ಶ್ರುತಿಹಾಸನ್ ನ ಲಿಪ್ ಲಾಕ್ ಮಾಡಿದ ಸಂಚಿತ್ ಹೆಗಡೆ

ಕನ್ನಡದ ಸರಿಗಮಪ  ರನ್ನರ್-ಅಪ್ ಆಗಿದ್ದ ಸಂಚಿತ್ ಹೆಗಡೆ ತಮ್ಮ ಗಾಯನದ ಮೂಲಕ ಕರ್ನಾಟಕದಲ್ಲಿ ಹೆಸರುವಾಸಿಯಾಗಿದ್ದಾರೆ, ಈಗ ತಮ್ಮ ಮೂಲ ವೃತ್ತಿ ಗಾಯನದಿಂದ ಬಡ್ತಿ ಪಡೆದ ಇವರು ತೆಲುಗು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾದ ಟೀಸರ್ ನಲ್ಲಿ ಇವರು ಶೃತಿಹಾಸನ್ ಜೊತೆ ಲಿಪ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇವರು ತಮ್ಮ ಗಾಯನದ ಮೂಲಕ ಜನರನ್ನು ಮೋಡಿ ಮಾಡಿದ್ದರು ಈಗ ಅಭಿಮಾನಿಗಳು ಈ ವಿಡಿಯೋ ನೋಡಿ ಹೌಹಾರಿದ್ದಾರೆ. ಈ ಸಿನಿಮಾದಲ್ಲಿ ಸಂಚಿತ್ ಹೆಗಡೆ ಪ್ರಥಮಬಾರಿ ನಟನೆ ಮಾಡುತ್ತಿದ್ದಾರೆ ಹಾಗೂ ಖ್ಯಾತ ನಟಿ ಜೊತೆ ನಟಿಸಿದ್ದಾರೆ. ಪಿಟ್ಟ ಕತಲು ಸಿನಿಮಾವನ್ನು ನಾಲ್ಕು ಡೈರೆಕ್ಟರ್ ಗಳು ನಿರ್ದೇಶಿಸಿದ್ದು 19ರಂದು ಪ್ಲಾಟ್ ಫಾರ್ಮ್ ನಲ್ಲಿ ತೆರೆಕಾಣಲಿದೆ. ಸಂಜಿತ್ ಹೆಗಡೆ ತಮ್ಮ ಎರಡನೇ ಇನ್ನಿಂಗ್ಸ್ ಶುರು ಮಾಡಿರುವ ಕಾರಣ ಅವರು ತಮ್ಮ ಹಾದಿಯಲ್ಲಿ ಯಶಸ್ವಿಗೊಳ್ಳಲಿ ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.