ಉಮಾಶ್ರೀ ಅವರ ಕಾರು ಅಪಘಾತ ! ಇಬ್ಬರು ಸ್ಥಳದಲ್ಲೇ ಸಾವು! ಆ ಸ್ಥಳದಲ್ಲಿ ಆಗಿದ್ದೇನು ಗೊತ್ತಾ

ನವೆಂಬರ್ 20 ಮಧ್ಯರಾತ್ರಿ ಶುಕ್ರವಾರ ಗದಗದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಉಮಾಶ್ರೀ ಅವರ ಇನೋವಾ ಕಾರು ಹಾಗೂ ಹುಬ್ಬಳ್ಳಿಯಿಂದ ಗದಗ ಗೆ  ಹೋಗುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಇನ್ನಿಬ್ಬರಿಗೆ ಗಾಯಗಳಾಗಿವೆ.

ಉಮಾಶ್ರೀ ಅವರನ್ನು ಬಿಟ್ಟು ಡ್ರೈವರ್ ಮಾತ್ರ ವಾಪಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಸ್ಥಳದಲ್ಲಿ ಸತ್ತಿರುವ ಮಹಿಳೆಯನ್ನು ಧಾರವಾಡದ ಸ್ಮಿತಾ ಎಂದು ಪತ್ತೆಹಚ್ಚಲಾಗಿದೆ, ಮತ್ತೊಬ್ಬ ಯಾರೆಂದು ತಿಳಿದುಬಂದಿಲ್ಲ. ಗಂಭೀರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಅಪಘಾತದಲ್ಲಿ ಉಮಾಶ್ರೀ ಅವರಿಗೆ ಏನು ಆಗಿಲ್ಲ ಏಕೆಂದರೆ ಅವರನ್ನು ಕಾರಿನ ಚಾಲಕ ಮೊದಲೇ ಹುಬ್ಬಳ್ಳಿಯಲ್ಲಿ ಬಿಟ್ಟು ಬಂದಿದ್ದ.

ಉಮಾಶ್ರೀಯವರನ್ನು ಊರಿಗೆ ಬಿಟ್ಟ ಚಾಲಕ ತನ್ನ ಕೆಲಸಕ್ಕೆ ಹೊರಟಿದ್ದ ವೇಳೆ ಈ ಘಟನೆ ನಡೆದಿದ್ದು ಸಾವನ್ನಪ್ಪಿದವರು ಮತ್ತು ಗಾಯಾಳುಗಳು ಇಬ್ಬರೂ ಕೂಡ ಬಲೆನೋ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ಶುರು ಮಾಡಿದ್ದಾರೆ, ತನಿಖೆಯ ನಂತರ ಈ ಘಟನೆಯ ಬಗ್ಗೆ ಇನ್ನಷ್ಟು ವಿಷಯಗಳು ಹೊರಬರಲಿವೆ.

ಈ ಘಟನೆ ಆದನಂತರ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಸುಳ್ಳು ಮಾಹಿತಿಗಳು ಹರಿದಾಡುತ್ತಿದ್ದು ಉಮಾಶ್ರೀಯವರಿಗೆ ಏನೋ ಆಗಿಬಿಟ್ಟಿದೆ ಎಂದು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಆದರೆ ಉಮಾಶ್ರೀ  ಅವರಿಗೆ ಏನು ಆಗಿಲ್ಲ ಆರಾಮವಾಗಿದ್ದಾರೆ.