ಮೈಗ್ರೇನ್ ಗೆ ಮನೆಮದ್ದು - ಹಿಂದಲೆ ನೋವು

ಮೈಗ್ರೇನ್ ಗೆ ಮನೆಮದ್ದು: ತಲೆನೋವನ್ನು ಅನುಭವಿಸದೆ ಇರುವವರು ಯಾರಿದ್ದಾರೆ ಹೇಳಿ ಪ್ರಪಂಚದಲ್ಲಿ ಇದು ಸಾಮಾನ್ಯ ಸಮಸ್ಯೆಯಾದರೂ ತುಂಬಾ ಜನರ ವಿಷಯದಲ್ಲಿ ಇದು ಬಹಳ ದೊಡ್ಡ ರೋಗವಾಗಿ ಮಾರ್ಪಟ್ಟಿದೆ. ಕೆಲವರು ಹಿಂದಲೆ ನೋವು ನಿವಾರಿಸಿಕೊಳ್ಳಲು ಮನೆಮದ್ದು ಉಪಯೋಗಿಸಿ ಪರಿಹಾರ ಕಂಡುಕೊಳ್ಳುತ್ತಾರೆ ಹಾಗೂ ಇನ್ನು ಕೆಲವರು ತಲೆ ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಸೇವಿಸಿ ತಮಗೆ ಇಲ್ಲದೆ ಇರುವ ಕಾಯಿಲೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ ಇದರಿಂದ ತಲೆನೋವನ್ನು ಸಣ್ಣ ಕಾಯಿಲೆಯೆಂದು ಪರಿಗಣಿಸುವಂತಿಲ್ಲ.

ಇದನ್ನು ಓದಿಕೂಲ್ ಕ್ಯಾಪ್ಟನ್ ಧೋನಿಗೆ ಎರಡನೇ ಮಗು ಆಗಲ್ಲ ಏಕೆ 

ಇತ್ತೀಚಿಗೆ ತಲೆನೋವು ಎಲ್ಲರನ್ನೂ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ ಇದಕ್ಕೆ ಕಾರಣ ನಮ್ಮ ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡ ಹಾಗೂ ಮುಖ್ಯವಾಗಿ ಆಹಾರ ತೆಗೆದುಕೊಳ್ಳುವ ರೀತಿ, ನಾವು ಈ ಬ್ಲಾಗ್ನಲ್ಲಿ ಮನೆಯಲ್ಲಿ ಸಿಗುವ ಆಹಾರ ಪದಾರ್ಥಗಳಿಂದ ಹೇಗೆ ನೀವು ತಲೆನೋವನ್ನು (Migraine Meaning in Kannada) ನಿವಾರಿಸಿಕೊಳ್ಳಬಹುದು ಎಂಬುದರ ಬಗ್ಗೆ ಅತಿ ಸರಳ ವಿಧಾನಗಳನ್ನು ತಿಳಿಸಿ ಕೊಡಲಿದ್ದೇವೆ.

ತಲೆನೋವಿನಲ್ಲಿ ಕೂಡ ವಿವಿಧ ಪ್ರಕಾರಗಳಿವೆ ಅವುಗಳಲ್ಲಿ ಪ್ರಮುಖವಾದವು ಎಂದರೆ

  • ಸೈನಸ್ ತಲೆನೋವು
  • ಟೆನ್ಷನ್ ತಲೆನೋವು
  • ಕ್ಲಸ್ಟರ್ ತಲೆನೋವು
  • ಮೈಗ್ರೇನ್

ಪ್ರಪಂಚದಲ್ಲಿ ಅತ್ಯಂತ ವೇದನೆ ತರಿಸುವಂತಹ ನೋವು ಎಂದರೆ ಮೊದಲನೇ ಸ್ಥಾನದಲ್ಲಿ ಹೆರಿಗೆ ನೋವಿದೆ ನಂತರ ಸ್ಥಾನದಲ್ಲಿರುವುದು ಮೈಗ್ರೇನ್ ತಲೆನೋವು. ಕಾಯಿಲೆ ಬಂದವರಲ್ಲಿ ತಲೆನೋವು ಉಗ್ರ ಸ್ವರೂಪದಲ್ಲಿರುತ್ತದೆ ರೋಗಿಯ ಯೋಚನೆ ಶಕ್ತಿಯನ್ನು ಕುಂದಿಸಿ ಬಿಡುತ್ತದೆ. ಸಾಮಾನ್ಯ ತಲೆನೋವು ಕೇವಲ ಒಂದು ಬದಿ ಅಥವಾ ಹಿಂಬದಿ ಆವರಿಸಿಕೊಂಡು ಸೂಚಿಸುತ್ತದೆ ಆದರೆ ಮೈಗ್ರೇನ್ ಬಂದವರ ತಲೆನೋವು ಕೇವಲ ತಲೆಯನ್ನು ಮಾತ್ರ ಬಾದಿಸದೆ ಮಾನವನ ಇತರ ಅಂಗಗಳನ್ನು ಕೂಡ ಬಾಧಿಸುತ್ತದೆ, ತಲೆನೋವು ಬಂದರೆ ಯಾವುದೇ ರೀತಿಯ ಅಮೃತಾಂಜನ್ ಮಾತ್ರೆಗಳ ಸೇವನೆಯಿಂದ ಕಂಟ್ರೋಲ್ ಮಾಡಲು ಸಾಧ್ಯವಾಗುವುದಿಲ್ಲ.

ಕಾಯಿಲೆ ಆರಂಭವಾದ ದಿನದಲ್ಲಿ ಸಾಮಾನ್ಯ ತಲೆನೋವಿನ ಅಂತೆ ಅನಿಸುತ್ತೆ ತದನಂತರ ಬೆಳೆಯುತ್ತಾ ಹೋಗಿ ಇಡೀ ಮೆದುಳನ್ನೇ ತನ್ನ ಕಪಿಮುಷ್ಟಿಗೆ ತೆಗೆದುಕೊಳ್ಳುತ್ತದೆ ಎಷ್ಟರಮಟ್ಟಿಗೆ ರೋಗ ಕಾಡುತ್ತದೆ ಎಂದರೆ ದೃಷ್ಟಿ, ಯೋಚನೆ ಇದ್ಯಾವುದನ್ನು ಮನುಷ್ಯ ಮಾಡಲಾರ ಅಷ್ಟರಮಟ್ಟಿಗೆ ಆವರಿಸಿಬಿಡುತ್ತದೆ.

ಕೆಲವರಂತೂ ತಲೆನೋವನ್ನು ತಡೆದುಕೊಳ್ಳಲಾಗದೆ ಉಸಿರು ಕೂಡ ಮಾಡಿಕೊಂಡಿದ್ದಾರೆ ಇನ್ನು ಕೆಲವರು ಯಾರಾದರೂ ನನ್ನನ್ನು ಕೊಂದು ಬಿಡಿ ಎಂದು ಚೀರಾಡುತ್ತಾರೆ ಕೂರಲಾಗದೆ ನಿಲ್ಲಲಾಗದೆ ಕೊನೆಗೆ ಮಲಗಲು ಆಗದೆ ತುಂಬಾ ವ್ಯಥೆಪಡುವ ಸಂದರ್ಭ ಉಂಟಾಗುತ್ತದೆ.


ಮೈಗ್ರೇನ್ ತಲೆನೋವಿಗೆ ಇನ್ನೂ ಔಷಧಿ ಇಲ್ಲ

ಮೈಗ್ರೇನ್ ತಲೆನೋವು ಕೆಲವರಲ್ಲಿ ಕೆಲವು ನಿಮಿಷಗಳ ಕಾಲ ಇದ್ದರೆ ಇನ್ನು ಕೆಲವರಲ್ಲಿ ಗಂಟೆಗಟ್ಟಲೆ, ದಿನಗಳವರೆಗೂ ಸಹ ಇರುತ್ತದೆ ಕಾಯಿಲೆ ಮೆದುಳಿಗೆ ಸಂಬಂಧಿಸಿರುವುದರಿಂದ ಇದಕ್ಕೆ ಖಚಿತ ಕಾರಣವೇನೆಂದು ಇನ್ನೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ.

ಈಗ ಸಿಗುತ್ತಿರುವ ಔಷಧಗಳಿಂದ ಮೆದುಳಿಗೆ ಸ್ವಲ್ಪ ಶಮನ ಕಂಡುಬರುತ್ತದೆ ಆದರೆ ಪೂರ್ಣ ಪ್ರಮಾಣದಲ್ಲಿ ತಗ್ಗಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಆರಂಭದದಿನಗಳಲ್ಲಿ ನೋವುನಿವಾರಕ ಔಷಧಿ ಪಡೆದುಕೊಳ್ಳಬೇಕು ಮೈಗ್ರೇನ್ ಉಗ್ರ ಸ್ವರೂಪ ಪಡೆಯಲು ಬಿಡಬಾರದು. ಕಾಯಿಲೆ ಬಂದಿರುವವರು ವೈದ್ಯರು ಸೂಚಿಸಿದ ಔಷಧಿಗಳನ್ನು ಯಾವಾಗಲೂ ತಮ್ಮ ಬಳಿಯೇ ಇಟ್ಟುಕೊಂಡಿರಬೇಕು ಏಕೆಂದರೆ ಯಾವಾಗ ಕಾಯಿಲೆ ನಿಮ್ಮನ್ನು ಉಗ್ರವಾಗಿ ಬಾಧಿಸುತ್ತದೆ ಎಂಬ ಮಾಹಿತಿ ಯಾರಿಗೂ ಇಲ್ಲ ಸ್ವಲ್ಪ ಪ್ರಮಾಣದ ತಲೆನೋವು ಬಂದಾಗ ಔಷಧಿಯನ್ನು ಪಡೆದು ವಿಶ್ರಾಂತಿ ತೆಗೆದುಕೊಳ್ಳುವುದು ಅತಿ ಅವಶ್ಯ ಇಲ್ಲವಾದಲ್ಲಿ ಮೈಗ್ರೇನ್ ತಲೆನೋವು ತುಂಬಾ ಹೆಚ್ಚಾಗಿ ಬಿಡುತ್ತದೆ.


ಮೈಗ್ರೇನ್ ತಲೆನೋವು ಮಹಿಳೆಯರಲ್ಲಿ ಹೆಚ್ಚು ಏಕೆ

ಹೌದು ಹಲವಾರು ಯೂನಿವರ್ಸಿಟಿಗಳು ರೋಗದ ಬಗ್ಗೆ ಅತ್ಯಂತ ಕಠಿಣ ಸಂಶೋಧನೆಗಳನ್ನು ನಡೆಸಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮೈಗ್ರೇನ್ ತಲೆನೋವು ಎಲ್ಲೋ ಒಂದು ಕಡೆ ಮಹಿಳೆಯರ ಲೈಂಗಿಕ ಕ್ರಿಯೆಯಲ್ಲಿ ಉತ್ಪತ್ತಿಯಾಗುವ ರಸದೊಂದಿಗೆ ಸಂಬಂಧ ಹೊಂದಿದೆ ಹಲವಾರು ಬಾರಿ ಹೆಣ್ಣು ಪ್ರಾಣಿಗಳ ಮೇಲೆ ಪರೀಕ್ಷೆ ನಡೆಸಲಾಯಿತು ಅಧ್ಯಯನದಲ್ಲಿ ಕಂಡು ಬಂದ ವಿಷಯ ಏನೆಂದರೆ ಲೈಂಗಿಕ ರಸದೂತ, ಮೈಗ್ರೇನ್ ತಲೆನೋವಿಗೆ ಸಂಬಂಧ ಇದೆ ಎಂದು. ಸಂತೋಷಪಡುವ ಸುದ್ದಿಯೆಂದರೆ ಕಾಯಿಲೆ ಹೆಚ್ಚಾಗಿ ವಯಸ್ಕ ಮಹಿಳೆಯರಲ್ಲಿ ಕಂಡುಬರುತ್ತದೆ.

Estrogen ಪ್ರಭಾವ ಹೆಚ್ಚಾಗಿರುವ ಸಮಯ ಅದು ಮಾಸಿಕ ಋತುಸ್ರಾವದ ಹೊತ್ತು ತಲೆನೋವು ತುಂಬಾ ಜೋರಾಗಿರುತ್ತದೆ, ತದ್ವಿರುದ್ಧವಾಗಿ ಪುರುಷರ ರಸ ಧಾತುಗಳು ತಲೆನೋವು ಬರದಂತೆ ತಡೆಯುತ್ತವೆ. ಇಷ್ಟು ಮಾಹಿತಿ ಇದ್ದರೂ ಕೂಡ ಸಾಲದು ಇನ್ನೂ ಇದರ ಬಗ್ಗೆ ಅತ್ಯಂತ ಆಳವಾದ ಅಧ್ಯಯನ ನಡೆಯಬೇಕು ಹಾಗೂ ಇದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳುವುದು ಅವಶ್ಯ, ಕಾರಣ ತಲೆನೋವು ಕೇವಲ ಮಹಿಳೆಯರಲ್ಲಿ ಕಾಣಿಸದೇ ಪುರುಷರಲ್ಲೂ ಸಹ ಆಗಾಗ ಕಾಣಿಸಿಕೊಳ್ಳುತ್ತದೆ ಇದರಿಂದ ತಿಳಿದುಬರುವ ಮಾಹಿತಿ ಏನೆಂದರೆ ಕೇವಲ ರಸ ದಾತುಗಳಿಂದ ರೋಗ ಉಂಟಾಗುವುದಿಲ್ಲ ಬೇರೆಯೇ ಕಾರಣ ಇದೆ ಎಂದು.


ಮೈಗ್ರೇನ್ ತಲೆನೋವನ್ನು ನೈಸರ್ಗಿಕವಾಗಿ ಕಡಿಮೆಮಾಡುವ ವಿಧಾನಗಳು ಹೀಗಿವೆ

ಹಲವು ಜನರಿಗೆ ನನಗೆ ಮೈಗ್ರೇನ್ ತಲೆನೋವು ಬಂದಿದೆ ಎಂದು ಅರಿವಾಗುವುದಿಲ್ಲ ಯಾವಾಗ ಕಾಯಿಲೆ ಉಗ್ರ ಸ್ವರೂಪ ಪಡೆಯುತ್ತದೆ ಆವಾಗ ಡಾಕ್ಟರ್ ಬಳಿ ಹೋಗಿ ಟೆಸ್ಟಿಂಗ್ ಗೆ ಒಳಗಾಗುತ್ತಾರೆ ಇದು ಖಂಡಿತ ತಪ್ಪು. ತಲೆ ನೋವು ಕಾಣಿಸಿಕೊಂಡ ದಿನದಂದೇ ಮನೆಯಲ್ಲಿ ಸಿಗುವ ಕೆಲವು ಔಷಧಿ ವಸ್ತುಗಳನ್ನು ಬಳಸಿ ರೋಗ ಉಲ್ಬಣವಾಗದಂತೆ ತಡೆಯುವುದಲ್ಲದೆ ನಿಯಂತ್ರಿಸಬಹುದು ಕೂಡ ಅದರ ಬಗ್ಗೆ ಈಗ ಮಾಹಿತಿ ತಿಳಿದುಕೊಳ್ಳಿ.


ಲ್ಯಾವೆಂಡರ್ ತೈಲ

ನಿಮಗೆ ಹಿಂದಲೆ ನೋವು ಬಂದ ತಕ್ಷಣವೇ ಲ್ಯಾವೆಂಡರ್ ಎಣ್ಣೆಯನ್ನು ಸ್ವಲ್ಪ ಹಸ್ತದ ಮೇಲೆ ಚಿಮುಕಿಸಿ ವಾಸನೆಯನ್ನು ಗ್ರಹಿಸಿ ಇದರಿಂದ ನಿಮ್ಮ ತಲೆನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಹಲವಾರು ವೈದ್ಯಕೀಯ ವಿಶ್ವವಿದ್ಯಾನಿಲಯಗಳು ಇದರ ಬಗ್ಗೆ ಮಾಹಿತಿ ಕಲೆಹಾಕಿ 2012ರಲ್ಲಿ ಇದರ ಬಗ್ಗೆ ವರದಿಯನ್ನು ಪ್ರಕಟಿಸಿದೆ ಈಗ ಲ್ಯಾವೆಂಡರ್ ಎಣ್ಣೆ ಬಳಸುವ ಮಿಷನ್ ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ ಇದನ್ನು ಬಳಸಿ ಶೀಘ್ರವೇ ತಲೆನೋವಿನಿಂದ ಮುಕ್ತಿ ಪಡೆಯಿರಿ.


ಹಸಿಶುಂಠಿ

ನಮ್ಮ ಪೂರ್ವಜರು ಅಂದರೆ ಶತಶತಮಾನಗಳಿಂದ ಶುಂಠಿ ನಾವು ಬಳಸುತ್ತಿದ್ದೇವೆ ಹಸಿಶುಂಠಿ ಆಂಟಿಬಯೋಟಿಕ್, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಪ್ರತಿನಿತ್ಯ ಶುಂಠಿ ಕಷಾಯವನ್ನು ತಯಾರಿಸಿ ಅಥವಾ ಶುಂಠಿ ಕಾಫಿಯನ್ನು ತಯಾರಿಸಿ ಸೇವನೆ ಮಾಡುವುದರಿಂದ ಮೈಗ್ರೇನ್ ಉಲ್ಬಣಗೊಳ್ಳದಂತೆ ನಿಗ್ರಹಿಸಬಹುದು ಅಕಸ್ಮಾತ್ ತಲೆನೋವು ಉಲ್ಬಣಗೊಂಡಿದ್ದರು ಸಹ ಟೀಯನ್ನು ಸೇವಿಸಿ ಮುಕ್ತಿ ಪಡೆಯಬಹುದು.


ಎಣ್ಣೆಯಿಂದ ತಲೆ ಮಸಾಜ್

ತಲೆನೋವು ಎಂದಾಕ್ಷಣ ಎಲ್ಲರಿಗೂ ಅನಿಸುವುದು ಮಸಾಜ್ ಹಾಗೆಯೇ ನಿಮಗೆ ಒಂದು ವೇಳೆ ಮೈಗ್ರೇನ್ ತಲೆನೋವು ಇದ್ದರೆ, ಪ್ರತಿನಿತ್ಯ  ವಿವಿಧ ಎಣ್ಣೆ ಗಳಾದ ಪುದಿನಹರಳೆಣ್ಣೆ, ಕೊಬ್ಬರಿ ಎಣ್ಣೆ, ನವರತ್ನ ತೈಲ, ಡಾಬರ್ ಎಣ್ಣೆ ಬಳಸಿ ಚೆನ್ನಾಗಿ ಮಸಾಜ್ ಮಾಡಿಸಿಕೊಳ್ಳುವುದು ತುಂಬಾ ಅವಶ್ಯ.


Migraine Headache Solution ಈ ಕೆಳಗಿನಂತಿವೆ

  1. ತಲೆನೋವನ್ನು ದೂರವಾಗಿಸಲು ಲವಂಗವನ್ನು ಹಾಗೂ ಉಪ್ಪನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಪ್ರತಿನಿತ್ಯ ಸೇವಿಸಿದರೆ ತಲೆನೋವು ಕಡಿಮೆಯಾಗಿ ಬಿಡುತ್ತದೆ.
  2. ತಲೆನೋವಿಗೆ ಶುಂಠಿ ಕಾಫಿ ಅತ್ಯಂತ ಪ್ರಭಾವಶಾಲಿ ಮನೆ ಮದ್ದು ನೀವು ಮನೆಯಲ್ಲೇ ಸಿಗುವ ಶುಂಠಿಯನ್ನು ಚೆನ್ನಾಗಿ ಅರೆದು ಅಥವಾ ಪ್ಯಾಕೆಟ್ ನಲ್ಲಿ ಸಿಗುವ ಶುಂಠಿ ಯನ್ನಾದರೂ ಬಳಸಬಹುದು ಅದನ್ನು ನೀರಿನಲ್ಲಿ ಚೆನ್ನಾಗಿ ಬೆರೆಸಿ ಹಣೆಗೆ ಆ ನೀರನ್ನು ಹಚ್ಚಿಕೊಳ್ಳುವುದರಿಂದ ತಲೆನೋವು  ದೂರವಾಗಿ ಬಿಡುತ್ತದೆ.
  3. ತಕ್ಷಣಕ್ಕೆ ನಿಮಗೆ ತಲೆನೋವು ಹೋಗಬೇಕಾದರೆ ಮನೆಯಲ್ಲಿ ಸಿಗುವ ನಿಂಬೆಹಣ್ಣನ್ನು ಕಾಯಿಸಿದ ನೀರಿಗೆ ಮಿಶ್ರಣ ಮಾಡಿ ಬಿಸಿ ಮಿಶ್ರಣವನ್ನು ಕುಡಿಯುವುದರಿಂದ ತಲೆನೋವು ಮಾಯವಾಗಿಬಿಡುತ್ತದೆ.
  4. ನೀವು ಬ್ಲಾಕ್ ಟೀಯನ್ನು ಕುಡಿಯುತ್ತಿದ್ದರೆ ಅದರ ಜೊತೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಸೇವಿಸಿದರೆ ತಲೆನೋವು ಕಮ್ಮಿಯಾಗುತ್ತದೆ.
  5. ತುಳಸಿಯ ಮಹತ್ವ ಯಾರಿಗೆ ಗೊತ್ತಿಲ್ಲ ಹೇಳಿ ತುಳಸಿ ಹಾಗೂ ಶುಂಠಿಯನ್ನು ಚೆನ್ನಾಗಿ ಕುಟ್ಟಿ  ಮಿಶ್ರಣ ಮಾಡಿ ತಲೆಗೆ ಹಚ್ಚುವುದರಿಂದ ಹಾಗೂ ಇದರ ರಸವನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ.
  6. ಮನೆಯಲ್ಲೇ ಸಿಗುವ ಎಣ್ಣೆ ಅಥವಾ ಲವಂಗದ ಎಣ್ಣೆಯನ್ನು ಚೆನ್ನಾಗಿ ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

ಬೆಂಬಿಡದೆ ಕಾಡುವ ಮೈಗ್ರೇನ್ ತಲೆನೋವಿನ ಲಕ್ಷಣಗಳು ಹೀಗಿವೆ

ಮರೀಚಿಕೆಯಾಗುವ ನಿಮ್ಮ ನಿದ್ದೆನಿದ್ದೆ ಬರಬೇಕಾದರೆ ನಿಮ್ಮ ಎಲ್ಲಾ ಸ್ನಾಯುಗಳು ತಮ್ಮ ಕೆಲಸವನ್ನು ನಿಲ್ಲಿಸಿ ವಿಶ್ರಾಂತಿ ಪಡೆಯಬೇಕು. ಆದರೆ ಯಾವ ವ್ಯಕ್ತಿಗೆ ಮೈಗ್ರೇನ್ ತಲೆನೋವು ಸಮಸ್ಯೆ ಇರುತ್ತದೆ ಅವರಿಗೆ ಮೆದುಳು ಎಚ್ಚರವಾಗಿಯೇ ಇರುವುದರಿಂದ ಹಲವಾರು ಜನರು ನಿದ್ದೆ ಬಾರದೆ ತುಂಬಾ ವ್ಯಥೆ ಪಡುತ್ತಾರೆ 34 ದಿನಗಳು ನಿದ್ರೆ ಬಾರದಂತೆ ಆಗುತ್ತದೆ ಇದು ತುಂಬಾ ಗಂಭೀರ ಮೈಗ್ರೇನ್ ತಲೆನೋವು ಇರುವವರಲ್ಲಿ ಕಾಣಿಸಿಕೊಳ್ಳುವ ಲಕ್ಷಣವಾಗಿದೆ ಇಂತಹ ಸಂದರ್ಭದಲ್ಲಿ ಸಡನ್ನಾಗಿ ವೈದ್ಯರನ್ನು ಭೇಟಿಯಾಗುವುದು ಸೂಕ್ತ.


ಚಾಕ್ಲೆಟ್ ತಿನ್ನೋಣ ಎಂದೆನಿಸುತ್ತದೆ

ಯಾರಿಗೆ ತಲೆನೋವು ಬಂದ ತಕ್ಷಣ ಹೆಚ್ಚಿನ ಚಾಕಲೇಟನ್ನು ಅದರಲ್ಲೂ ಕೋಕೋ ಇರುವ ಚಾಕಲೇಟನ್ನು ತಿನ್ನುವ ಬಯಕೆ ಉಂಟಾಗುತ್ತದೆ ಅಂತಹವರು ತಕ್ಷಣ doctors ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದು ತುಂಬಾ ಅವಶ್ಯ ಇಲ್ಲವಾದಲ್ಲಿ ಮೈಗ್ರೇನ್ ತಲೆನೋವು ವಿಕೋಪಕ್ಕೆ ತಿರುಗುವ ಸಾಧ್ಯತೆ ಇರುತ್ತದೆ.

ಇದನ್ನು ಓದಿಪ್ರಬಂಧ ಬರೆಯುವುದು ಹೇಗೆ 


ಕಣ್ಣಿನ ನೋವು

ಸಾಮಾನ್ಯವಾಗಿ ತಲೆನೋವು ಹೆಚ್ಚಾದಾಗ ಕಣ್ಣು ನೋವು ಕಾಣಿಸಿಕೊಳ್ಳುವುದು ತುಂಬಾ ಸಾಮಾನ್ಯ ಆದರೆ ಮೈಗ್ರೇನ್ ತಲೆನೋವು ಬಂದವರಲ್ಲಿ ಕಣ್ಣಿನಿಂದ ನೋಡುತ್ತಿರುವ ದೃಶ್ಯ ಸಾಮಾನ್ಯವಾಗಿ ಬ್ಲರ್ ಬ್ಲರ್ ಆಗಿ ಕಾಣಿಸುತ್ತದೆ ಇದು ಮೈಗ್ರೇನ್ ತಲೆನೋವಿನ ಒಂದು ಭಾಗ, ಇಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ವಾಹನ ಡ್ರೈವಿಂಗ್ ಮಾಡಕೂಡದು, ಕೂಡಲೇ ವೈದ್ಯರನ್ನು ಭೇಟಿಯಾಗಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ.


ಮೂತ್ರಕ್ಕೆ ಪದೇಪದೇ ಅವಸರವಾಗುತ್ತದೆ

ಒಂದು ವೇಳೆ ನಿಮಗೆ ತಲೆನೋವು ಇದ್ದು ಪದೇ ಪದೇ ಮೂತ್ರಕ್ಕೆ ಹೋಗುತ್ತಿದ್ದರೆ ಇದು ಮೈಗ್ರೇನ್ ಲಕ್ಷಣವಾಗಿರುತ್ತದೆ.


ಕುತ್ತಿಗೆ ನೋವು

ಸಾಮಾನ್ಯವಾಗಿ ಕುತ್ತಿಗೆ ಭಾಗದಲ್ಲಿ ತುಂಬಾ ನೋವು ಉಂಟಾಗುತ್ತದೆ ಎಷ್ಟರಮಟ್ಟಿಗೆ ಎಂದರೆ ಸ್ವಲ್ಪವೂ ಕತ್ತನ್ನು ಜರುಗಿಸಲು ಸಾಧ್ಯವಾಗುವುದಿಲ್ಲ ರೀತಿಯ ಸಮಸ್ಯೆ ಸಡನ್ನಾಗಿ ಉಂಟಾಗುವುದು ಮೈಗ್ರೇನ್ ಮೊದಲ ಹಂತದಲ್ಲಿ ತಡ ಮಾಡದೆ ಕೂಡಲೇ ಡಾಕ್ಟರ್ ಇಂದ ಸೂಕ್ತ ಪರೀಕ್ಷೆಗೆ ಒಳಗಾಗಿ.