ಸತ್ಯ ಧಾರಾವಾಹಿಯ ಈ ನಟಿ ಯಾರು ಗೊತ್ತಾ! ನೋಡಿದ್ರೆ ಬೆರಗಾಗ್ತೀರಾ ಇವರ ನಿಜ ಜೀವನ

ಕನ್ನಡದಲ್ಲಿ ಇತ್ತೀಚಿಗೆ ಹಲವಾರು ಹೊಸ ಧಾರಾವಾಹಿಗಳು ಶುರುವಾಗಿವೆ, ಅದೇ ರೀತಿ ಶುರುವಾಗಿ ಜನರಿಗೆ ಇಷ್ಟವಾಗಿರುವ ಧಾರಾವಾಹಿಗಳಲ್ಲಿ ಒಂದು ಸತ್ಯ, ಜೀ ಕನ್ನಡ ವಾಹಿನಿಯಲ್ಲಿ ಇದು ಪ್ರತಿನಿತ್ಯ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿದೆ.

ಇದು ಮಹಿಳಾ ಪ್ರಧಾನ ಧಾರಾವಾಹಿಯಾಗಿದ್ದು ಅನ್ಯಾಯದ ವಿರುದ್ಧ ಒಬ್ಬ ಹುಡುಗಿಯು ಸಿಡಿದೇಳುತ್ತಾಳೆ. ಈ ಧಾರಾವಾಹಿ ಉಳಿದೆಲ್ಲ ಧಾರಾವಾಹಿಗಳಿಗಿಂತ ಭಿನ್ನವಾಗಿದೆ ಏಕೆಂದರೆ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಸತ್ಯ ಎಂಬ ಮಹಿಳೆ ಇದ್ದು ಸತ್ಯ ಹುಡುಗರಂತೆ ಬಟ್ಟೆ ಧರಿಸುತ್ತಾಳೆ ಹಾಗೂ ಹೇರ್ ಸ್ಟೈಲ್ ಕೂಡ ಹುಡುಗರ ಹಾಗೆ ಹೊಂದಿದ್ದಾಳೆ, ಹಾಗೆ ಹೊರಗಡೆ ದುಡಿದು ಮನೆ ನೋಡಿಕೊಳ್ಳುತ್ತಾಳೆ. ಇತ್ತೀಚಿಗಷ್ಟೇ ಶುರುವಾದ ಧಾರಾವಾಹಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಹಾಗೂ ಉತ್ತಮ TRP ಕೂಡ ಗಳಿಸಿದೆ.

ಸತ್ಯ ಧಾರವಾಹಿಯಲ್ಲಿ ಹಲವಾರು ಹಿರಿಯರು ನಟಿಸಿದ್ದು ಅವರ ಪಟ್ಟಿ ಈ ಕೆಳಗಿನಂತಿದೆ ಅಭಿಜಿತ್, ಶ್ರೀನಿವಾಸ ಮೂರ್ತಿ, ಗಿರಿಜಾ ಲೊಕೇಶ್,  ಬಿಗ್ ಬಾಸ್ ಫೇಮ್ ಪ್ರಿಯಾಂಕ ಸೇರಿದಂತೆ ಈ ಧಾರಾವಾಹಿಯ ಪಾತ್ರದಾರಿಗಳ ತಾರಾಗಣ ಬಹಳ ಸ್ಟ್ರಾಂಗ್ ಆಗಿದ್ದು ಇನ್ನು ಸತ್ಯ ಪಾತ್ರಧಾರಿಯಾಗಿ ಗೌತಮಿ ಹಾಗೂ ನಾಯಕನ ಪಾತ್ರದಲ್ಲಿ ಸಾಗರ್ ನಡೆಸುತ್ತಿದ್ದಾರೆ.

ಸತ್ಯ ಪಾತ್ರಧಾರಿಯಾಗಿರುವ ನಟಿ ಗೌತಮಿ ಅವರು ನಿಜ ಜೀವನದಲ್ಲಿ ಹೇಗಿದ್ದಾರೆ ಏ0ದು ಕೆಳಗೆ ಓದಿ ತಿಳಿಯಿರಿ.

ನಟಿ ಗೌತಮಿ 2012ರ ನಾಗರಪಂಚಮಿ ಧಾರಾವಾಹಿಯ ಮೂಲಕ ಕಿರುತೆರೆ ಎಂಟ್ರಿಯಾಗಿದ್ದರು ನಂತರ ಕೆಲವು ಸಿನಿಮಾಗಳಲ್ಲೂ ಕೂಡ ನಟಿಸಿದ್ದರು, ತಮಿಳು ಕನ್ನಡ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಗೌತಮಿ  ಅವರು ತಮ್ಮ ಎರಡನೇ ಇನ್ನಿಂಗ್ಸನ್ನು ಸತ್ಯ ಧಾರವಾಹಿ ಮೂಲಕ ಶುರುಮಾಡಿದ್ದಾರೆ ಹಾಗೂ ಪಾತ್ರ ತೃಪ್ತಿತಂದಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.