ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನ 2016 ರ ವಿನ್ನರ್ ಆದ ಪ್ರಥಮ್ ನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಿರುವ ಶೋ ಬಿಗ್ ಬಾಸ್, ಒಳ್ಳೆ ಹುಡುಗ ಪ್ರಥಮ್ ಎಂದೇ ಹೆಸರುವಾಸಿಯಾದ ಆರನೇ ಆವೃತ್ತಿ ಬಿಗ್ ಬಾಸ್ ವಿನ್ನರ್ ತನಗೆ ಬಂದ ಹಣವನ್ನೆಲ್ಲ ದಾನ ಮಾಡಿದರು.
ಇದಾದ ನಂತರ ಪ್ರಥಮ ಅವರಿಗೆ ಬೇರೆ ಬೇರೆ ಫಿಲ್ಮ್ ನಲ್ಲಿ ಆಕ್ಟ್ ಮಾಡುವ ಅವಕಾಶ ಕೂಡ ಒದಗಿಬಂದವು ಆದರೆ ಕಳೆದ ವಾರ ಪ್ರಥಮ ಅವರ ಜೀವನದಲ್ಲಿ ತುಂಬಲಾರದ ಘಟನೆ ಒಂದು ನಡೆದಿದೆ ಪ್ರಥಮ್ ಅವರ ಮನೆಯಲ್ಲಿ ಕಳೆದ 15 ದಿನದಲ್ಲಿ 2 ಸಾವು ಸಂಭವಿಸಿದೆ.ಕಳೆದವಾರ ಪ್ರಥಮ್ ಅವರ ಅಜ್ಜಿಗೆ ತುಂಬಾ ಹುಷಾರಿಲ್ಲದ ಕಾರಣ ಅವರನ್ನು ಮೈಸೂರಿನ ಹೆಸರಾಂತ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಆದರೆ ಆಸ್ಪತ್ರೆಯ ವೈದ್ಯ ಸಿಬ್ಬಂದಿ ಅವರಿಂದ ದುಡ್ಡು ಕಟ್ಟಿಸಿಕೊಂಡು ಯಾವುದೇ ಸರಿಯಾದ ಸೌಲಭ್ಯ ನೀಡದೆ ಹೊರಹಾಕಿದ್ದಾರೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕದ ಕಾರಣ ಪ್ರಥಮ ಅವರ ಅಜ್ಜಿ ಕಳೆದವಾರ ಮರಣಹೊಂದಿದ್ದಾರೆ. ಈ ಕಾರಣದಿಂದಾಗಿ ಪ್ರಥಮ ಅವರಿಗೆ ತುಂಬಾ ನೋವಾಗಿದೆ ಹಾಗೂ ಅವರು ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ನಮ್ಮಜ್ಜಿಯ ಸಾವಿಗೆ ಕಾರಣ ಎಂದು ಹರಿಹಾಯ್ದಿದ್ದಾರೆ.
ಈ ಕುರಿತು ಪ್ರಥಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ ನಮ್ಮಜ್ಜಿಯ ಸಾವಿಗೆ ಕಾರಣರಾದ ಡಾಕ್ಟರ್ ಮತ್ತು ಹಾಸ್ಪಿಟಲ್ ಅನ್ನು ಜೀವರಕ್ಷಕ ರು ಎಂದು ಕರೆಯುವುದಕ್ಕೆ ನನಗೆ ನಾಚಿಕೆಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ದುಡ್ಡನ್ನು ಕಟ್ಟಿಸಿಕೊಂಡು ನಮ್ಮಜ್ಜಿಗೆ ಸರಿಯಾದ ಚಿಕಿತ್ಸೆ ನೀಡದೆ ನಮ್ಮ ಅಜ್ಜಿಯನ್ನು ಕೊಂದು ಬಿಟ್ಟರು, ಇನ್ನು ಮುಂದೆ ನನ್ನ ಜೀವನದಲ್ಲಿ ಯಾರಿಗೂ ಸಹ ಸಹಾಯ ಮಾಡುವುದಿಲ್ಲ ಹಾಗೂ ಒಂದು ಹನಿ ನೀರನ್ನು ಸಹ ಕೊಡುವುದಿಲ್ಲ ಎಂದು ಹರಿಹಾಯ್ದಿದ್ದಾರೆ.