ಪವಾಡ, ಮಂತ್ರ-ತಂತ್ರ ಧಾರ್ಮಿಕ ವಸ್ತುಗಳ ಮಾರಾಟದ ಜಾಹೀರಾತುಗಳಿಗೆ ಬಾಂಬೆ ಹೈಕೋರ್ಟ್ ವಿಧಿಸಿದೆ ನಿಷೇಧ, ಟಿವಿ ಚಾನಲ್ ಗಳು ಸಹ ಈ ರೀತಿಯ ಅಡ್ವರ್ಟೈಸ್ ಗಳನ್ನು ಪ್ರದರ್ಶಿಸುತ್ತಿದ್ದು ಇದು ಕಾನೂನು ಬಾಹಿರ ಎಂದು ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿಗಳಾದ ಮುಕುಂದ್ ಸೆವಲಿಕರ್ ರವರು ಹಾಗೂ ಅವರನ್ನು ಒಳಗೊಂಡಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ.
ಈ ತರಹದ ಜಾಹಿರಾತುಗಳನ್ನು ಹಾಕುವವರನ್ನ ಪತ್ತೆಹಚ್ಚಿ ಪ್ರಕರಣ ದಾಖಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಪೀಠವು ಸೂಚಿಸಿದೆ. ಯಂತ್ರ, ತಂತ್ರ, ಮಂತ್ರ ಇತ್ಯಾದಿ ವಸ್ತುಗಳ ಮಾರಾಟವನ್ನು ರದ್ದು ಪಡಿಸಬೇಕೆಂದು ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು ಇದನ್ನು ಮನಗಂಡ ನ್ಯಾಯಾಧೀಶರು ಹಾಗೂ ಅವರ ತಂಡ ಈ ರೀತಿಯ ಜಾಹೀರಾತುಗಳನ್ನು ಪ್ರದರ್ಶಿಸುವುದು ತಪ್ಪು ಹಾಗೂ ಕಾನೂನು ಬಾಹಿರ ಎಂದು ಸೂಚಿಸಿದ್ದಾರೆ.
ಕೆಲವು ಜನರು ಯಂತ್ರ, ತಂತ್ರ, ಮಂತ್ರ ವನ್ನು ಮನೆಗೆ ತಂದರೆ ಸ್ವತo ಭಗವಂತನು ಮನೆಗೆ ಬಂದಂತೆ ಹಾಗೂ ನಿಮ್ಮೆಲ್ಲಾ ಕಷ್ಟಗಳು ದೂರಾಗುತ್ತವೆ ಎಂದು ಜಾಹೀರಾತಿನಲ್ಲಿ ಪ್ರಕಟಿಸುತ್ತಿದ್ದಾರೆ.
ಈ ರೀತಿಯ ಯಂತ್ರ, ತಂತ್ರಗಳನ್ನು ಕೆಲವು ಸೆಲೆಬ್ರಿಟಿಗಳು ಸಹ ಬಳಸಿ ಪ್ರಯೋಜನ ಪಡೆದಿದ್ದಾರೆ ಎಂದು ಜಾಹೀರಾತಿನಲ್ಲಿ ತಿಳಿಸುತ್ತಿದ್ದಾರೆ ಇದು ಸರಿಯಲ್ಲ ಎಂದು ಅರ್ಜಿದಾರರು ದೂರಿದ್ದರು. ಇದನ್ನು ಮನಗಂಡ ಬಾಂಬೆ ಹೈಕೋರ್ಟ್ ಈ ರೀತಿಯ ಜಾಹೀರಾತುಗಳಿಗೆ ನಿಷೇಧವನ್ನು ವಿಧಿಸಿದೆ.