ಕರ್ನಾಟಕದಲ್ಲಿ ಯಾರಿಗೆ ಫ್ಯಾನ್ ಹೆಚ್ಚಾಗಿದ್ದಾರೆ, D ಬಾಸ್ ದರ್ಶನ್? Kiಚ್ಚ ಸುದೀಪ್?

ಹಲೋ ನಮಸ್ಕಾರ ಫ್ರೆಂಡ್ಸ್ ನಮಗೆಲ್ಲ ಗೊತ್ತಿರುವ ಹಾಗೆ ಡಿ ಬಾಸ್ ಹಾಗೂ ಕಿಚ್ಚ ಸುದೀಪ್ ಅವರು ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು ಇದೀಗ ಕೆಲವು ವಿಚಾರಗಳಿಂದ ಇವರಿಬ್ಬರ ನಡುವೆ ಅಂತರ ಏರ್ಪಟ್ಟಿದೆ ,ಇವರಿಬ್ಬರ ಫ್ಯಾನ್ಸ್ ಗಳ ನಡುವೆ ಆಗಿಂದಾಗ್ಗೆ ಸೋಶಿಯಲ್ ಮೀಡಿಯಾ ಗಳಲ್ಲಿ ವಾರ್ ನಡೆಯುತ್ತಲೇ ಇರುತ್ತದೆ. ಆದರೆ ನಿಜವಾಗಿ ಹೇಳುವುದಾದರೆ ಇವರಿಬ್ಬರಿಗೂ ತುಂಬಾ ಜನ ಫ್ಯಾನ್ ಫಾಲವರ್ಸ್ ಇದ್ದಾರೆ. ಇಬ್ಬರು ನಟರು ಕೂಡ ತಮ್ಮ 25ನೇ ವರ್ಷದ ಸಿನಿ ಜರ್ನಿ ಯನ್ನು ಪೂರ್ಣಗೊಳಿಸಿದ್ದಾರೆ ಇಬ್ಬರೂ ಕೂಡ ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಿಗರಿಗೆ ನೀಡಿದ್ದಾರೆ ಆದರೆ ಕೆಲವು ಪುಂಡರು ಮಾಡುವ ಕೆಲಸ ಸೊಸೆಯ ಮೀಡಿಯಾದಲ್ಲಿ ತುಂಬಾ ದೊಡ್ಡ ಚರ್ಚೆಯನ್ನೇ ಏರ್ಪಡಿಸಿದೆ ಕೆಲವು ಬಾರಿ.

ಅಂದಹಾಗೆ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು ಆದರೆ ಕಿಚ್ಚ ಸುದೀಪ್ ನೀಡಿದ ಹೇಳಿಕೆಯಿಂದಾಗಿ ಅವರಿಬ್ಬರ ನಡುವೆ ಘರ್ಷಣೆ ಉಂಟಾಯಿತು, ಸುದೀಪ್ ಹೇಳಿದ ಏಳಿಕೆ ಏನೆಂದರೆ ನಾನೇ ದರ್ಶನ್ಗೆ ಮೂವಿ ಚಾನ್ಸ್ ಅನ್ನು ಕೊಡಿಸಿದೆ ಎಂದು ಇಂಟರ್ವ್ಯೂನಲ್ಲಿ ಹೇಳಿಕೊಂಡಿದ್ದಾರೆ. ಇದಾದ ನಂತರ ಒಬ್ಬರಿಂದೊಬ್ಬರಿಗೆ ಮಾತಿನ ಸಮರ ಏರ್ಪಟ್ಟು ಬೇರ್ಪಟ್ಟರು. ಈಗ ಕರ್ನಾಟಕದ ಜನರು ಇವರಿಬ್ಬರು ಯಾವಾಗ ಒಂದಾಗುತ್ತಾರೆ ಎಂದು ಕಾದು ಕೂತಿದ್ದಾರೆ.

ಇವರಿಬ್ಬರು ನಂತರ ಏಲ್ಲಿಯೂ ಕೂಡ ಒಂದೇ ವೇದಿಕೆಯನ್ನು ಹಂಚಿಕೊಂಡಿಲ್ಲ, ಹಲವಾರು ಸಂದರ್ಭಗಳು ಕೂಡಿಬಂದಿದ್ದರೂ ಕೂಡ ಇವರಿಬ್ಬರು ಒಟ್ಟಿಗೆ ಸೇರಲಿಲ್ಲ.

ಆದಷ್ಟು ಬೇಗ ಇವರಿಬ್ಬರೂ ಒಟ್ಟಿಗೆ ಸೇರಲಿ ಹಾಗೂ ಒಂದೇ ಫಿಲಂನಲ್ಲಿ ನಟಿಸಲು ಎಂದು ಹಾರೈಸುತ್ತಾ ನಮ್ಮ ಬ್ಲಾಗನ್ನು ಮುಗಿಸುತ್ತಿದ್ದೇವೆ.