ಮದುವೆ ಗಂಡು ಛತ್ರದಿಂದ ಪರಾರಿ, ಮಧು ಮಗಳನ್ನು ಕೈಹಿಡಿದ ಬಿಎಂಟಿಸಿ ಕಂಡಕ್ಟರ್

ದಿಗ್ಬ್ರಮೆ ಗೊಂಡಿದ್ದ ಮದುಮಗಳನ್ನು ಎಲ್ಲರ ಸಮ್ಮುಖದಲ್ಲಿ ಅಚಾನಕ್ಕಾಗಿ ಕೈಹಿಡಿದು ಮೆಚ್ಚುಗೆಗೆ ಪಾತ್ರವಾದ ಬಿಎಂಟಿಸಿ ಕಂಡಕ್ಟರ್. ರಾತ್ರಿಯ ರಿಸೆಪ್ಷನ್ ಗೆ ಅದ್ದೂರಿ ತಯಾರಾಗಿ ಮಿಂಚುತ್ತಿದ್ದ ಮದುವೆ ಗಂಡು ಬೆಳಗಾಗುವುದರಲ್ಲಿ ಛತ್ರದಿಂದ ನಾಪತ್ತೆಯಾದ ಘಟನೆ ಚಿಕ್ಕಮಂಗಳೂರಿನ ತರೀಕೆರೆ ತಾಲೂಕಿನಲ್ಲಿ ವರದಿಯಾಗಿದೆ. ವರ ಇಲ್ಲದ ಕಾರಣ ಛತ್ರದಲ್ಲಿ ನೋಡಿ, ಮೆಚ್ಚಿ ಮದುವೆಯಾದ ಬಿಎಂಟಿಸಿ ಕಂಡಕ್ಟರ್ ಚಂದ್ರು.

ನಾಪತ್ತೆಯಾದ ವರ ನವೀನ್ ಎಂದು ತಿಳಿದು ಬಂದಿದೆ. ವರ ನವೀನ್ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದ. ಪ್ರೀತಿಸಿದ ಹುಡುಗಿ ರಾತ್ರಿ ಫೋನ್ ಮಾಡಿ ನೀನು ನನ್ನನ್ನು ಪ್ರೀತಿಸಿ ಬೇರೆ ಹುಡುಗಿಯನ್ನು ಮದುವೆಯಾಗುತ್ತೀಯಾ ಈ ಮದುವೆಯನ್ನು ನಾನು ಛತ್ರಕ್ಕೆ ಬಂದು ತಡೆಯುತ್ತೇನೆ ಎಂದು ಹುಡುಗಿ ಎದುರಿಸಿದ್ದಾಳೆ. ಮರ್ಯಾದೆಗೆ ಅಂಜಿದ ನವೀನ್ ಹುಡುಗಿಯನ್ನು ತುಮಕೂರಿಗೆ ಬರಲು ತಿಳಿಸಿದ್ದ. ಆತ ತುಮಕೂರಿಗೆ ಬರೆದೆ ಬೆಂಗಳೂರಿಗೆ ಪರಾರಿಯಾಗಿದ್ದ. ಈ ವಿಷಯ ತಿಳಿದ ಹುಡುಗಿ ಪೋಷಕರು ಛತ್ರದಲ್ಲಿದ್ದ ಬಿಎಂಟಿಸಿ ಕಂಡಕ್ಟರ್ ಗೆ ಮಗಳನ್ನು ಧಾರೆಯೆರೆದಿದ್ದಾರೆ.