ಕಣ್ಣು ನೋವಿಗೆ ಕಾರಣ - ಕಣ್ಣಿನ ಸಮಸ್ಯೆಗೆ ಪರಿಹಾರ

ಕಣ್ಣು ನೋವಿಗೆ ಕಾರಣ: ಕಣ್ಣಲ್ಲಿ ನೀರು ಸುರಿಯುವುದು, ಕೆಂಪಾಗುವುದು, ಕೆರೆತ, ನೋವು ಮುಂತಾದ ಕಣ್ಣಿನ ಕಷ್ಟಗಳಿಗೆ ಕೆಲವು ಮನೆಯ ಔಷಧಿಗಳು ಪರಿಹಾರ ನೀಡುತ್ತವೆ. ಮಾನವನ ದೇಹದಲ್ಲಿರುವ ಅತಿ ಸೂಕ್ಷ್ಮಾತಿಸೂಕ್ಷ್ಮ ಅಂಗ ಕಣ್ಣು, ಕಣ್ಣಿಗೆ ಸ್ವಲ್ಪಮಟ್ಟಿನ ಪೆಟ್ಟಾದರೂ ಸಹಿಸುವುದು ತುಂಬಾ ಕಷ್ಟ ಆದ್ದರಿಂದ ಕಣ್ಣನ್ನು ಅತಿ ಸುರಕ್ಷತೆಯಿಂದ ಕಾಪಾಡಿಕೊಳ್ಳುವುದು ಅವಶ್ಯ. ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಕಂಪ್ಯೂಟರ್, ಟಿವಿ, ಮೊಬೈಲ್ಗಳನ್ನು ನೋಡುತ್ತಿರುತ್ತೇವೆ ಇದರಿಂದ ಕಣ್ಣಿನ ಮೇಲೆ ತುಂಬಾ ಒತ್ತಡ  ಉಂಟಾಗುತ್ತದೆ ಹಾಗೂ ಕಣ್ಣಿನ ಸಮಸ್ಯೆಗಳು ಉದ್ಭವವಾಗುತ್ತದೆ.

ಕಣ್ಣಿನ ಕೆಲವು ಸಮಸ್ಯೆಗಳು ಹಾಗೂ ಪರಿಹಾರಗಳು ಈ ಕೆಳಗಿನಂತಿವೆ

- ಕೆಲವು ಕಣ್ಣಿನ ತೊಂದರೆಗಳಿಗೆ ಉಗುರು ಬೆಚ್ಚಗಿನ ನೀರನ್ನು ದಿನಕ್ಕೆ ಹಲವು ಬಾರಿ ಹಾಕುವುದರಿಂದ ಕೆಲವು ಸಮಸ್ಯೆಗಳು ತಾನಾಗಿಯೇ ಪರಿಹಾರವಾಗುತ್ತವೆ.

- ರೋಸ್ ವಾಟರ್ ಗೆ  ಸ್ವಲ್ಪ ಪ್ರಮಾಣದ ಸ್ಪಟಿಕ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ದಿನ ಎರಡರಿಂದ ಮೂರು ಹನಿಗಳನ್ನು ಕಣ್ಣಿಗೆ ಹಾಕಿಕೊಳ್ಳುವುದರಿಂದ ಕಣ್ಣು ಕೆಂಪಾಗುವ ತೊಂದರೆ ದೂರವಾಗುತ್ತದೆ.

- ಒಂದು ಸಣ್ಣ ಬಕೇಟ್ನಲ್ಲಿ ನೀರು ತುಂಬಿ ಮುಖವನ್ನು ನೀರಿನಲ್ಲಿ ಮುಳುಗಿಸಿ 5ರಿಂದ 10 ಸೆಕೆಂಡುಗಳ ಕಾಲ ನೀರಿನಲ್ಲಿ ಕಣ್ಣನ್ನು ತೆರೆಯುವುದರಿಂದ ಕಣ್ಣಿನಲ್ಲಿರುವ ಕೆಟ್ಟ ಹೋಗಿ ಕಣ್ಣು ಸ್ವಚ್ಛವಾಗುತ್ತದೆ.

- ಸೌತೆಕಾಯಿಯನ್ನು 5 ನಿಮಿಷ Fridgeನಲ್ಲಿ ಅಥವಾ ನೀರಿನಲ್ಲಿ ಮುಳುಗಿಸಿ ಇಡಿ ನಂತರ ಹೊರತೆಗೆದು ಸೌತೆಕಾಯಿಯನ್ನು ಕತ್ತರಿಸಿ ನಿಮ್ಮ ಕಣ್ಣುಗಳ ಮೇಲೆ 15ರಿಂದ 30 ನಿಮಿಷ ಇಟ್ಟುಕೊಳ್ಳುವುದರಿಂದ ಕಣ್ಣಿನ ಉರಿ ದೂರಾಗುತ್ತದೆ.

- ತಾಯಿಯ ಎದೆ ಹಾಲು ಕೂಡ ಕಣ್ಣಿನ ನೋವಿಗೆ ಸಂಜೀವಿನಿ.


ಕೆಲವು ಊಟದಲ್ಲಿ ಬದಲಾವಣೆ ಮಾಡುವುದರಿಂದ ಹಲವಾರು ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಅವುಗಳೆಂದರೆ - ಕಣ್ಣಿನ ಸಮಸ್ಯೆಗೆ ಪರಿಹಾರ

- ಊಟ ಮಾಡುವಾಗ ಈರುಳ್ಳಿಯನ್ನು ಜೊತೆಯಲ್ಲಿ ನೆಂಚಿಕೊಂಡು ತಿನ್ನುವುದರಿಂದ ಕಣ್ಣಿನಲ್ಲಿ ಯಾವುದೇ ನೋವಿನ ಸಮಸ್ಯೆಯನ್ನು ಕಡಿಮೆ ಮಾಡಿಬಿಡುತ್ತದೆ.

- ಹೆಚ್ಚಾಗಿ ನೆಲ್ಲಿಕಾಯಿ ಬಳಕೆ ಮಾಡುವುದರಿಂದ ಕಣ್ಣಿನ ದೋಷ ಉಂಟಾಗುವುದಿಲ್ಲ.

- ಆದಷ್ಟು ಅನಾನಸ್ ಹಣ್ಣನ್ನು ತಿನ್ನುವುದರಿಂದ ಕಣ್ಣಿನ ಬಾದೆ ಬರುವುದಿಲ್ಲ.

ನೀವು ಮೇಲೆ ಸೂಚಿಸಿದ ಯಾವುದೇ ಪರಿಹಾರ ನೀವು ಮನೆಯಲ್ಲಿ ಟ್ರೈ ಮಾಡಬಹುದು ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಹಾಗೂ ಕಣ್ಣಿನ ಸಮಸ್ಯೆಗೆ ಪರಿಹಾರ ಇವೆಲ್ಲ ಪ್ರಯತ್ನಿಸಿದ ನಂತರವೂ ಕೂಡ ನಿಮ್ಮ ಸಮಸ್ಯೆ ಕಡಿಮೆಯಾಗದಿದ್ದರೆ ನೇತ್ರ ಚಿಕಿತ್ಸಕರನ್ನು ಸಂಪರ್ಕಿಸಿ.