೇಷನ್ ಪಡೆದುಕೊಳ್ಳಿ
ವ್ಯಾಕ್ಸಿನೇಷನ್ ಪಡೆಯುವುದರಿಂದ ನಿಮಗೆ ಮುಂದೆ ಬರಬಹುದಾದ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ, ವ್ಯಾಕ್ಸಿನೇಷನ್ ನಿಮ್ಮ ದೇಹದ ಡಿಫೆನ್ಸ್ ಅನ್ನು ಉತ್ತಮಗೊಳಿಸುವುದು ಅಲ್ಲದೆ ರೋಗಗಳಾದ ಕ್ಯಾನ್ಸರ್, ಕಾಲರ ನಿಮೋನಿಯಾ ಗಳಂತಹ ರೋಗಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಭಾರತದಲ್ಲಿ ಹಲವು ರೀತಿಯ ವ್ಯಾಕ್ಸಿನ್ ಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಾ ಬಂದಿದೆ ಅವುಗಳನ್ನು ಪಡೆಯಲು ಮರೆಯದಿರಿ, ಬಹುಮುಖ್ಯವಾಗಿ ಮಕ್ಕಳಿಗೆ ನೀಡುತ್ತಿರುವ ಪಲ್ಸ್ ಪೋಲಿಯೊ ಲಸಿಕೆಯನ್ನು ತಪ್ಪದೇ ಮಕ್ಕಳಿಗೆ ಕೊಡಿಸಿ.
ಸೀನುವಾಗ ಕೈಯನ್ನು ಅಡ್ಡ ತನ್ನಿ
ಹಲವಾರು ವೈರಸ್ ಸಂಬಂಧಿಸಿದ ರೋಗಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ನೀವು ಈ ರೀತಿ ಕೈ ಅಡ್ಡ ತರುವುದರಿಂದ ನಿಮ್ಮಿಂದ ಬೇರೆಯವರಿಗೆ ಅರಳುವ ಹಲವು ರೋಗಗಳನ್ನು ತಡೆಯಲು ಸಹಕರಿಸುತ್ತವೆ. ಭಾರತ ದೇಶದಲ್ಲಿ ಇನ್ನೂ ಅನೇಕರು ಮಾಸ್ ಗಳನ್ನು ಬಳಸುತ್ತಿಲ್ಲ ಇದರಿಂದ ನೀವು ಕೆಮ್ಮಿದಾಗ ಅಥವಾ ಸೀನಿದಾಗ ನಿಮ್ಮಿಂದ ಬ್ಯಾಕ್ಟೀರಿಯಾ ಅಥವಾ ವೈರಸ್ ಇನ್ನೊಬ್ಬರನ್ನು ಸೇರಿ ಅವರಿಗೂ ಸಹ ರೋಗ ಬರುವ ಸಾಧ್ಯತೆಗಳು ಇರುತ್ತವೆ ಇದೇ ಕಾರಣಕ್ಕೆ ಸೀನುವಾಗ ನಿಮ್ಮ ಕೈಯನ್ನು ಅಡ್ಡ ತನ್ನಿ.
ಸೊಳ್ಳೆಪರದೆ ಬೆಳೆಸಿ ಸೊಳ್ಳೆಗಳನ್ನು ದೂರವಿಡಿ
ಹಲವಾರು ಭಯಾನಕ ರೋಗಗಳು ಕೇವಲ ಸೊಳ್ಳೆಯಿಂದ ಹರಡುತ್ತದೆ ಅವುಗಳೆಂದರೆ ಡೆಂಗ್ಯೂ, ಚಿಕನಗುನ್ಯಾ, ಸ್ಮಾಲ್ ಪಾಕ್ಸ್ .ಇಂತಹ ಕಾಯಿಲೆಗಳಿಂದ ದೂರವಿರಬೇಕು ಆದರೆ ನೀವು ಕೇವಲ ಸಣ್ಣ ಪ್ರಮಾಣದ ರಿಸ್ಕನ್ನು ತೆಗೆದುಕೊಳ್ಳಬೇಕು ಅದೆಂದರೆ ಪ್ರತಿನಿತ್ಯ ಮಲಗುವಾಗ ಸೊಳ್ಳೆ ಪರದೆ, ಇತ್ತೀಚಿನ ದಿನಗಳಲ್ಲಿ ಸೊಳ್ಳೆಯನ್ನು ದೂರವಿಡಲು ಮಸ್ಕಿಟೋ ಕಾಯಲ್ ಸಹ ಲಭ್ಯವಿದೆ ಅದನ್ನು ಬಳಸಿ. ನಿಮ್ಮ ದೇಶದಲ್ಲಿ ಸರ್ಕಾರ ಆಗಿಂದಾಗೆ ವ್ಯಾಕ್ಸಿನ್ ಪ್ರೋಗ್ರಾಂಗಳನ್ನು ನಡೆಸುತ್ತಿರುತ್ತವೆ ಅಂತಹ ಸಮಯದಲ್ಲಿ ತಪ್ಪದೇ ವ್ಯಾಕ್ಸಿನ್ ಅನ್ನು ಪಡೆದುಕೊಳ್ಳಿ.
ನಿಮ್ಮ ಮಗುವಿಗೆ ಮೊಲೆಹಾಲು ಎರಡು ವರ್ಷದವರೆಗೆ ಕುಡಿಸಿ
ಈಗ ತಾನೆ ಹುಟ್ಟಿದ ಮಗುವಿಗೆ ಹಾಲು ಕುಡಿಸುವುದು ಅತಿ ಅಗತ್ಯ ಮಗು ಹುಟ್ಟಿದ ಒಂದು ಗಂಟೆಯ ಒಳಗೆ ಮೊಲೆ ಹಾಲನ್ನು ಉಣಿಸುವುದು ಅತಿ ಅಗತ್ಯ ಎಂದು who ಈಗಾಗಲೇ ತಿಳಿಸಿದೆ. ಕೆಲವರು ಮಗುವಿಗೆ ಕೇವಲ ಆರು ತಿಂಗಳವರೆಗೆ ಮೊಲೆಹಾಲು ಕೊಟ್ಟು ನಿಲ್ಲಿಸಿಬಿಡುತ್ತಾರೆ ಅದು ಅಕ್ಷಮ್ಯ ಅಪರಾಧ ನಿಮ್ಮ ಮಗು ಎರಡು ವರ್ಷ ಆಗುವವರೆಗೆ ಹಾಲು ಕುಡಿಸುವುದು ಮರೆಯದಿರಿ. ಮಲಯಾಳ ಕುಡಿಸುವುದರಿಂದ ಕೇವಲ ಮಗುವಿಗೆ ಅಷ್ಟೇ ಅಲ್ಲದೆ ನೀವು ಬ್ರೀಸ್ಟ್ ಕ್ಯಾನ್ಸರ್ ಓವರಿಯನ್ ಕ್ಯಾನ್ಸರ್ ನಂತಹ ರೋಗ ಬರದಂತೆ ತಡೆಯಬಹುದು.
ಕೈಯನ್ನು ಆಗಿಂದಾಗೆ ಶುಚಿಗೊಳಿಸಿ
ಹಲವು ರೋಗಗಳು ನಿಮಗೆ ಗೊತ್ತಿರಬೇಕು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ ಅದು ಕೇವಲ ಕೈಯಿಂದ ಮಾತ್ರ ಈ ಕಾರಣಕ್ಕೆ ನೀವು ಸಮಯ ಸಿಕ್ಕಾಗಲೆಲ್ಲ ಕೈಯನ್ನು ಸೋಪ್ ಅಥವಾ ಆಲ್ಕೋಹಾಲ್ ರಹಿತ ಯಾವುದೇ ಪದಾರ್ಥದಿಂದ ಕೈಯನ್ನು ತೊಳೆದುಕೊಳ್ಳಿ ಇದರಿಂದ ನಿಮ್ಮ ಕೈಯಲ್ಲಿ ಇರುವ ಎಲ್ಲಾ ರೋಗಾಣಗಳು ಸಾಯುತ್ತವೆ.
ಆರೋಗ್ಯಕರ ಫುಡ್ ತಯಾರಿಸಿ
ಸರಿಯಾಗಿ ತಯಾರಿಸಿದ ಆಹಾರದಲ್ಲಿ ಯಾವುದೇ ರೀತಿಯ ಪೋಷಕಾಂಶಗಳು ಇರುವುದಿಲ್ಲ ಹಾಗೂ ಬ್ಯಾಕ್ಟೀರಿಯಾ, ವೈರಸ್ ಗಳು ನಿಮ್ಮ ದೇಹ ಸೇರಿ ಹಲವು ರೀತಿಯ ರೋಗಗಳಾದ ಡೈರಿಯ ದಿಂದ ಹಿಡಿದು ಕ್ಯಾನ್ಸರ್ ನಂತಹ ರೋಗಗಳು ನಿಮ್ಮನ್ನು ಭಾಧಿಸಬಹುದು ಆದ್ದರಿಂದ ಊಟಕ್ಕೆ ಬಳಸುವ ಎಲ್ಲಾ ಪದಾರ್ಥಗಳನ್ನು ಶುಚಿಯಾಗಿ ತೊಳೆದು ಚೆನ್ನಾಗಿ ಬೇಯಿಸಿ ತಿನ್ನುವುದನ್ನು ರೂಢಿಸಿಕೊಳ್ಳಿ.
ರಾತ್ರಿಯ ವೇಳೆ ಚೆನ್ನಾಗಿ ನಿದ್ರಿಸಿ
ನಿದ್ರೆ ಪ್ರತಿಯೊಬ್ಬರಿಗೂ ಅತಿ ಅವಶ್ಯ ಅದರಲ್ಲೂ ಎಂಟು ಗಂಟೆ
ನಿದ್ದೆ, ಕಡಿಮೆ ಸಮಯ ನಿದ್ರಿಸುವುದರಿಂದ ನಿಮ್ಮ ದೇಹದ ಇನ್ಸುಲಿನ್ ಅನ್ನು ಕಡಿಮೆ ಮಾಡುತ್ತದೆ ಇದರಿಂದ
ನಿಮ್ಮ ದೇಹದ ಸಾಮರ್ಥ್ಯ ಹಾಗೂ ಯೋಚನಾ ಶಕ್ತಿ ಕಡಿಮೆಯಾಗುತ್ತದೆ. ಹಲವಾರು ಸಂಶೋಧನೆಯಿಂದ ದೃಢಪಟ್ಟಿರುವ
ವಿಷಯ ಎಂದರೆ ಕಡಿಮೆ ನಿರ್ಧರಿಸುವವರು ತುಂಬಾ ದಪ್ಪ ಇರುತ್ತಾರೆ ಕಡಿಮೆ ನಿದ್ರಿಸುವ ಅವರಲ್ಲಿ ಒಬೆಸಿಟಿ
ತುಂಬಾ ಕಾಮನ್ ಆಗಿರುತ್ತದೆ ಮಕ್ಕಳು, ಯುವಕರು, ವಯಸ್ಕರಲ್ಲೂ ಕೂಡ.
ನೀವು ಹೊರಗಡೆ ಹೆಚ್ಚಿನ ಸಮಯ ಓಡಾಟ ನಡೆಸದಿದ್ದಲ್ಲಿ d3
ವಿಟಮಿನ್ ಮಾತ್ರೆ ಸೇವಿಸಿ
ಹೆಚ್ಚಿನ ಸಮಯ ಸೂರ್ಯನ ಬೆಳಕು ನಮ್ಮ ದೇಹದ ಮೇಲೆ ಬೀಳುವುದರಿಂದ
ವಿಟಮಿನ್-ಡಿ ನಮ್ಮ ದೇಹಕ್ಕೆ ದೊರಕುತ್ತದೆ, ಒಂದು ವೇಳೆ ನೀವು ಸೂರ್ಯನ ಬೆಳಕಿಗೆ ಬಾರದೆ ಇದ್ದಲ್ಲಿ
ಮಾರುಕಟ್ಟೆಯಲ್ಲಿ ಸಿಗುವ ಅಡಿತ್ರಿ ವಿಟಮಿನ್ ಮಾತ್ರೆಯನ್ನು ಸೇವಿಸಿ ಇದರಿಂದ ನಿಮ್ಮ ದೇಹದಲ್ಲಿ ಕೊರತೆಯಾಗುವ
ವಿಟಮಿನ್ ಅನ್ನು ಸರಿದೂಗಿಸಲು ಸಹಕರಿಸುತ್ತದೆ. D3 ಮಾತ್ರೆಗಳ ಸೇವನೆ ನಿಮ್ಮ ದೇಹದ ಸಾಮರ್ಥ್ಯ, ಮಾನಸಿಕ
ಸಾಮರ್ಥ್ಯ ಬಹುಮುಖ್ಯವಾಗಿ ಕ್ಯಾನ್ಸರ್ನಂತಹ ಸಮಸ್ಯೆಗಳು ನಿಮ್ಮನ್ನು ಬಾಧಿಸುವುದಿಲ್ಲ.
ಹೆಚ್ಚಿನ herbs ಮತ್ತು ಖಾರ ತಿನ್ನಿ
ನಾವು ದಿನನಿತ್ಯ ಗಮನಿಸುವಂತೆ ಹಲವಾರು ವಿಧದ Herbs, ಖಾರದ
ವಸ್ತುಗಳನ್ನು ಬಳಸುತ್ತಿದ್ದೇವೆ ಅವುಗಳೆಂದರೆ ಜಿಂಜರ್, ತರ್ಮರಿಕ್ ಇವುಗಳಲ್ಲಿ ಹೆಚ್ಚಿನ ಪ್ರಮಾಣದ
ಆಂಟಿಆಕ್ಸಿಡೆಂಟ್ ಇದೆ ಇದು ದೇಹಕ್ಕೆ ತುಂಬಾ ಉಪಯೋಗಕಾರಿ. ಇದೇ ಕಾರಣಕ್ಕೆ ನಿಮ್ಮ ಪ್ರತಿನಿತ್ಯ ಊಟದಲ್ಲಿ
ಹಲವು ಬಗೆಯ Herbs, ಖಾರದ ಪದಾರ್ಥಗಳನ್ನು ಸೇವಿಸಿ.
ದಿನನಿತ್ಯ ಮೊಟ್ಟೆ ಸೇವಿಸಿ
ಮೊಟ್ಟೆಯಲ್ಲಿ ಸ್ವಾಭಾವಿಕವಾಗಿ ನ್ಯೂಟ್ರಿಯೆಂಟ್ಸ್, ಕ್ಯಾಲ್ಸಿಯಂ,
ವಿಟಮಿನ್ A, C ಅತಿ ಹೆಚ್ಚಾಗಿದೆ ಇದು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ ಮತ್ತು ನಿಮ್ಮ
ದೇಹದ ರಕ್ತದ ಚಲನೆಯನ್ನು ಸರಾಗಗೊಳಿಸುತ್ತದೆ ಮತ್ತಿತರ ಹೃದಯ ಸಂಬಂಧಿ ರೋಗಳನ್ನು ತಡೆಯುವಲ್ಲಿ ಗಣನೀಯ
ಪಾತ್ರ ವಹಿಸುತ್ತದೆ.
ನಿಮಗೆ Health Kannada Tips or Kannada Health Tipsಗಳು ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ವಾಟ್ಸಪ್, ಫೇಸ್ಬುಕ್ನಲ್ಲಿ ಶೇರ್ ಮಾಡಿ ಹಾಗೂ ಲೈಕ್ ಮಾಡಿ ಧನ್ಯವಾದಗಳು.